ಯಡಿಯೂರಪ್ಪನವರ “ಸೈಕಲ್” ಯೋಜನೆಯನ್ನು ಮುರಿಯುತ್ತಾ ಕುಮಾರಸ್ವಾಮಿಯವರ ಮೈತ್ರಿ ಸರಕಾರ ..??

Featured, ರಾಜ್ಯ ನ್ಯೂಸ್

ಬೆಂಗಳೂರು: 2006-07ರಲ್ಲಿ ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಜಾರಿಗೆ ಬಂದಿದ್ದ, ಉಚಿತ ಸೈಕಲ್​ ಯೋಜನೆಯನ್ನು ಕುಮಾರಸ್ವಾಮಿ ಯವರ ದೋಸ್ತಿ ಸರಕಾರ ನಿಲ್ಲಿಸುವುದಕ್ಕೆ ಮುಂದಾಗಿದೆ.. ಎನ್ನುವ ಇಂತಹದ್ದೊಂದು ಅನುಮಾನ ಇದೀಗ ಮೂಡಿದೆ.

ಇದಕ್ಕೆ ಕಾರಣ ಸೈಕಲ್ ವಿತರಣೆಯಲ್ಲಿ ಆಗಿರುವ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ.ರಾಜ್ಯದ 5.14ಲಕ್ಷ ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವ ಸೈಕಲ್​ಗಳು ಕಳಪೆಯಾಗಿವೆ ಅಂತ ಅಂತಾ ಆರೋಪಿಸಿದ್ದಾರೆ.

ತಪಾಸಣೆಗೆ ಬರುವ ಸೈಕಲ್​ಗಳು ಉತ್ತಮ ಗುಣಮಟ್ಟದ್ದೇ ಆಗಿರುತ್ತದೆ, ಆದರೆ ನಂತರ ಕಳಪೆ ಗುಣಮಟ್ಟದ ಸೈಕಲ್​ಗಳನ್ನ ವಿತರಿಸಲಾಗ್ತಿದೆ. ಇದಕ್ಕೆ ಜಿಲ್ಲಾ ಮಟ್ಟದ ಡಿಡಿಪಿಐ ಅಧಿಕಾರಿಗಳು ಕಾರಣ ಅಂತಾ ದೂರಿದ್ದಾರೆ. ಬಾಲಕಿಯರ ಸೈಕಲ್​ಗೆ 3,900ರೂಪಾಯಿಯಂತೆ ಹಾಗೂ ಬಾಲಕರ ಸೈಕಲ್​ಗೆ 3,600 ರೂಪಾಯಿ ವೆಚ್ಚದಲ್ಲಿ ಒಟ್ಟಾರೆ 185 ಕೋಟಿ ವೆಚ್ಚದಲ್ಲಿ ರಾಜ್ಯ ಸರ್ಕಾರ ಸೈಕಲ್​ ವಿತರಣೆ ಮಾಡ್ತಿದೆ. ಕಳಪೆ ಗುಣಮುಟ್ಟದ ಸೈಕಲ್​ ವಿತರಣೆಯ ಕಾರಣ ಹಾಗೂ ಸರ್ಕಾರದ ಖಜಾನೆಗೆ ಹೊರೆ ಕಮ್ಮಿ ಮಾಡುವ ನಿಟ್ಟಿನಲ್ಲಿ, ಇಡೀ ಯೋಜನೆಯನ್ನ ಸ್ಥಗಿತಗೊಳಿಸುವ ಇಂಗಿತದಲ್ಲಿ ಸರ್ಕಾರ ಇದೆ ..

ಕೂಡಲೇ ಸಿಎಂ ಈಗಾಗಲೇ ಸಪ್ಲೈ ಆಗಿರುವ ಸೈಕಲ್​ಗಳಿಗೆ ಪೇಮೆಂಟ್ ನೀಡದಂತೆ, ಹಾಗೂ ಕಳಪೆ ಗುಣಮಟ್ಟದ ಸೈಕಲ್​ಗಳನ್ನ ವಿತರಣೆ ನಿಲ್ಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದ್ದು, ಕಳಪೆ ಸೈಕಲ್​ಗಳ ವಿತರಣೆ ಸಂಬಂಧ ಇಲಾಖಾವಾರು ತನಿಖೆಗೆ ಸೂಚಿಸಿದ್ದಾರೆ.

vishwanews24