Featured

ಸ್ವಪ್ರಯತ್ನದಿಂದ ದೊಡ್ಡ ದೊಡ್ಡ ಸಂಖ್ಯೆಗಳನ್ನು ಕೂಡಿಸಿ, ಗುಣಿಸಿ, ಭಾಗಿಸಿ ಸೆಕೆಂಡುಗಳಲ್ಲಿ ಉತ್ತರಿಸುವ ೧೧ ವರ್ಷದ ಶ್ರೀನಿಧಿ ; ಈತನಿಗೆ ಜಗತ್ತಿನ ಅತಿ ವೇಗದ ಮಾನವ ಕ್ಯಾಲ್ಕುಲೇಟರ್‌ ಹಾಗೂ ಪ್ರಸಿದ್ಧ ಗಣಿತಜ್ಞನಾಗುವ ಆಸೆ..

ಉಡುಪಿ: ಬ್ರಹ್ಮಾವರದ ಲಿಟ್ಲರಾಕ್‌ ಇಂಡಿಯನ್‌ ಸ್ಕೂಲ್‌ನಲ್ಲಿ ಆರನೇಯ ತರಗತಿ ಓದುತ್ತಿರುವ ಈ ಪೋರನ ಹೆಸರು ಶ್ರೀನಿಧಿ ನೀರಮಾನ್ವಿ ..ವಯಸ್ಸು 11.  ಹತ್ತು ಅಂಕಿಗಳನ್ನು ಹತ್ತು ಸಾಲುಗಳಲ್ಲಿ ಕೂಡಿಸಲು ಹೇಳಿದರೆ 25 ಸೆಕಂಡುಗಳಲ್ಲಿ ಮುಗಿಸಬಲ್ಲ. ಇದರ ವಿಶ್ವ ದಾಖಲೆ 10 ಸೆಕೆಂಡು. ಎಂಟು ಅಂಕಿಗಳನ್ನು ಎಂಟು ಅಂಕಿಗಳಿಂದ ಗುಣಿಸಲು ಹೇಳಿದರೆ 40 ಸೆಕೆಂಡುಗಳು ಸಾಕು. ಇದರ ವಿಶ್ವ ದಾಖಲೆ 19 ಸೆಕೆಂಡು. ಕ್ಲಿಷ್ಟಕರವಾದ ವರ್ಗಮೂಲವನ್ನು 21 ಸೆಕೆಂಡುಗಳಲ್ಲಿ ಹೇಳಬಲ್ಲ. ಇದರ ವಿಶ್ವದಾಖಲೆ 13 ಸೆಕೆಂಡು. ನಿಮ್ಮ ಹುಟ್ಟಿದ ದಿನಾಂಕವನ್ನು ಹೇಳಿದರೆ ತತ್‌ಕ್ಷಣ ವಾರಗಳನ್ನು ಹೇಳುತ್ತಾನೆ ..

ಶ್ರೀನಿಧಿ ಅಬಾಕಸ್‌ ಮತ್ತು ವೇದ ಗಣಿತ ಕಲಿತಿದ್ದಾನೆ. ಅಬಾಕಸ್‌ ಉಪ ಕರಣಾಧಾರಿತವಾದರೆ ವೇದ ಗಣಿತದಿಂದ ಕ್ಷಿಪ್ರ ಗತಿಯಲ್ಲಿ ಲೆಕ್ಕ ಹಾಕುವ ಸಾಮರ್ಥ್ಯ ಬೆಳೆಸುತ್ತದೆ. ಈತನ ಗುರಿ ಗಣಿತಜ್ಞನಾಗಿ ಸೂತ್ರಗಳನ್ನು ಕಂಡು ಹಿಡಿಯುವುದು.

ಶ್ರೀನಿಧಿ ಜರ್ಮನಿಯ ವೋಲ್ಟ್ಸ್ ಬರ್ಗ್‌ನಲ್ಲಿ ಇತ್ತೀಚೆಗಷ್ಟೇ ಮುಗಿದ 8 ನೇ ಮೆಂಟಲ್‌ ಕ್ಯಾಲ್ಕುಲೇಶನ್‌ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ. ಜಗತ್ತಿನ ವಿವಿಧ ದೇಶಗಳ 40 ಮಂದಿ ಭಾಗವಹಿಸಿದ್ದರು. ಜರ್ಮನಿಯ ರೆಕಾರ್ಡ್‌ ಹೋಲ್ಡರ್‌ ಸಂಸ್ಥೆಯೊಂದು ಇದನ್ನು ಆಯೋಜಿಸಿದ್ದು, ಭಾರತದಿಂದ ಪಾಲ್ಗೊಂಡ ನಾಲ್ವರ ಪೈಕಿ ಕರ್ನಾಟಕದಿಂದ ಶ್ರೀನಿಧಿ ಮಾತ್ರ. ಒಟ್ಟೂ 40 ಮಂದಿ ಸ್ಪರ್ಧಿಗಳಲ್ಲಿ ಈತನೇ ಕಿರಿಯ.

ರಾಜ್ಯದಿಂದ ಯಾರೂ ಇದುವರೆಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ ಎನ್ನುತ್ತಾರೆ ಅವನ ತಂದೆ ದುರ್ಗಾಪ್ರಸಾದ್‌. ಅಂಕ ಗಣಿತದ ಪ್ರತಿಭೆಗಳನ್ನು ಪ್ರೋತ್ಸಾಹಿಸಲು 2 ವರ್ಷಗಳಿಗೊಮ್ಮೆ ಈ ಸ್ಪರ್ಧೆ ನಡೆಸಲಾಗುತ್ತದೆ. ಅಂತರ್ಜಾಲದಲ್ಲಿ ಪೂರ್ವ ನಿಗದಿಯಂತೆ ಸ್ಪರ್ಧೆಯ ಪ್ರಕಟನೆ ನೀಡಲಾಗುವುದು. ಇದೊಂದು ಮುಕ್ತ ಸ್ಪರ್ಧೆ ಆಸಕ್ತರು ವಯೋಮಿತಿಯ ಭೇದವಿಲ್ಲದೆ ನೋಂದಣಿ ಮಾಡಿಕೊಳ್ಳಬಹುದು.

ಶ್ರೀನಿಧಿಯ ತಂದೆ ಮತ್ತು ತಾಯಿ ಮೂಲತಃ ರಾಯಚೂರು ಜಿಲ್ಲೆ ಮಾನ್ವಿ ಸಮೀಪದ ನೀರಮಾನವಿಯವರಾದ ಬಳ್ಳಾರಿ ನಿವಾಸಿ, ಗಣಿ ಎಂಜಿನಿಯರ್‌ ದುರ್ಗಾಪ್ರಸಾದ್‌ ಮತ್ತು ಉಡುಪಿ ಎಲ್ಲೆ„ಸಿ ಸಹಾಯಕ ಆಡಳಿತ ಅಧಿಕಾರಿ ವಿ. ಸರಿತಾ. ಶ್ರೀನಿಧಿ ಬಳ್ಳಾರಿಯಲ್ಲಿ ಅಬಾಕಸ್‌ ಕಲಿತಿದ್ದ. ಮೈಸ್‌ನಲ್ಲಿ ವೇದಗಣಿತ ತಿಳಿದ. ದೊಡ್ಡ ದೊಡ್ಡ ಸಂಖ್ಯೆಗಳನ್ನು ಕೂಡಿಸಿ, ಗುಣಿಸಿ, ಭಾಗಿಸುವ, ವರ್ಗಮೂಲ ಕ್ಯಾಲೆಂಡರ್‌ ದಿನ ಪತ್ತೆ ಹಚ್ಚುವುದನ್ನು ಸ್ವಪ್ರಯತ್ನದಿಂದ ಕಲಿತನಂತೆ. ಈತ ಬ್ರಹ್ಮಾವರದ ಲಿಟ್ಲರಾಕ್‌ ಇಂಡಿಯನ್‌ ಸ್ಕೂಲ್‌ನ ವಿದ್ಯಾರ್ಥಿ. “ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಅವಕಾಶ ಕಲ್ಪಿಸಿದರೆ ಮಾತ್ರ ಬೆಳೆಯಬಲ್ಲದು’ ಎನ್ನುತ್ತಾರೆ ದುರ್ಗಾಪ್ರಸಾದ್‌.

ನಾನು ಜಗತ್ತಿನ ಅತಿ ವೇಗದ ಮಾನವ ಕ್ಯಾಲ್ಕುಲೇಟರ್‌ ಆಗಬೇಕೆಂದಿದ್ದೇನೆ. ಪ್ರಸಿದ್ಧ ಗಣಿತಜ್ಞನಾಗುತ್ತೇನೆ. ಸುಲಭದ ಸೂತ್ರಗಳನ್ನು ಕಂಡು ಹಿಡಿಯುತ್ತೇನೆ.
ಶ್ರೀನಿಧಿ ನೀರಮಾನವಿ

 

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago