ಮೋದಿ ಸಕಾ೯ರದ ಯೋಜಿತ ಹೋರಾಟ ದೇಶವನ್ನು ಪ್ರಪಾತಕ್ಕೆ ತಳ್ಳಿದೆ: ರಾಹುಲ್‌ ಗಾಂಧಿ -Vishwanews24

Featured, ರಾಷ್ಟ್ರ ನ್ಯೂಸ್

ಮೋದಿ ಸಕಾ೯ರದ ಯೋಜಿತ ಹೋರಾಟ ದೇಶವನ್ನು ಪ್ರಪಾತಕ್ಕೆ ತಳ್ಳಿ ದೆ: ರಾಹುಲ್‌ ಗಾಂಧಿ -Vishwanews24

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಕಾ೯ರ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೊರೊನಾ ವಿರುದ್ಧ ಮೋದಿ ಸಕಾ೯ರದ ಯೋಜಿತ ಹೋರಾಟ ದೇಶವನ್ನು ಪ್ರಪಾತಕ್ಕೆ ತಳ್ಳಿದೆ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೊರೊನಾ ವಿರುದ್ಧ ಮೋದಿ ಸಕಾ೯ರದ ಯೋಜಿತ ಹೋರಾಟ ದೇಶವನ್ನು ಪ್ರಪಾತಕ್ಕೆ ತಳ್ಳಿದೆ. ಶೇ. 24 ಐತಿಹಾಸಿಕ ಜಿಡಿಪಿ, 12 ಕೋಟಿ ಉದ್ಯೋಗ ನಷ್ಟ 15.5 ಕೋಟಿ. ರೂ. ಹೆಚ್ಚುವರಿ ಒತ್ತಡ ಸಾಲ, ಜಾಗತಿಕವಾಗಿ ಹೆಚ್ಚು ಕೊರೊನಾ ಪ್ರಕರಣ ಹಾಗೂ ಸಾವು. ಆದರೆ, ಭಾರತ ಸರ್ಕಾರ ಹಾಗೂ ಮಾಧ್ಯಮಗಳಿಗೆ ಎಲ್ಲವೂ ಸರಿಯಾಗಿದೆ ಎಂದಿದ್ದಾರೆ.