Featured

ಯಾವುದೇ ಶುಭ ಸಮಾರಂಭದಲ್ಲಿ ಎಲ್ಲ ದೇವರಿಗಿಂತ ಮೊದಲು ಗಣಪತಿಗೇ ಪ್ರಥಮ ಪೂಜೆ ಸಲ್ಲಿಸುವುದೇಕೆ? Vishwanews24

ಯಾವುದೇ ಶುಭ ಸಮಾರಂಭದಲ್ಲಿ ಎಲ್ಲ ದೇವರಿಗಿಂತ ಮೊದಲು ಗಣಪತಿಗೇ ಪ್ರಥಮ ಪೂಜೆ ಸಲ್ಲಿಸುವುದೇಕೆ? Vishwanews24

ಪ್ರಥಮ ಪೂಜಿತ ಎನಿಸಿರುವ ವಿಘ್ನ ವಿನಾಶಕನಿಗೆ ಯಾವುದೇ ಶುಭ ಸಮಾರಂಭದಲ್ಲಿ ಪ್ರಥಮ ಪೂಜೆ ಸಲ್ಲುತ್ತದೆ. ಭಾರತೀಯ ಪುರಾಣಗಳ ಪ್ರಕಾರ, ಗಣಪತಿಗೆ ಮೊದಲ ಪೂಜೆ ಸಲ್ಲಿಸಲು ಕಾರಣವೇನೆಂಬ ಬಗ್ಗೆ ಎರಡು ಕತೆಗಳಿವೆ.

ಇಂದು ಗಣೇಶ ಚತುರ್ಥಿ ಇರುವುದರಿಂದ ಈಗಾಗಲೇ ಎಲ್ಲೆಡೆ ಹಬ್ಬದ ಸಂಭ್ರಮ ಹೆಚ್ಚಾಗಿದೆ. ಪ್ರತಿವರ್ಷವೂ ಗಣಪತಿ ಉತ್ಸವವನ್ನು ದೇಶಾದ್ಯಂತ ಸಂಭ್ರಮ-ಸಡಗರಗಳಿಂದ ಆಚರಿಸಲಾಗುತ್ತದೆ. ಈ ವರ್ಷ ಕೊರೊನಾ ಅಟ್ಟಹಾಸವಿದ್ದರೂ ಗಣೇಶ ಚತುರ್ಥಿಯ  ಸಂಭ್ರಮಕ್ಕೇನೂ ಕೊರತೆಯಾಗಿಲ್ಲ. ಸರಳವಾಗಿ, ತಮ್ಮ ಮನೆಗಳಲ್ಲಿ ಜನರು ಗಣೇಶ ಉತ್ಸವ ಆಚರಿಸುತ್ತಿದ್ದಾರೆ.

ಹಿಂದೂ ದೇವರಲ್ಲಿ ಪ್ರಮುಖನಾಗಿರುವ ಗಣೇಶನ ಬಗ್ಗೆ ಸಾಕಷ್ಟು ರೋಚಕ ಕತೆಗಳಿವೆ. ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ಗೋವಾ. ಒರಿಸ್ಸಾ, ಪಶ್ಚಿಮ ಬಂಗಾಳ, ಛತ್ತೀಸ್​ಗಢ, ಉತ್ತರ ಪ್ರದೇಶದಲ್ಲಿ ವೈಭವದಿಂದ ಗಣಪತಿ ಉತ್ಸವ ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಗಣಪನಿಗೆ ವಿಶೇಷ ಸ್ಥಾನವಿದೆ. ಪ್ರಥಮ ಪೂಜಿತ ಎನಿಸಿರುವ ವಿಘ್ನ ವಿನಾಶಕನಿಗೆ ಯಾವುದೇ ಶುಭ ಸಮಾರಂಭದಲ್ಲಿ ಪ್ರಥಮ ಪೂಜೆ ಸಲ್ಲುತ್ತದೆ. ಭಾರತೀಯ ಪುರಾಣಗಳ ಪ್ರಕಾರ, ಗಣಪತಿಗೆ ಮೊದಲ ಪೂಜೆ ಸಲ್ಲಿಸಲು ಕಾರಣವೇನೆಂಬ ಬಗ್ಗೆ ಎರಡು ಕತೆಗಳಿವೆ. ಜ್ಞಾನ ಮತ್ತು ಬುದ್ಧಿವಂತಿಕೆಗೆ ಪ್ರಸಿದ್ಧನಾಗಿರುವ ಗಣಪತಿಯನ್ನು ಯಾವುದೇ ಶುಭ ಕಾರ್ಯಗಳಲ್ಲಿ ಮೊದಲು ಪೂಜಿಸಲಾಗುತ್ತದೆ.

ಒಂದು ಕತೆಯ ಪ್ರಕಾರ, ಶಿವನ ಪತ್ನಿ ಪಾರ್ವತಿ ಕೈಲಾಸದಲ್ಲಿ ಸ್ನಾನಕ್ಕೆ ಹೊರಟಿರುತ್ತಾಳೆ. ಆಗ ಗಣೇಶನ ಬಳಿ ತನ್ನ ಅಂತಃಪುರದ ಎದುರು ಕಾವಲು ಕಾಯಬೇಕೆಂದು ಆದೇಶಿಸುತ್ತಾಳೆ. ನಾನು ಸ್ನಾನ ಮಾಡಿ ಬರುವವರೆಗೂ ಯಾರನ್ನೂ ಒಳಗೆ ಬಿಡಬೇಡ ಎಂದು ಹೇಳುತ್ತಾಳೆ. ಆಗ ಅಮ್ಮನ ಮಾತಿನಂತೆ ಕಾವಲು ಕಾಯಲು ನಿಂತ ಗಣಪತಿ ಯಾರೂ ಒಳಗೆ ಹೋಗದಂತೆ ನೋಡಿಕೊಳ್ಳುತ್ತಿರುತ್ತಾನೆ. ಆಗ ಅಲ್ಲಿಗೆ ಶಿವ ಬರುತ್ತಾನೆ. ಶಿವ ಯಾರೆಂದು ತಿಳಿಯದ ಗಣೇಶ ನನ್ನ ತಾಯಿ ಯಾರನ್ನೂ ಒಳಗೆ ಬಿಡಬಾರದು ಎಂದು ಸೂಚಿಸಿದ್ದಾಳೆ. ಆಕೆ ಹೇಳುವವರೆಗೂ ನೀವು ಒಳಗೆ ಹೋಗುವಂತಿಲ್ಲ ಎಂದು ಬಾಗಿಲಿಗೆ ಅಡ್ಡ ನಿಲ್ಲುತ್ತಾನೆ. ಇದರಿಂದ ಕೋಪಗೊಂಡ ಶಿವ ಬಾಲ ಗಣಪನ ತಲೆಯನ್ನೇ ಕತ್ತರಿಸುತ್ತಾನೆ. ಸ್ನಾನ ಮುಗಿಸಿ ಹೊರಗೆ ಬಂದ ಪಾರ್ವತಿ ತನ್ನ ಮಗ ಗಣೇಶ ಸತ್ತು ಬಿದ್ದಿರುವುದನ್ನು ನೋಡಿ ಕೋಪಗೊಳ್ಳುತ್ತಾಳೆ. ಆಕೆಯ ಕೋಪಕ್ಕೆ ಇಡೀ ಕೇಲಾಸವೇ ನಡುಗುತ್ತದೆ. ಹೇಗಾದರೂ ಮಾಡಿ ನನ್ನ ಮಗನನ್ನು ಬದುಕಿಸಲೇಬೇಕೆಂದು ಆಕೆ ಗಣ ಶಿವನ ಬಳಿ ಪಟ್ಟು ಹಿಡಿಯುತ್ತಾಳೆ. ನನ್ನ ಮಗ ಬದುಕದಿದ್ದರೆ ಇಡೀ ಭೂಮಂಡಲವನ್ನೇ ನಾಶ ಮಾಡುವುದಾಗಿ ಎಚ್ಚರಿಸುತ್ತಾಳೆ.

ಇದರಿಂದ ಹೆದರಿದ ದೇವಾನುದೇವತೆಗಳು ಕೂಡ ಬಾಲ ಗಣಪತಿಯ ತಲೆಯನ್ನು ಜೋಡಿಸಲು ಪ್ರಯತ್ನ ಮಾಡುತ್ತಾರೆ. ಬಳಿಕ ಶಿವ ಆನೆ ಮರಿಯ ತಲೆಯನ್ನು ತಂದು ಗಣಪತಿಗೆ ಜೋಡಿಸಿ, ಬದುಕಿಸುತ್ತಾನೆ. ತನ್ನ ತಾಯಿಗೆ ನೀಡಿದ ಮಾತಿಗಾಗಿ ಪ್ರಾಣವನ್ನೇ ಕೊಡಲು ಸಿದ್ಧನಾದ ಗಣಪತಿಯನ್ನು ಎಲ್ಲ ದೇವರಿಗಿಂತ ಮೊದಲು ಪೂಜಿಸಬೇಕೆಂದು ಶಿವ ಆಶೀರ್ವದಿಸುತ್ತಾನೆ.

ಎರಡನೇ ಕತೆಯ ಪ್ರಕಾರ, ಗಣಪತಿ ಹಾಗೂ ಆತನ ಅಣ್ಣ ಸುಬ್ರಹ್ಮಣ್ಯನ ನಡುವೆ ಸ್ಪರ್ಧೆ ಏರ್ಪಡುತ್ತದೆ. ಆ ಸ್ಪರ್ಧೆಯಲ್ಲಿ ಶಿವ ಮತ್ತು ಪಾರ್ವತಿ ತಮ್ಮ ಮಕ್ಕಳಿಗೆ ಇಡೀ ಪ್ರಪಂಚವನ್ನು ಸುತ್ತಿ ಬರಲು ಸೂಚಿಸುತ್ತಾರೆ. ಹಾಗೇ, ಯಾರು ಮೊದಲು ಜಗತ್ತನ್ನು ಸುತ್ತಿ ಬರುತ್ತಾರೋ ಅವರು ಈ ಸ್ಪರ್ಧೆಯಲ್ಲಿ ಗೆಲ್ಲುತ್ತಾರೆ ಎಂದು ಹೇಳುತ್ತಾರೆ. ಮೂಷಿಕವಾಹನನಾದ ಗಣೇಶ ಹೇಗೂ ಈ ಸ್ಪರ್ಧೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಸುಬ್ರಹ್ಮಣ್ಯ ತನ್ನ ವಾಹನವಾದ ನವಿಲನ್ನು ಏರಿ ವಿಶ್ವ ಪರ್ಯಟನೆಗೆ ತೆರಳುತ್ತಾನೆ. ಆದರೆ, ಗಣಪತಿ ತನ್ನ ತಂದೆ-ತಾಯಿಯರಾದ ಶಿವ ಹಾಗೂ ಪಾರ್ವತಿಯ ಸುತ್ತ ಸುತ್ತುತ್ತಾನೆ. ನೀವೇ ನನ್ನ ಪ್ರಪಂಚ ಎಂದು ಹೇಳುವ ಗಣಪತಿಯ ಬುದ್ಧಿವಂತಿಕೆ ಹಾಗೂ ಪೋಷಕರ ಬಗೆಗಿನ ಪ್ರೀತಿಯನ್ನು ಮೆಚ್ಚಿ ಆತನನ್ನೇ ಸ್ಪರ್ಧೆಯ ವಿಜೇತನೆಂದು ಘೋಷಿಸಲಾಗುತ್ತದೆ. ಇದೂ ಕೂಡ ಗಣಪತಿಯನ್ನು ಮೊದಲು ಪೂಜಿಸಲು ಕಾರಣವಾಗಿದೆ.

ಗಣೇಶ ಚತುರ್ಥಿಯಂದು ಮಾತ್ರವಲ್ಲ, ಇತರ ಹಬ್ಬಗಳಲ್ಲೂ ಗಣೇಶನನ್ನೇ ಮೊದಲು ಪೂಜಿಸಲಾಗುತ್ತದೆ. ಸಂಕಷ್ಟಹರನಾದ ಗಣಪತಿ ವಿದ್ಯೆಗೆ ಅಧಿಪತಿಯೂ ಹೌದು. ಜ್ಞಾನ ಮತ್ತು ಸೃಷ್ಟಿಯ ರಚನೆಯ ಆರಂಭದಲ್ಲಿ ಮೊದಲು ಕಾಣಿಸಿಕೊಂಡಿರುವುದೇ ಗಣಪತಿಯಾದ್ದರಿಂದ ಯಾವುದೇ ಕಾರ್ಯದ ಆರಂಭದಲ್ಲಿ ಪ್ರಥಮ ಪೂಜೆಯನ್ನು ವಿನಾಯಕನಿಗೆ ಮಾಡಲಾಗುತ್ತದೆ.

Vishwa News 24

Recent Posts

ವಿಷಕಾರಿ ದತ್ತೂರ ಬೀಜ ಮಾರಾಟ : ಅಮೆಜಾನ್,ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ನ ಆಹಾರ ಪರವಾನಗಿ ಅಮಾನತು – vishwanews24

ವಿಷಕಾರಿ ದತ್ತೂರ ಬೀಜ ಮಾರಾಟ : ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನ ಆಹಾರ ಪರವಾನಗಿ ಅಮಾನತು ಬೆಂಗಳೂರು: ವಿಷಕಾರಿ ದತ್ತೂರ ಬೀಜಗಳನ್ನು…

5 minutes ago

ಉಡುಪಿ: ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ ; ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಇನ್ನೂ ಪತ್ತೆಯಾಗಿಲ್ಲ: ಹರಿರಾಮ್ ಶಂಕರ್  – vishwanews24

ಉಡುಪಿ: ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ ; ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಇನ್ನೂ ಪತ್ತೆಯಾಗಿಲ್ಲ: ಹರಿರಾಮ್ ಶಂಕರ್  ಉಡುಪಿ: ಉದ್ಯಮಿ…

16 minutes ago

ಮಂತ್ರಾಲಯ: ಆ. 27ರಿಂದ ಸೆ.2ರವರೆಗೆ ರಾಯರ 355ನೇ ಆರಾಧನಾ ಮಹೋತ್ಸವ – viswhanews24

ಮಂತ್ರಾಲಯ: ಆ. 27ರಿಂದ ಸೆ.2ರವರೆಗೆ ರಾಯರ 355ನೇ ಆರಾಧನಾ ಮಹೋತ್ಸವ ಆ.27ರಂದು ಧ್ವಜಾರೋಹಣ, ಗೋ ಅಶ್ವಪೂಜೆ ನೆರವೇರಿಸುವ ಮೂಲಕ ಆರಾಧನೆಗೆ…

41 minutes ago

ಭಾರೀ ಮಳೆ ಮುನ್ಸೂಚನೆ : ಕರಾವಳಿ ಭಾಗಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ – vishwanews24

ಭಾರೀ ಮಳೆ ಮುನ್ಸೂಚನೆ : ಕರಾವಳಿ ಭಾಗಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ…

45 minutes ago

ಮಲ್ಪೆ : ಬೋಟ್‌ನಲ್ಲಿ ಮೀನುಗಾರ ಕಾರ್ಮಿಕನ ಕೊಲೆ ಪ್ರಕರಣ: ಆರೋಪಿ ಬಂಧನ – vishwanews24

ಮಲ್ಪೆ : ಬೋಟ್‌ನಲ್ಲಿ ಮೀನುಗಾರ ಕಾರ್ಮಿಕನ ಕೊಲೆ ಪ್ರಕರಣ: ಆರೋಪಿ ಬಂಧನ ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು…

52 minutes ago

ಉಡುಪಿ :ಆ. 27 ರಂದು ನೇರ ಸಂದರ್ಶನ – vishwanews24

ಉಡುಪಿ :ಆ. 27 ರಂದು ನೇರ ಸಂದರ್ಶನ   ಉಡುಪಿ : ನಗರದ ಡಿ.ಬಿ.ಎಸ್ ಬ್ಯಾಂಕ್, ಧರಣಿ ಆರ್ಕೇಡ್, ಕಲ್ಸಂಕ, ಗುಂಡಿಬೈಲು…

1 hour ago