ನವದೆಹಲಿ: ಪಾಕಿಸ್ತಾನವು ತಾವು ಅಫಘಾನಿಸ್ತಾನದಲ್ಲಿ ಹೊಡೆದುರುಳಿಸುತ್ತಿರುವ ಉಗ್ರರಿಗೆ ಆಶ್ರಯ ನೀಡುತ್ತಾ ಇದೆ ಎಂಬ ಆರೋಪದಲ್ಲಿ ಅದಕ್ಕೆ ನೀಡುತ್ತಿದ್ದ 300 ಮಿಲಿಯನ್ ಡಾಲರ್ ಧನ ಸಹಾಯವನ್ನು ಹಿಂಪಡೆದಿದೆ. ದಿನೇ ದಿನೇ ಸಂಬಂಧವು ಹಳಸುತ್ತಾ ಇದ್ದರೂ ಕೂಡಾ ಬುಧವಾರ ಭೇಟಿಗಾಗಿ ಸೆಕ್ರೆಟರಿ ಮೈಕ್ ಪಾಂಪ್ ಅವರು ತೆರಳಿದ್ದರು.
ಭಾರತ ಮತ್ತು ಅಮೆರಿಕ ಇದೇ ಮೊದಲ ಬಾರಿಗೆ ನಡೆಸಿದ 2+2 ಮಾತುಕತೆಯಲ್ಲಿ ಪಾಕಿಸ್ತಾನಕ್ಕೆ ಉಗ್ರರನ್ನು ಮಟ್ಟಹಾಕುವಂತೆ ಎಚ್ಚರಿಕೆ ನೀಡಲಾಗಿದೆ. 2008ರ ಮುಂಬೈ ದಾಳಿ ನಡೆದು 10 ವರ್ಷಗಳಾಗಿರುವ ಹಿನ್ನೆಲೆಯಲ್ಲಿ, ಪಠಾಣ್‍ಕೋಟ್, ಉರಿಯಲ್ಲಿ ಆತ್ಮಹತ್ಯಾ ದಾಳಿ ಹಾಗೂ ಇತರ ಗಡಿಯಾಚೆಗಿನ ಉಗ್ರ ದಾಳಿಯ ಸಂಚುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಲಾಗಿದೆ. ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವ ಪಾಕಿಸ್ತಾನಕ್ಕೆ ಭಾರತ, ಅಮೆರಿಕ ಚಾಟಿ ಬೀಸಿದೆ!! ಇತರ ದೇಶಗಳ ಮೇಲೆ ದಾಳಿ ನಡೆಸುತ್ತಿರುವ ಉಗ್ರರಿಗೆ ಪಾಕಿಸ್ತಾನ ತನ್ನ ನೆಲದಲ್ಲಿ ಅವಕಾಶ ನೀಡಬಾರದು ಎಂದು ಉಭಯ ದೇಶಗಳು ಆಗ್ರಹಿಸಿವೆ. ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಉಗ್ರ ದಾವೂದ್ ಇಬ್ರಾಹಿಂನ ಡಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ಅಮೆರಿಕ ಭರವಸೆ ನೀಡಿದೆ. ದಾವೂದ್ ವಿವಿಧ ದೇಶಗಳಲ್ಲಿ ಜಾಲ ಹೊಂದಿದ್ದಾನೆ. ಇದನ್ನು ಪಾಕಿಸ್ತಾನದಿಂದ ನಿಯಂತ್ರಿಸುತ್ತಿದ್ದಾನೆ. ಡಿ ಕಂಪನಿ ಹಾಗೂ ಆತನ ಸಹಚರರ ವಿರುದ್ಧ ಕ್ರಮ ಜರುಗಿಸುವುದಾಗಿ ಸಭೆ ವೇಳೆ ಅಮೆರಿಕ ಭಾರತಕ್ಕೆ ಆಶ್ವಾಸನೆ ನೀಡಿದೆ..
ಇದರಂತೆ ಅಮೇರಿಕಾದ ವಿಶೇಷ ಸೇನಾ ಮಾಹಿತಿಗಳನ್ನು ಭಾರತ ಪಡೆದುಕೊಂಡಿದೆ, ಮಾತ್ರವಲ್ಲದೆ ಸೇನಾ ತಂತ್ರಜ್ಞಾನವನ್ನು ಕೂಡಾ ಅದು ಪಡೆದುಕೊಳ್ಳಲು ಅನುಮತಿ ಸಿಕ್ಕಿದೆ. ಭಾರತ ಮತ್ತು ಅಮೇರಿಕಾವು ಹಲವಾರು ಸೂಕ್ಷ್ಮ ವಿಷಯಗಳಲ್ಲಿ ಒಟ್ಟಿಗೆ ಕೆಲಸ ಮಾಡಲು ಒಪ್ಪಂದ ಮಾಡಿಕೊಂಡಿವೆ. ಚೀನಾದ ಸಮಸ್ಯೆ, ಇಂಡೋ-ಪ್ಯಾಸಿಫಿಕ್, ಉಗ್ರವಾದ ಸೇರಿದಂತೆ ಹಲವಾರು ವಿಷಯಗಳಲ್ಲಿ ಒಪ್ಪಂದ ಮಾಡಿಕೊಂಡಿವೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಮೇರಿಕಾದ ಕಾರ್ಯದರ್ಶಿ ಮೈಕ್ ಪಾಂಪ್ ಹಾಗು ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಅವರನ್ನು ಬುಧವಾರ ವಿಮಾನ ನಿಲ್ದಾಣದಲ್ಲಿ ಕುದ್ದು ಸ್ವಾಗತಿಸಿದ್ದರು. ನಾಲ್ಕು ನಾಯಕರು ತಮ್ಮ ಮಾತುಕತೆಯನ್ನು ಸಕಾರಾತ್ಮಕವಾಗಿತ್ತು ಎಂದು ಹೇಳಿದರು.
ಅದಲ್ಲದೆ ಭದ್ರತೆ ಮತ್ತು ಸಂವಹನ ಹೊಂದಾಣಿಕೆ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿದ್ದು ಇದರಿಂದ ಅಮೆರಿಕದ ಅತ್ಯಾಧುನಿಕ ಭದ್ರತಾ ತಂತ್ರಜ್ಞಾನ ಭಾರತಕ್ಕೆ ಸಿಗಲಿದೆ. ಭಾರತ ಹಾಗೂ ಅಮೆರಿಕ ನಡುವಿನ ರಕ್ಷಣಾ ಒಪ್ಪಂದದಿಂದ ಚೀನಾ ಮೇಲೆ ನಿಗಾ ಇಡಬಹುದಾಗಿದೆ. ಅಣ್ವಸ್ತ್ರ ಪೂರೈಕೆದಾರರ ಗುಂಪು (ಎನ್‍ಎಸ್‍ಜಿ)ಗೆ ಭಾರತ ಸೇರ್ಪಡೆಯಾಗುವ ನಿಟ್ಟಿನಲ್ಲಿ ಕೆಲಸ ಮಾಡಲು ಅಮೆರಿಕ ಒಪ್ಪಿಗೆ ನೀಡಿದೆ ಎಂದು ಸಭೆಯ ಬಳಿಕ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ತಿಳಿಸಿದ್ದಾರೆ. ಮತ್ತೊಂದು ವಿಚಾರವೆಂದರೆ ಭಾರತೀಯ ತಂತ್ರಜ್ಞರ ಎಚ್ 1ಬಿ ವೀಸಾ ನೀತಿ ವಿಚಾರದಲ್ಲಿ ಭಾರತದ ಹಿತಾಸಕ್ತಿಯ ವಿರುದ್ಧ ಅಮೆರಿಕ ನಡೆದುಕೊಳ್ಳುವುದಿಲ್ಲ ಎಂಬ ನಂಬಿಕೆ ನಮಗಿದೆ ಎಂದು ಸಚಿವೆ ಸುಷ್ಮಾ ಸ್ವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ನೂತನ ಬೆಳ್ಳಿರಥ ಸಮರ್ಪಣೆ ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ಪದ್ಮಶ್ರೀ ಆರ್.ಎಂ.ಬಿ. ಆರಾಧ್ಯ…
ಉಡುಪಿ:ಅಕ್ರಮವಾಗಿ ದಂಪತಿಗೆ ಮಗು ಪೂರೈಕೆ : ವೈದ್ಯ ಸಹಿತ ಮೂವರ ಬಂಧನ ಉಡುಪಿ: ಮಗುವಿಲ್ಲದ ದಂಪತಿಗೆ ಕಾನೂನು ಬಾಹಿರವಾಗಿ ಒಂದು…
ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…
ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…
ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…
ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ…