ಮೋದಿ ನೇತೃತ್ವದ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಮತ್ತೊಂದು ಕ್ವಿಟ್ ಇಂಡಿಯಾ ಚಳುವಳಿ ಅಗತ್ಯ : ಮಮತಾ ಬ್ಯಾನರ್ಜಿ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಮತ್ತೊಂದು ಕ್ವಿಟ್ ಇಂಡಿಯಾ ರೀತಿಯ ಚಳುವಳಿ ಅಗತ್ಯವೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಹೇಳಿದ್ದಾರೆ.

ಈ ಕುರಿತು ಡೆಬ್ರಾದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಮಮತಾ, ‘ಯಾರಾದರೂ ಒಬ್ಬರು ಬೆಕ್ಕಿಗೆ ಗಂಟೆಯನ್ನು ಕಟ್ಟಬೇಕಾಗಿದೆ. 1942 ರಲ್ಲಿ, ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿಯನ್ನು ಪ್ರಾರಂಭಿಸಿದಂತೆ, ಈಗ ಫ್ಯಾಸಿಸ್ಟ್ ಮೋದಿಯವರನ್ನು ಅಧಿಕಾರದಿಂದ ಕಿತ್ತೊಗೆಯಲು ನಾವು ಹೋರಾಡುತ್ತಿದ್ದೇವೆ. ‘ದೇಶದಲ್ಲಿ ತುರ್ತುಪರಿಸ್ಥಿತಿ ಇದೆ. ಸಾರ್ವಜನಿಕವಾಗಿ ಮಾತನಾಡಲು ಈಗ ಜನರು ಹೆದರುತ್ತಿದ್ದಾರೆ. ಆದ್ದರಿಂದ ಈ ಫ್ಯಾಸಿಸಂ ಮತ್ತು ಭಯೋತ್ಪಾದನೆಗೆ ತಡೆಯೊಡ್ಡಬೇಕಾಗಿದೆ’ ಎಂದು ಮಮತಾ ಬ್ಯಾನರ್ಜೀ ಹೇಳಿದರು.

ಇತ್ತೀಚಿಗೆ ಪ್ರಧಾನಿ ಮೋದಿ ಬಂಗಾಳದ ರ್ಯಾಲಿಯಲ್ಲಿ, ಬಂಗಾಳದ ಟ್ರಿಪಲ್ ಟಿ-ತೃಣಮೂಲ,ತೊಲಾಬಾಜಿ, ಟ್ಯಾಕ್ಸ್ ‘ಎಂದು ಹೇಳಿ ಮಮತಾ ವಿರುದ್ಧ ವಾಗ್ದಾಳಿ ನಡೆಸಿದ್ದರು.