ಮೋಸ್ಟ್ ವಾಂಟೆಡ್ ಭಯೋತ್ಪದಕ ದಾವೂದ್ ಇಬ್ರಾಹಿಂ ಮತ್ತು ಆತನ ಪತ್ನಿಗೆ ಕರೋನವೈರಸ್‌ ಸೊಂಕು ,ಪಾಕ್ ಮಾಧ್ಯಮಗಳ ವರದಿ

Featured, ಅಂತಾರಾಷ್ಟ್ರೀಯ ನ್ಯೂಸ್

ಮೋಸ್ಟ್ ವಾಂಟೆಡ್ ಭಯೋತ್ಪದಕ ದಾವೂದ್ ಇಬ್ರಾಹಿಂ ಮತ್ತು ಆತನ ಪತ್ನಿಗೆ ಕರೋನವೈರಸ್‌ ಸೊಂಕು ,ಪಾಕ್ ಮಾಧ್ಯಮಗಳ ವರದಿ

ಕರಾಚಿ, : ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹಿಂ ಮತ್ತು ಆತನ ಪತ್ನಿಗೆ ಕರೋನವೈರಸ್‌ ಸೊಂಕು ಇರುವುದು ಧೃಡಪಟ್ಟಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದೆ.
ಪಾಕಿಸ್ತಾನದ ಕರಾಚಿಯಲ್ಲಿರುವ ದಾವೂದ್ ಹಾಗು ಆತನ ಪತ್ನಿ ಮೆಹಜಾಬಿನ್ ಸಹ ಸೋಂಕಿಗೆ ತುತ್ತಾಗಿದ್ದಾರೆ ಎನ್ನಲಾಗಿದೆ.

ಮುಂಬೈನ ಡೊಂಗ್ರಿಯಲ್ಲಿ ಜನಿಸಿದ ದಾವೂದ್ ಇಬ್ರಾಹಿಂ ಕಸ್ಕರ್ ಪ್ರಸ್ತುತ ಕರಾಚಿಯಲ್ಲಿ ವಾಸಿಸುತ್ತಿದ್ದಾನೆ ಎನ್ನಲಾಗಿದೆ. ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪದಕರಲ್ಲಿ ದಾವೂದ್ ಇಬ್ರಾಹಿಂ ಕೂಡ ಒಬ್ಬನಾಗಿದ್ದಾನೆ, ದಾವೂದ್ 1993 ರ ಬಾಂಬೆ ಸ್ಫೋಟದ ಆರೋಪಿಯಾಗಿದ್ದು, ಆತನ ವಿರುದ್ಧ ಹಲವಾರು ಇಂಟರ್‌ಪೋಲ್ ನೋಟಿಸ್‌ಗಳಿವೆ. 2003 ರಲ್ಲಿ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ದಾವೂದ್ ಅವರನ್ನು ಜಾಗತಿಕ ಭಯೋತ್ಪಾದಕನ್ನಾಗಿ ಘೋಷಣೆ ಮಾಡಿದೆ.

(copied)