Featured

ಮೋದಿ ಮೋದಿ ಎಂದು ಕೂಗುವ ಯುವಕರೇ ದೇಶಕ್ಕೆ ಮೋದಿ ಕೊಡುಗೆ ಏನು ?? ಕುಮಾರಸ್ವಾಮಿ -Vishwanews24

ಸುಳ್ಯ: ಮೋದಿ ಮೋದಿ ಎಂದು ಕೂಗುವ ಯುವಕರೇ ದೇಶಕ್ಕೆ ಮೋದಿ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಬಿಜೆಪಿಯವರನ್ನು ಪ್ರಶ್ನಿಸಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಅವರು ಸುಳ್ಯದಲ್ಲಿ ನಡೆದ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ನರೇಂದ್ರ ಮೋದಿ ಅವರೊಬ್ಬರೇ ಈ ದೇಶಕ್ಕೆ ರಕ್ಷಣೆ ಕೊಟ್ಟ ಪ್ರಧಾನಿಯೇ. ಈ ಹಿಂದೆ ದೇಶಕ್ಕೆ ಆಪತ್ತು ಬಂದಾಗ, ಯುದ್ದ ಆದಾಗ ಆಗಿನ ಪ್ರಧಾನಿ ರಕ್ಷಣೆ ಕೊಡಲಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಪುಲ್ವಾಮಾ ದಾಳಿ ಕುರಿತು ಮಾತನಾಡಿದ ಸಿಎಂ ಕುಮಾರಸ್ವಾಮಿ ಪುಲ್ವಾಮ ದಾಳಿ ಬಗ್ಗೆ ಮೊದಲೇ ಗೊತ್ತಿತ್ತು ಎಂದು ನಾನು ಹೇಳಿಯೇ ಇಲ್ಲ.ಪುಲ್ವಾಮಾ ಹೆಸರನ್ನೇ ನಾನು ಹೇಳಿರಲಿಲ್ಲ. ಎರಡು ವರ್ಷದ ಹಿಂದೆ ನಿವೃತ್ತ ಅಧಿಕಾರಿಯೊಬ್ಬರು ಚುನಾವಣೆ ವೇಳೆ ಯುದ್ದದ ವಾತಾವರಣ ಬರುತ್ತದೆ ಎಂದು ಹೇಳಿದ್ದರು.ಅದ್ದನ್ನಷ್ಟೇ ನಾನು ಹೇಳಿದ್ದೆ. ಅಂತಹಾ ವಿವಾದಾಸ್ಪದ ಹೇಳಿಕೆಗೆ ನನ್ನ ಸಹಮತವಿಲ್ಲ.  ನಾನು ಯಾವ ಬಾಂಬೂ ಹಾಕಿಲ್ಲ ಬಾಂಬ್ ಹಾಕುವ ಕೆಲಸ ಬಿಜೆಪಿಗೆ ಬಿಟ್ಟಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು..

ದೇಶದ ರಕ್ಷಣೆ ಬಗ್ಗೆ ಕೇವಲ ಮೋದಿಗೆ ಮಾತ್ರ ಕಾಳಜಿ ಅಲ್ಲ ಹಿಂದೆ ಇಂದಿರಾಗಾಂಧಿ ದೇಶದ ರಕ್ಷಣೆ ಮಾಡಿಲ್ವಾ? ಲಾಲ್ ಬಹದ್ದೂರ್ ಶಾಸ್ತ್ರಿ ಜೈ ಜವಾನ್ ಜೈ ಕಿಸಾನ್ ಅಂದ್ರು ಈ ರೀತಿಯ ಘೋಷಣೆ ಮಾಡಿದ ಪ್ರಧಾನಿ ಅವರೊಬ್ಬರೇ ಆಗಿದ್ದು, ಆದರೆ ನಾವೇ ಹೋಗಿ ಬಾಂಬ್ ಹಾಕಿದ್ದೇವೆ ಅಂದಿಲ್ಲ.

ಈ ದೇಶದ ರಕ್ಷಣೆ ಮಾಡೋದು ಸೈನ್ಯದ ಮುಖ್ಯಸ್ಥರು ಅವರನ್ನು ದುರುಪಯೋಗ ಪಡಿಸಿಕೊಳ್ಳುವ ವ್ಯವಸ್ಥೆ ಇಂದು ದೇಶದಲ್ಲಿ ಸೃಷ್ಟಿಯಾಗಿದೆ. ಸೈನ್ಯ ನಿರ್ವಹಣೆ ಮಾಡೋದು ಪ್ರಧಾನಿ ಅಲ್ಲ, ರಾಷ್ಡ್ರಪತಿ ಎಂದು ಹೇಳಿದರು.

45 ಸಾವಿರ ಕೋಟಿ ರೂ. ಸಾಲಮನ್ನಾ ಮಾಡುವ ಮೂಲಕ 44 ಲಕ್ಷ ರೈತರಿಗೆ ವರದಾನ ಆಗುವ ಬಜೆಟ್ ಈ ಮಂಡಿಸಿ ಅನುಷ್ಠಾನ ಮಾಡಿದ್ದೇವೆ. 1200 ಕೋಟಿ ರೂ. ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಿಕ್ಷಣಕ್ಕೆ ಮೀಸಲಿಟ್ಟಿದ್ದೇವೆ. ರೈತರ, ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆ ರೂಪಿಸಿದೆ. ರೈತರು ಸಮಸ್ಯೆ ಬಗ್ಗೆ ಮಾತನಾಡಲು ನೇರವಾಗಿ ವಿಧಾನಸೌಧಕ್ಕೆ ಬರಬಹುದು ಎಂದರು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಜಂಟಿ ಅಭ್ಯರ್ಥಿ ಮಿಥುನ್ ರೈ, ಮಾಜಿ ಸಚಿವರಾದ ಅಮರನಾಥ ಶೆಟ್ಟಿ, ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಭೋಜೇ ಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞ ವಿಟ್ಲ, ಕೆಪಿಸಿಸಿ ಉಪಾಧ್ಯಕ್ಷ ಕೆ.ಇ.ರಾಧಾಕೃಷ್ಣ, ಕೆಪಿಸಿಸಿ ಕಾರ್ಯದರ್ಶಿಗಳಾದ ಭರತ್ ಮುಂಡೋಡಿ, ಎಂ.ವೆಂಕಪ್ಪ ಗೌಡ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ, ಕಾರ್ಯದರ್ಶಿ ಇಕ್ಬಾಲ್ ಎಲಿಮಲೆ, ನೇತಾರರಾದ ಕಣಚ್ಚೂರು ಮೋನು, ಡಾ.ಬಿ.ರಘು, ಸೈಯ್ಯದ್ ಮೀರಾ ಸಾಹೇಬ್, ಹೈದರ್ ಪಾರ್ತಿಪಾಡಿ, ಇದಿನಬ್ಬ, ಧನಂಜಯ ಅಡ್ಪಂಗಾಯ, ವಿಜಯವಿಠಲ ಶೆಟ್ಟಿ, ಎಸ್.ಸಂಶುದ್ದೀನ್, ಶಾಲೆಟ್ ಪಿಂಟೋ, ಪಿ.ಪಿ.ವರ್ಗೀಸ್, ಎನ್.ಜಯಪ್ರಕಾಶ್ ರೈ, ಜಾಕೆ ಮಾಧವ ಗೌಡ, ದಯಾಕರ ಆಳ್ವ, ದಿವ್ಯಪ್ರಭಾ ಚಿಲ್ತಡ್ಕ, ಸುಮತಿ ಹೆಗ್ಡೆ, ಗೀತಾ ಕೋಲ್ಚಾರ್, ಜ್ಯೋತಿ ಪ್ರೇಮಾನಂದ, ಸಿದ್ದಿಕ್ ಸುಳ್ಯ, ಕೆ.ಕೆ.ಹರಿಪ್ರಸಾದ್, ಇದಿನಬ್ಬ, ಉಷಾ ಅಂಚನ್, ಚಂದ್ರಶೇಖರ ಕಾಮತ್, ರಾಕೇಶ್ ಕುಂಟಿಕಾನ, ಕಾರ್ಮಿಕ ನೇತಾರ ಪಿ.ಪಿ.ಜಾನಿ ಉಪಸ್ಥಿತರಿದ್ದರು.

Vishwa News 24

Recent Posts

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…

2 days ago

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ : ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! vishwanews24

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…

2 days ago

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  – vishwanews24

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…

2 days ago

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು – vishwanews24

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…

2 days ago

ಡಿಕೆಶಿ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್‌ಡಿಕೆ – vishwanews24

 ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್‌.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…

2 days ago

ಉಡುಪಿ: ತುಳುನಾಡಿನ, ತುಳು ಜನರ ಭಾವನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಲೆ ಕೊಟ್ಟಿದ್ದಾರೆ : ರಮೇಶ್ ಕಾಂಚನ್ – vishwanews24

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…

2 days ago