Featured

ಯುವ ಒಲಿಂಪಿಕ್ಸ್ : ಭಾರತಕ್ಕೆ ಮೊತ್ತ ಮೊದಲ ಐತಿಹಾಸಿಕ ಚಿನ್ನ ಗೆದ್ದುಕೊಟ್ಟ ಜೆರೆಮಿ

ಬ್ಯೂನಸ್‌ ಐರಿಸ್‌, ಆರ್ಜೆಂಟೀನಾ : ಇಲ್ಲೀಗ ಸಾಗುತ್ತಿರುವ ಮೂರನೇ ಯುವ ಒಲಿಂಪಿಕ್ಸ್‌ನಲ್ಲಿ ವೇಟ್‌ ಲಿಫ್ಟರ್‌ ಜೆರೆಮಿ ಲ್ಯಾರಿನ್ನುಂಗ ಅವರು ಇಂದು ಮಂಗಳವಾರ ಭಾರತಕ್ಕೆ ಮೊತ್ತ ಮೊದಲ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದುಕೊಟ್ಟರು.

ಲ್ಯಾರಿನ್ನುಂಗ ಅವರು ತನ್ನ ಅಂತಿಮ ಯತ್ನದಲ್ಲಿ 150 ಕಿಲೋ ಭಾರ ಎತ್ತುವುದರೊಂದಿಗೆ ‘ಎ’ ಬಣದಲ್ಲಿ ಪುರುಷರ 62 ಕೆಜಿ ವಿಭಾಗದಲ್ಲಿ 274 ಕೆಜಿ ಸಂಯುಕ್ತ ಭಾರ ಎತ್ತುವ ಸಾಧನೆಯನ್ನು ಮಾಡುವ ಮೂಲಕ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದುಕೊಂಡರು.

15ರ ಹರೆಯದ ಲ್ಯಾರಿನ್ನುಂಗ ಅವರು ಸ್ನ್ಯಾಚ್‌ನಲ್ಲಿ 120 ಕಿಲೋ ಮತ್ತು 124 ಕಿಲೋ, ಕ್ಲೀನ್‌ ಆಯಂಡ್‌ ಜರ್ಕ್‌ನಲ್ಲಿ 142 ಕಿಲೋ ಮತ್ತು 150 ಕಿಲೋ ಎತ್ತುವ ಮೂಲಕ ಟರ್ಕಿಯ ತೋಪ್‌ಟಾಸ್‌ ಕಾನೇರ್‌ ಷವರನ್ನು (263 ಕಿಲೋ) ಮತ್ತು ಕೊಲಂಬಿಯಾ ದ ಜೋಸ್‌ ಮಂಜಾರಿಸ್‌ (260 ಕಿಲೋ) ಅವರನ್ನು ಹಿಂದಿಕ್ಕಿದರು.

ಈ ಮೊದಲ ಭಾರತೀಯ ತಂಡ ತುಷಾರ್‌ಮಾನೇ (10 ಮೀ. ಏರ್‌ ರೈಫ‌ಲ್‌) ಮೆಹೂಲಿ ಘೋಷ್‌ (10 ಮೀ. ಏರ್‌ ರೈಫ‌ಲ್‌) ಮತ್ತು ತಬಾಬಿ ದೇವಿ (44 ಕಿಲೋ ಜೂಡೋ) ಅವರು ಒಟ್ಟು ಮೂರು ಬೆಳ್ಳಿ ಪದಕ ಗೆಲ್ಲುವ ಉತ್ತಮ ಸಾಧನೆಯನ್ನು ದಾಖಲಿಸಿದ್ದರು. 2014ರ ಚೀನ ಯುವ ಒಲಿಂಪಿಕ್ಸ್‌ ನಲ್ಲಿ ಭಾರತ ಎರಡು ಪದಕಗಳನ್ನು ಗೆದ್ದಿತ್ತು. ಈ ಬಾರಿ ಭಾರತದ ಸಾಧನೆ 1 ಚಿನ್ನ ಮೂರು ಬೆಳ್ಳಿ ಆಗಿದೆ.

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

3 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

3 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

3 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

3 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

3 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

3 days ago