ಮೋದಿ ಓಟ ನಿಲ್ಲಿಸಲು ಜೆಡಿಎಸ್ ನಿಂದ ಮಾತ್ರ ಸಾಧ್ಯ ,ನಮ್ಮ ಸರ್ಕಾರಕ್ಕೆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದವಿದೆ :ಸಿಎಂ ಕುಮಾರಸ್ವಾಮಿ..

Featured, ಜಿಲ್ಲೆ

ಮೈಸೂರು :ಮೈಸೂರಿನ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಓಟವನ್ನು ನಿಲ್ಲಿಸಲು ಜೆಡಿಎಸ್ ನಿಂದ ಮಾತ್ರ ಸಾಧ್ಯ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. ರಾಜ್ಯದ ಎಲ್ಲಾ 28ಕ್ಕೆ 28ಸ್ಥಾನಗಳನ್ನೂ ಜೆಡಿಎಸ್ ಗೆಲ್ಲಿಸುವಂತಹ ಕೆಲಸ ಮಾಡಬೇಕು.

ಬಿಜೆಪಿಯವರು ನಮ್ಮ ಸರ್ಕಾರಕ್ಕೆ ಹಲವಾರು ಬಾರಿ ಡೆಡ್‌ಲೈನ್ ನೀಡಿದ್ದರು. ಆದರೆ ಯಾವುದೇ ಡೆಡ್ ಲೈನ್‌ನಲ್ಲೂ ಸರ್ಕಾರ ಬೀಳಲಿಲ್ಲ. ನಮ್ಮ ಸರ್ಕಾರಕ್ಕೆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದವಿದೆ ಎಂದರು…

ಜೆಡಿಎಸ್ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ, ನಮ್ಮ ಸರ್ಕಾರ 5 ವರ್ಷ ಸುಭದ್ರವಾಗಿರುತ್ತದೆ ಎಂದು ಮೈಸೂರಿನ ಜೆಡಿಎಸ್ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು..

ಮೋದಿ ರಫೇಲ್ ಹಗರಣದ ಪ್ರಕರಣ ಎದುರಿಸುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಕಾಲದಲ್ಲಿ ಇಂತಹ ಯಾವುದೇ ಪ್ರಕರಣಗಳಿರಲಿಲ್ಲ.ಕಡಿಮೆ ಅವಧಿಯಲ್ಲೂ ಉತ್ತಮ ಅಡಳಿವನ್ನು ಮಾಜಿ ಪ್ರಧಾನಿ ದೇವೇಗೌಡರು ನೀಡಿದರು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.