ಯುವವಾಹಿನಿ (ರಿ.) ಹೆಜಮಾಡಿ ಘಟಕ ದ ವತಿಯಿಂದ ತುಳುವೆರೆ ತುಳಸಿ ಪರ್ಬ ಆಚರಣೆ : ಜೀವನದಲ್ಲಿ ಸಾಧನೆ ಮಾಡಲು ದೇವರ ದಯೆ ಅಗತ್ಯ : ಸುಮನ್ ತಲ್ವಾರ್ :vishwanews24

Featured, ಉಡುಪಿ

ಯುವವಾಹಿನಿ (ರಿ.) ಹೆಜಮಾಡಿ ಘಟಕ ದ ವತಿಯಿಂದ ತುಳುವೆರೆ ತುಳಸಿ ಪರ್ಬ ಆಚರಣೆ :ಜೀವನದಲ್ಲಿ ಸಾಧನೆ ಮಾಡಲು ದೇವರ ದಯೆ ಅಗತ್ಯ : ಸುಮನ್ ತಲ್ವಾರ್ .

kaup: ಜೀವನದಲ್ಲಿ ಅನೇಕೆ ಏಳು ಬೀಳುಗಳ ನಡುವೆ ವಿಶೇಷವಾದ ಸಾಧನೆ ಮಾಡಲು ದೇವರ ದಯೆ ಅಗತ್ಯ ಎಂದು ದಕ್ಷಿಣ ಭಾರತದ ಬಹು ಭಾಷಾ ಚಲನಚಿತ್ರ ನಟ ಸುಮನ್ ತಲ್ವಾರ್ ಅಭಿಪ್ರಾಯ ಪಟ್ಟರು . ಅವರು ದಿನಾಂಕ 09-11-2019 ರಂದು ಯುವವಾಹಿನಿ(ರಿ.)ಹೆಜಮಾಡಿ ಘಟಕದ ಆಶ್ರಯದಲ್ಲಿ ಜರುಗಿದ 8 ನೇ ವರ್ಷದ ತುಳುವೆರೆ ತುಳಸಿ ಪರ್ಬದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು .
ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ(ರಿ.)ಹೆಜಮಾಡಿ ಘಟಕದ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಹರೀಶ್ ರವರು ವಹಿಸಿದ್ದರು .
ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ.)ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ನರೇಶ್ ಕುಮಾರ್ ಸಸಿಹಿತ್ಲು , ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷರಾದ ಶ್ರೀ ಲೋಕೇಶ್ ಅಮೀನ್ , ಹೆಜಮಾಡಿ ಬ್ರಹ್ಮ್ಮ ಲಿಂಗೇಶ್ವರ ಆಲಡೆಯ ಪ್ರದಾನ ಅಧ್ಯಕ್ಷರಾದ ಶ್ರೀನಿವಾಸ್ ಭಟ್ , ಶಿರ್ವದ ವಕೀಲರಾದ ಮೆಲ್ವಿನ್ ಡಿ’ಸೋಜಾ , ಉದ್ಯಮಿ ಶೇಖಬ್ಬ ಉಚ್ಚಿಲ, ನಾರಾಯಣ ಗುರು ಅರ್ಬನ್ ಕೋ -ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಹರೀಶ್ ಚಂದ್ರ ಅಮೀನ್ ಮುಂತಾದವರು ಉಪಸ್ಥಿತರಿದ್ದರು .
ವೇದಿಕೆಯಲ್ಲಿ ಕಾರ್ಯದರ್ಶಿಯಾದ ಶ್ರೀ ರಾಕೇಶ್ , ಕಾರ್ಯಕ್ರಮದ ನಿರ್ದೇಶಕ ಶ್ರೀ ಮಹೇಂದ್ರ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು .
ಕಾರ್ಯಕ್ರಮದಲ್ಲಿ ತುಳುನಾಡಿನ ಸಾಂಪ್ರದಾಯಿಕ ಆಚರಣೆಯ ಪೂಜಾ ವಿಧಿ ವಿಧಾನಗಳನ್ನು ಹೆಜಮಾಡಿ ಗುರು ಮಂದಿರದ ಅರ್ಚಕ ಹರೀಶ್ ಶಾಂತಿ ಯವರ ನೇತೃತ್ವದಲ್ಲಿ ನೆರವೇರಿಸಲಾಯಿತು .
ಯುವವಾಹಿನಿ (ರಿ.)ಹೆಜಮಾಡಿ ಘಟಕದ ಮಾಜಿ ಅಧ್ಯಕ್ಷ ಪ್ರಬೋಧ್ ಚಂದ್ರ ಹೆಜಮಾಡಿ ಪ್ರಸ್ತಾವನೆ ಗೈದರು . ಘಟಕದ ಮಹಿಳಾ ಸದಸ್ಯರು ಪ್ರಾರ್ಥನೆ ಗೈದರು . ಅಧ್ಯಕ್ಷೆ ಚಂದ್ರಾವತಿ ಹರೀಶ್ ಸ್ವಾಗತಿಸಿದರು . ಮನೋಹರ್ ಹೆಜ್ಮಾಡಿ ಹಾಗೂ ಧೀರಜ್ ಕೋಡಿ ನಿರೂಪಿಸಿದರು . ಕಾರ್ಯದರ್ಶಿ ರಾಕೇಶ್ ವಂದಿಸಿದರು .