ಮೋದಿ ಸರ್ಕಾರಕ್ಕೆ ಭರ್ಜರಿ ಜಯ…
ಸಂಸತ್ ನಲ್ಲಿ ಅವಿಶ್ವಾಸ ನಿರ್ಣಯದ ಕುರಿತಾದಂತೆ ಮತಚಲಾವಣೆ ನಡೆದಿದೆ. ಈ ಮೊದಲು ಕಾಂಗ್ರೆಸ್ ಸೇರಿದಂತೆ ಕೆಲವು ವಿರೋಧ ಪಕ್ಷಗಳು ಸಂಸತ್ ಕಲಾಪವನ್ನು ಬಹಿಷ್ಕರಿಸುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಇದೀಗ ಕೊನೆಗೂ ಮತ ಚಲಾವಣೆ ನಡೆದಿದ್ದು ಪ್ರಧಾನಿ ನರೇಂದ್ರ ಮೊದಿ ನೇತೃತ್ವದ ಸರಕಾರಕ್ಕೆ 199 ಮತಗಳ ಭರ್ಜರಿ ಅಂತರದಲ್ಲಿ ಜಯ ಗಳಿಸಿದೆ. ಈ ಮೂಲಕ ಟಿಡಿಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಮುಖಭಂಗವಾಗಿದೆ.
ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡಿ ಮತವನ್ನು ಲೆಕ್ಕಕ್ಕೆ ಹಾಕಿದ್ದ ಸ್ಪೀಕರ್ ಸುಮಿತ್ರಾ ಮಹಾಜನ್ ಲೆಕ್ಕಾಚಾರ ಮಾಡಿದ್ದರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ೩೨೫ ಸರ್ಕಾರದ ವಿರುದ್ಧ ಕೇವಲ ೧೨೬ ಮತಗಳು ಬಿದ್ದಿದ್ದವು. ಬಹುಮತ ಸಾಭೀತಿಗೆ ೨೨೬ ಮತಗಳ ಅವಶ್ಯಕತೆ ಇತ್ತು. ಈ ಮೂಲಕ ೧೯೯ ಮತಗಳ ಮೂಲಕ ಪ್ರಧಾನ ಮಂತ್ರಿ ಮೋದಿ ಸರ್ಕಾರಕ್ಕೆ ಬೆಂಬಲ ದೊರಕಿದ್ದು ಭರ್ಜರಿ ಜಯ ದಾಖಲಿಸಿದೆ.
ನಿನ್ನೆ ನಡೆದ ಕಲಾಪದಲ್ಲಿ ಲೋಕಸಣೆಯಲ್ಲಿ ಒಟ್ಟು 451 ಸಂಸದರುಗಳು ಹಾಜರಿದ್ದರು. ಇವರ ಪೈಕಿ ಒಟ್ಟು 325 ಮತಗಳು ಪ್ರಧಾನಿ ನರೇಂದ್ರ ಮೊದಿ ನೇತೃತ್ವದ ಎನ್.ಡಿ.ಎ ಪರ ಚಲಾವಣೆಯಾದರೆ ಉಳಿದ 126 ಮಂದಿ ಅವಿಶ್ವಾಸ ನಿರ್ಣಯದ ಪರ ಮತ ಚಲಾಯಿಸಿದರು…
