ಯಾರೇ ಮನವೊಲಿಸಿದರೂ ವಿಶ್ವಾಸಮತಯಾಚನೆಗೆ ಹಾಜರಾಗುವುದಿಲ್ಲ : ಅತೃಪ್ತ ಶಾಸಕರು -Vishwanews24

Featured, ರಾಷ್ಟ್ರ ನ್ಯೂಸ್

ಮುಂಬೈ : ಅತೃಪ್ತ ಕಾಂಗ್ರೆಸ್ -ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ, ಮುಂಬೈನ ಹೊಟೇಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇಂತಹ ಶಾಸಕರು ತಾವು ಸದನಕ್ಕೆ ಬರುವುದಲ್ಲ. ಯಾರೇ ಮನವೊಲಿಸಿದರೂ ಹಾಜರಾಗುವುದಿಲ್ಲ ಎಂದು ತಮ್ಮ ನಿಲುವನ್ನು ಮತ್ತೆ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮುಂಬೈನಲ್ಲಿ ಅಜ್ಞಾತ ಸ್ಥಳದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅತೃಪ್ತ ಕಾಂಗ್ರೆಸ್-ಜೆಡಿಎಸ್ ಶಾಸಕರು, ವಿಶ್ವಾಸಮತಕ್ಕೆ ನಾವು ಬರುವುದಿಲ್ಲ. ಯಾರೇ ಮನವೊಲಿಸಿದರೂ ಬರೋಲ್ಲ. ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಮತ್ತೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಈ ಹಿನ್ನಲೆಯಲ್ಲಿ ವಿಶ್ವಾಸಮತ ಸಾಭೀತು ಪಡಿಸುವ ವೇಳೆ 16 ರಾಜೀನಾಮೆ ನೀಡಿರುವ ಶಾಸಕರು ಬಾರದೇ ಹೋದರೇ, ದೋಸ್ತಿ ಖತಂ ಆಗೋದು ಗ್ಯಾರಂಟಿ. ಈ ಮೂಲಕ ಮೈತ್ರಿ ಸರ್ಕಾರ ಬಿದ್ದು ಹೋಗೋದು ನಿಜ ಎಂದು ಅನೇಕ ರಾಜಕೀಯ ನಾಯಕರ ವಿಶ್ಲೇಷಣೆಯಾಗಿದೆ.

ಸದನಕ್ಕೆ ಹಾಜರಾಗಲೇಬೇಕು ಎಂದು ಈಗಾಗಲೇ ಮೈತ್ರಿ ಸರ್ಕಾರ ತಮ್ಮ ಅತೃಪ್ತ ಶಾಸಕರಿಗೆ ವಿಪ್​ ಜಾರಿ ಮಾಡಿತ್ತು. ಆದರೆ, ಈ ವಿಪ್​ ಪಾಲನೆ ಮಾಡುವುದು ಕಡ್ಡಾಯವಲ್ಲ ಎಂದು ಈಗ ಸುಪ್ರೀಂ ಕೋರ್ಟ್​ ತಿಳಿಸಿದೆ. ಅದರಂತೆ ಅತೃಪ್ತರು ಕೂಡ ನಾಳೆ ಸದನಕ್ಕೆ ಗೈರಾಗಲಿದ್ದು, ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ.