ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಉಡುಪಿಯಲ್ಲಿ ಬ್ರಹ್ಮರಥೋತ್ಸವ ಹರಕೆ ;ಜೈಕಾರ ಹಾಕುತ್ತಾ ಬ್ರಹ್ಮರಥ ಎಳೆದ ಯುವಕರು – Vishwanews24
ಉಡುಪಿ:ಉಡುಪಿಯ ಸುಮಾರು 10 ಮಂದಿ ಪ್ರಧಾನಿ ಮೋದಿ ಅಭಿಮಾನಿಗಳು ಪ್ರಧಾನಿ ಮೋದಿ ಮುಂದಿನ ಅವಧಿಗೂ ಪ್ರಧಾನಿಯಾಗಲಿ ಎಂದು ಬ್ರಹ್ಮರಥೋತ್ವವದ ಹರಕೆ ಹೊತ್ತಿದ್ದಾರೆ. ಅದರಂತೆ ಅಷ್ಟಮಠಗಳ ರಥಬೀದಿಯಲ್ಲಿ ಬ್ರಹ್ಮರಥೋತ್ಸವ ಸೇವೆ ನೀಡಿದ್ದಾರೆ.
ಮೋದಿ ತನಗಾಗಿ ಅಥವಾ ತನ್ನ ಕುಟುಂಬಕ್ಕಾಗಿ ಹಗಲು ರಾತ್ರಿ ದುಡಿಯುತ್ತಿಲ್ಲ. ದೇಶದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರು ಮತ್ತೆ ಪ್ರಧಾನಿಯಾದರೆ ಭಾರತದ ಭವಿಷ್ಯ ಉಜ್ವಲವಾಗುತ್ತದೆ. ಈ ಕಾರಣಕ್ಕಾಗಿ ನಮ್ಮದೊಂದು ಪುಟ್ಟ ಸೇವೆ. ಭಗವಂತನ ಆಶೀರ್ವಾದ ಅವರ ಮೇಲಿರಲಿ ಎಂಬ ಕಾರಣಕ್ಕೆ ಬ್ರಹ್ಮರಥೋತ್ಸವ ಸೇವೆ ನೀಡಿದ್ದೇವೆ ಎಂದು ಹರಕೆ ಹೊತ್ತ ತಂಡದ ಸದಸ್ಯ ಅನಿರುದ್ಧ್ ಐತಾಳ್ ಹೇಳಿದರು.
ಪ್ರಧಾನಿ ಮೋದಿ ಮುಂದಿನ ಅವಧಿಗೂ ಪ್ರಧಾನಿಯಾಗಲಿ ಎಂದು ಸುಮಾರು 10 ಮಂದಿ ಪ್ರಧಾನಿ ಮೋದಿ ಅಭಿಮಾನಿಗಳು ಉಡುಪಿಯಲ್ಲಿ ಬ್ರಹ್ಮರಥೋತ್ಸವದ ಹರಕೆ ಹೊತ್ತಿದ್ದರು. ಅದರಂತೆ ಅಷ್ಟಮಠಗಳ ರಥಬೀದಿಯಲ್ಲಿ ಬ್ರಹ್ಮರಥೋತ್ಸವ ಸೇವೆಯನ್ನು ದೇವರಿಗೆ ಅರ್ಪಿಸಿದ್ದಾರೆ.

