ಮೋದಿ ಬಗ್ಗೆ ಮಾತನಾಡುವವರು ಆಕಾಶಕ್ಕೆ ಉಗುಳಿದಂತೆ : ಪ್ರತಾಪ್ ಸಿಂಹ -Vishwanews24
ಮೈಸೂರು : ಮೋದಿ ಬಗ್ಗೆ ಮಾತನಾಡುವವರು ಆಕಾಶಕ್ಕೆ ಉಗುಳಿದಂತೆ, ಆಕಾಶಕ್ಕೆ ಉಗುಳಿದ್ರೆ ಅದು ಅವರ ಮೇಲೆಯೇ ಬಿಳುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಮೋದಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ರಾಜ್ಯದ ಸಂಸದ ಬಗ್ಗೆ ಮಾತನಾಡುತ್ತಿದ್ದರು, ಈಗ ಮೋದಿ ಬಗ್ಗೆ ಮಾತನಾಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. 17 ಸಂಸದರು ಕಳೆದ ಬಾರಿ ಇದ್ದರು.ಕಾವೇರಿ, ಮಹದಾಯಿ ವಿಚಾರದಲ್ಲಿ ಏನು ಮಾಡಿದ್ರು ಇವರಿಗೆ ಮಾತನಾಡಲು ಧೈರ್ಯ ಇಲ್ಲವಾ ಎಂದು ಕಿಡಿಕಾರಿದ್ದಾರೆ.
ಈ ಬಾರಿ 17 ರ ಜೊತೆಗೆ ಇನ್ನು 8 ಮಂದಿ ಹೆಚ್ಚು ಬಿಜೆಪಿ ಸಂಸದರನ್ನು ಆಯ್ಕೆ ಮಾಡಿದ್ದಾರೆ. ಅದರ ಅರ್ಥ ಕಳೆದ ಅವಧಿಯಲ್ಲಿ ಬಿಜೆಪಿ ಸಂಸದರು ಕೆಲಸ ಮಾಡಿದ್ದಾರೆ ಅಂತಾನೇ ಅರ್ಥ.ಮೋದಿ ಟ್ವಿಟ್ ಮಾಡಲಿಲ್ಲ ಅಂತಾರೆ. ಆದ್ರೆ ಮೋದಿ ಅಮಿತ್ ಷಾರನ್ನು ಕಳುಹಿಸಿದ್ದು ನಿಮಗೆ ಕಾಣೋದಿಲ್ಲವೇ.ಮೋದಿ ಬಗ್ಗೆ ಮಾತನಾಡೋಕೆ ಸಂಸದರಿಗೆ ಧೈರ್ಯ ಇಲ್ಲವಾ ಅಂತಾರೆ. ಕೆಲಸ ಮಾಡೋಕೆ ಧೈರ್ಯ ಯಾಕೇ ಬೇಕು. ಪದಬಳಕೆ, ಶಬ್ದ ಬಳಕೆ ಮಾಡಿ ಟೀಕಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.
