ಉಡುಪಿ: ಬಿಜೆಪಿ ನಾಯಕ ಯಶ್ಪಾಲ್ ಸುವರ್ಣ ಅವರಿಗೆ ಮಾರಿಗುಡಿ ಪೇಜ್ ಎಂಬ ಇನ್ಸ್ ಟಾ ಗ್ರಾಂ ಖಾತೆಯಲ್ಲಿ ಬೆದರಿಕೆ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಮಂಗಳೂರಿನ ಬಜ್ಪೆ ನಿವಾಸಿ ಮಹಮ್ಮದ್ ಶಫಿ (26) ಎಂದು ಗುರುತಿಸಲಾಗಿದೆ.
ಕೆಲ ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿಯವರಾದ ಯಶ್‌ಪಾಲ್ ಸುವರ್ಣ ರವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ mari gudi 6 ಎಂಬ instagram ಖಾತೆಯ ಮೂಲಕ ಕಿಡಿಗೇಡಿಗಳು ಯಶಪಾಲ್ ಸುವರ್ಣ ರನ್ನು ಹತ್ಯೆಗೈದವರಿಗೆ ಹತ್ತು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಕೊಲೆ ಬೆದರಿಕೆ ಹಾಕಿದ್ದು, ಈ ಹಿನ್ನೆಲೆಯಲ್ಲಿ, ಬಿ.ಜೆ.ಪಿ, ಪಕ್ಷದ ಕಾಪು ವಿಧಾನಸಭಾ ಕ್ಷೇತ್ರದ ಯುವಮೋರ್ಚಾದ ಅಧ್ಯಕ್ಷರಾದ ಉದ್ಯಾವರ ಗ್ರಾಮದ ಸಚಿನ್ ಸುವರ್ಣ ಎಂಬವರು ನೀಡಿದ ದಿನಾಂಕ: 08/06/2022 ರಂದು ಕಾಪು ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಆಕ್ರ:59/2022 ಕಲಂ:505(2), 507 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು
ಕರಾವಳಿ ಭಾಗದ ಸಾರ್ವಜನಿಕರಲ್ಲಿ. ಹಾಗೂ ಇಡೀ ರಾಜ್ಯದ ಜನರಲಿ, ಬಹಳ ಚರ್ಚೆಗೆ ಆಸ್ಪದವಾದ ವಿಚಾರ ಇದಾಗಿತ್ತು. ಪ್ರಕರಣ ದಾಖಲಾದ ತಕ್ಷಣ ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಸ್. ವಿಜಯ್ ಪ್ರಸಾದ್ ರವರು ಉಡುಪಿ ಜಿಲ್ಲಾ, ಸೈಬರ್ ಪೊಲೀಸ್ ಠಾಣಾ ನಿರೀಕ್ಷಕರಾದ ಮಂಜುನಾಥ ಹಾಗೂ ಸಿಬ್ಬಂದಿಗಳು ಮತ್ತು ಆರ್.ಡಿಸಿ, ವಿಭಾಗದ ಸಿಬ್ಬಂದಿ ದಿನೇಶ್ ರವರ ಸಹಾಯದಿಂದ ಆಧುನಿಕ ತಂತ್ರಜ್ಞಾನವನ್ನು ಬಳಸಿ ಸದಿ, ಬೆದರಿಕೆ ಪೋಸ್ಟ್ ಗಳನ್ನು ಹಾಕುತ್ತಿದ್ದವನು ಮಹಮ್ಮದ್ ಶಾಫಿ ಬಜ್ಪೆ, ಗ್ರಾಮ ಮಂಗಳೂರು ಎಂಬುದಾಗಿ ಮಾಹಿತಿಯನ್ನು ಸಂಗ್ರಹಿಸಿರುತ್ತಾರೆ.
ನಂತರದಲ್ಲಿ ಎನ್ ವಿಷ್ಣುವರ್ಧನ, ಐಪಿಎಸ್, ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ಮತ್ತು ಎಸ್.ಟಿ, ಸಿದ್ಧಲಿಂಗಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಕಾಪು ಸಿಪಿಐ ಪ್ರಕಾಶ್ ರವರ ನೇತೃತ್ವದಲ್ಲಿ, ಕಾಪು ಪಿಎಸ್‌ಐ ಶೈಲ ಡಿ.ಎಂ, ಹಾಗೂ ಸಿಬ್ಬಂದಿಯವರಾದ ಪ್ರವೀಣ, ನಾರಾಯಣ, ರಾಜೇಶ್, ಹೇಮರಾಜ್ ರವರ ಒಂದು ವಿಶೇಷ ತಂಡವನ್ನು ರಚಿಸಿದ್ದು, ತಂಡವು ಆರೋಪಿ ಮೊಹಮ್ಮದ್ ಶಾಫಿ ಯನ್ನು ಬಜ್ಪೆ ತಾರಿಕಂಬಳ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.
ಪ್ರಕರಣದ ತನಿಖೆಯ ಸಮಯ ಆರೋಪಿತ ಮಹಮ್ಮದ್ ಶಾಫಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತಾನು ಸ್ನೇಹಿತ ಆಸಿಫ್ ಸೇರಿಕೊಂಡು “Marigudi_6 ಎಂಬ Instagram ಪೇಜ್ ನ್ನು ಸುಮಾರು 6 ತಿಂಗಳ ಹಿಂದೆ ತೆರೆದಿದ್ದಾಗಿ, ಉಡುಪಿಯ ಯಶ್ ಪಾಲ್ ಸುವರ್ಣ ಹಾಗೂ ಪ್ರಮೋದ್ ಮುತಾಲಿಕ್ ರವರ ಫೋಟೋ ಇರುವ ಪೋಸ್ಟ್ ನು ಸೃಷ್ಟಿಸಿ ಅದರಲ್ಲಿ. ಈ ಎರಡು ಹಂದಿಗಳ ತಲೆ ಕಡಿದರೆ, 20 ಲಕ್ಷ, ಒಂದು ತಲೆಗೆ 10 ಲಕ್ಷ.. ರೂಪಾಯಿ ಘೋಷಣೆ,, ನಿಮ್ಮ ಖಾತೆಗೆ ಜಮಾ ಆಗುತ್ತೆ ಎಂದು ಪೊಸ್ಟ್ ಕಾರ್ಡ್ ತಯಾರಿಸಿ ಪೋಸ್ಟ್ ಮಾಡಿದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಪ್ರಕರಣದ ತನಿಖೆ ತೀವ್ರ ಗತಿಯಲ್ಲಿ ಸಾಗುತ್ತಿದೆ. ಇನ್ನೊಬ್ಬ ಆರೋಪಿ ಆಸಿಪ್ ಎಂಬಾತನ ಬಂಧನಕ್ಕೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೆಚ್ಚುವರಿ ಎಸ್ಪಿ ಎಸ್ ಟಿ ಸಿದ್ದಲಿಂಗಪ್ಪ ಮಾಹಿತಿ ನೀಡಿದ್ದಾರೆ
ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…
ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ : ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…
ಶಿರ್ವ : ವ್ಯಕ್ತಿ ನಾಪತ್ತೆ ; ಪ್ರಕರಣ ದಾಖಲು ಶಿರ್ವ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬೆಳಪು ಬಡಿಕೇರಿ ಹೌಸ್ ನಿವಾಸಿ…
ಉದ್ಯಾವರ : ರಸ್ತೆ ದಾಟುತ್ತಿದ್ದಾಗ ಕ್ರೇನ್ ಢಿಕ್ಕಿ ; ಮಹಿಳೆ ಸಾವು ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಗುಡ್ಡೆಯಂಗಡಿ ಬಳಿ ಗುರುವಾರ…