ಯಡಿಯೂರಪ್ಪರಿಂದ ಸರ್ಕಾರ ರಚನೆಗೆ ಬಿಜೆಪಿ ಕಾರ್ಯಕರ್ತರಿಂದ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ವಿಶೇಷ ಪೂಜೆ

Featured, ಜಿಲ್ಲೆ

ಯಡಿಯೂರಪ್ಪರಿಂದ ಸರ್ಕಾರ ರಚನೆಗೆ ಬಿಜೆಪಿ ಕಾರ್ಯಕರ್ತರಿಂದ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ವಿಶೇಷ ಪೂಜೆ

ಕಾಪು : ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪರಿಂದ ಸರ್ಕಾರ ರಚನೆ ಹಾಗೂ ಮುಂದಿನ ಆಡಳಿತ ಯಶಸ್ವಿಯಾಗಿ ನಡೆಯುವಂತೆ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಮತ್ತು ಕಟಪಾಡಿ ಬಿಜೆಪಿ ಕಾರ್ಯಕರ್ತರ ತಂಡ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಬಿ.ಎಸ್ ಯಡಿಯೂರಪ್ಪ ರ ಹೆಸರಿನಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿದರು.

ತದನಂತರ ಗೀತಾಂಜಲಿ ಸುವರ್ಣ ಮಾಧ್ಯಮದವರೊಂದಿಗೆ ಮಾತನಾಡುತ್ತಾ ” ಕಾಂಗ್ರೆಸ್ ನ ಹಿಂದೂ ವಿರೋಧಿ ಧೋರಣೆ ಖಂಡಿಸಿ ಬಿಜೆಪಿಗೆ ಗೆಲುವು ತಂದುಕೊಟ್ಟಿದೆ ಮುಂದಿನ‌ ಯೋಜನೆ ಬಿಎಸ್ ವೈ ಮುಖ್ಯಮಂತ್ರಿಯಾಗಿ ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಬೇಕು ಇದರಿಂದ ರಾಜ್ಯದ ಜನರ ಕಷ್ಟಗಳಿಗೆ ಸ್ಪಂದಿಸುವಂತಾಗಬೇಕು ಅದಕ್ಕಾಗಿ ನಾವಿಂದು ದೇವರ ಮೊರೆ ಹೋಗಿದ್ದೆವೆಂದರು. ಈ ಸಂಧರ್ಬದಲ್ಲಿ ಸತೀಶ್ ಪೂಜಾರಿ ಉದ್ಯವಾರ, ಕಮಲಾಕ್ಷ, ಪ್ರಭಾಕರ್ ಕೋಟೆ, ಮೊದಲಾದವರು ಉಪಸ್ಥಿತಿತರಿದ್ದರು.