ಯಾವುದೇ ಅನರ್ಹ ಬಿಪಿಎಲ್  ಕಾರ್ಡ್‌ಗಳನ್ನ ರದ್ದು ಮಾಡಲ್ಲ : ಕೆ.ಹೆಚ್.ಮುನಿಯಪ್ಪ ಸ್ಪಷ್ಟನೆ – vishwanews24

Featured, ರಾಜ್ಯ ನ್ಯೂಸ್

ಯಾವುದೇ ಅನರ್ಹ ಬಿಪಿಎಲ್  ಕಾರ್ಡ್‌ಗಳನ್ನ ರದ್ದು ಮಾಡಲ್ಲ, ಎಲ್ಲವನ್ನು ಪರಿಷ್ಕರಣೆ ಮಾಡುತ್ತೇವೆ : ಕೆ.ಹೆಚ್.ಮುನಿಯಪ್ಪ ಸ್ಪಷ್ಟನೆ

ಬೆಂಗಳೂರು: ಯಾವುದೇ ಅನರ್ಹ ಬಿಪಿಎಲ್  ಕಾರ್ಡ್‌ಗಳನ್ನ ರದ್ದು ಮಾಡಲ್ಲ, ಎಲ್ಲವನ್ನು ಪರಿಷ್ಕರಣೆ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಅನರ್ಹ ರೇಷನ್ ಕಾರ್ಡ್‌ಗಳ ರದ್ದು ವಿಚಾರವಾಗಿ ಮಾತನಾಡಿದ ಅವರು, ಬಿಪಿಎಲ್‌ನಲ್ಲಿರುವ ಅನರ್ಹರನ್ನು ನಿಯಮಗಳ ಪ್ರಕಾರ ಪರಿಷ್ಕರಣೆ ಮಾಡಿ, ಎಪಿಎಲ್‌ಗೆ  ವರ್ಗಾವಣೆ ಮಾಡುತ್ತೇವೆ. ಯಾವ ಕಾರ್ಡನ್ನು ರದ್ದು ಮಾಡಲ್ಲ, ಎಲ್ಲಾ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡುತ್ತೇವೆ. ವರ್ಗಾವಣೆ ಸಂದರ್ಭದಲ್ಲಿ ಏನಾದರೂ ಸಣ್ಣಪುಟ್ಟ ಸಮಸ್ಯೆಯಾದರೆ 24 ಗಂಟೆಯೊಳಗೆ ಅದನ್ನು ಸರಿಪಡಿಸಿ ಆಹಾರ ಧಾನ್ಯ ಕೊಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ದ.ಕ. , ಉಡುಪಿ ಜಿಲ್ಲೆಗಳ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರದಿಂದ ಮಾಸ್ಟರ್ ಪ್ಲಾನ್ : ಶಾಸಕ ಮಂಜುನಾಥ ಭಂಡಾರಿ ಮನವಿಗೆ ಸಚಿವರ ಸ್ಪಂದನೆ – vishwanews24

ಇನ್ನೂ ಇದೇ ವೇಳೆ ಯಾದಗಿರಿಯಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ ವಿಚಾರವಾಗಿ ಮಾತನಾಡಿ, ಪ್ರಕರಣವನ್ನು ವಿವರವಾಗಿ ತನಿಖೆ ನಡೆಸಬೇಕು. ದೊಡ್ಡಮಟ್ಟದಲ್ಲಿ ನಡೆದಿದೆ. ಅಧಿಕಾರಿಗಳು ತನಿಖೆ ನಡೆಸುತ್ತಾರೆ. ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ಆಗುತ್ತದೆ ಎಂದಿದ್ದಾರೆ.

Leave a Reply