Featured

ಮೋದಿ ಮೇಕಪ್ ,ವ್ಯಾಕ್ಸ್​ , ಮಾಡಿ ತಿರುಗಿದ್ರೆ ನಾನು ದಿನಕ್ಕೊಂದು ಭಾರಿ ಸ್ನಾನ ಮಾಡುವವ: ಕುಮಾರಸ್ವಾಮಿ

ಉಡುಪಿ: ಬಿಜೆಪಿಯವರ ಪ್ರಚಾರಕ್ಕೆ ಮೋದಿಯೇ ಮುಖ. ಅವರು ಇಲ್ಲದಿದ್ದರೆ ದೇಶಕ್ಕೆ ರಕ್ಷಣೆಯೇ ಇಲ್ಲ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಉಡುಪಿ ಮಂಗಳೂರಿನ ಜನರು ತುಂಬ ತಿಳಿವಳಿಕೆ ಇರುವವರು, ನೀವೇಕೆ ಮೋದಿಯನ್ನು ಬೆಂಬಲಿಸುತ್ತೀರಿ ಎಂದು ಎಚ್​.ಡಿ.ಕುಮಾರಸ್ವಾಮಿ ಹೇಳಿದರು.

ಪ್ರಚಾರ ಸಭೆಯಲ್ಲಿ ಮಾತನಾಡಿ, ನಿಮಗೂ ಮೋದಿ ಮುಖವೇ ಇಷ್ಟವಾಗುತ್ತದೆ. ಮೋದಿಯವರು ಬೆಳಗ್ಗೆ ಹೊರಡುವಾಗ ವ್ಯಾಕ್ಸ್​ ಮಾಡಿಸಿಕೊಳ್ಳುತ್ತಾರೆ. ಮುಖ ಪಳಪಳ ಹೊಳೆಯುವಂತೆ ಮಾಡಿಕೊಳ್ಳುತ್ತಾರೆ. ಆದರೆ ನಾವು ಬಿಸಿಲು, ಮಳೆಯಲ್ಲಿ ಓಡಾಡುತ್ತೇವೆ. ಇವತ್ತು ಮುಖ ತೊಳೆದರೆ ಮತ್ತೆ ನಾಳೆನೇ ತೊಳೆಯೋದು. ಹಾಗಾಗಿ ನಾನು ನಿಮಗೆ ಇಷ್ಟವಾಗೋದಿಲ್ಲ, ಮೋದಿಯವರೇ ಇಷ್ಟವಾಗುತ್ತಾರೆ ಎಂದು ವ್ಯಂಗ್ಯವಾಗಿ ಹೇಳಿದರು.

ಇತ್ತೀಚೆಗೆ ಒಂದು ಶೋಕಿ ಶುರುವಾಗಿದೆ. ನಾವೆಲ್ಲ ರಸ್ತೆಯಲ್ಲಿ ಹೋಗುತ್ತಿದ್ದರೆ ಯುವಕರು ಮೋದಿ, ಮೋದಿ ಎಂದು ಕೂಗುತ್ತಾರೆ. ಹಾಗೆ ಕೂಗುವವರಿಗೆ ಮೋದಿ ಏನು ಮಾಡಿದ್ದಾರೆ? ಕರಾವಳಿಯವರ ಬಗ್ಗೆ ನಾನು ಯಾವತ್ತೂ ಲಘುವಾಗಿ ಮಾತನಾಡಿಲ್ಲ. ಈ ಭಾಗದ ಮೂರು ಜಿಲ್ಲೆಗಳ ಜನರು ಉತ್ತಮ ತಿಳಿವಳಿಕೆ ಇರುವವರು. ಯಾಕೆ ಸುಮ್ಮನೆ ಬಿಜೆಪಿಯನ್ನು ಬೆಂಬಲಿಸುತ್ತೀರಿ ಎಂದು ಕೇಳಿದ್ದೇನೆ ಅಷ್ಟೇ ಎಂದರು.

ಊರಿಗೆ ಶಾಲೆ ಬೇಕೆಂದರೆ ಕುಮಾರಸ್ವಾಮಿ ಬೇಕು. ಆದರೆ ವೋಟು ಮೋದಿಗೆ ಹಾಕುತ್ತೇವೆ ಎನ್ನುತ್ತಾರೆ. ಮೋದಿ ಒಬ್ಬರೇನಾ ದೇಶ ರಕ್ಷಣೆ ಮಾಡುವವರು? ವಾಜಪೇಯಿ ಈ ರಾಷ್ಟ್ರಕ್ಕೆ ಭದ್ರತೆ ನೀಡಿಲ್ಲವಾ? ಮಂಗಳೂರು ಮೂಲದ ಸಂಸ್ಥೆಯನ್ನು ದಿವಾಳಿ ಎಬ್ಬಿಸಿದ್ದಾರೆ. ವಿಜಯ ಬ್ಯಾಂಕ್​ನ್ನು ಗುಜರಾತ್​ನ ಬರೋಡಾ ಬ್ಯಾಂಕ್​ಗೆ ವಿಲೀನ ಮಾಡಿದ್ದಾರೆ. ಆದರೆ ವಿಜಯ ಬ್ಯಾಂಕ್​ ಉಳಿವಿಗಾಗಿ ದೇವೇಗೌಡರು ಕೊಡುಗೆ ಕೊಟ್ಟಿದ್ದಾರೆ ಎಂದು ಹೇಳಿದರು.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

6 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

6 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

6 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

6 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

6 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

6 days ago