Featured

ಯೂಟ್ಯೂಬ್‌‌ ವೀಕ್ಷಿಸಿ ನಕಲಿ ನೋಟು ಮುದ್ರಣ : ಆರೋಪಿ ಪೊಲೀಸ್ ವಶಕ್ಕೆ -Vishwanews24

ಯೂಟ್ಯೂಬ್‌‌ ವೀಕ್ಷಿಸಿ ನಕಲಿ ನೋಟು ಮುದ್ರಣ : ಆರೋಪಿ ಪೊಲೀಸ್ ವಶಕ್ಕೆ -Vishwanews24

ವಿಜಯವಾಡ : ಮನೆಯಲ್ಲೇ ಕುಳಿತು ಯೂಟ್ಯೂಬ್‌‌ ವೀಕ್ಷಿಸಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಪೂರ್ವ ಗೋದಾವರಿಯ ಅನಪಾರ್ಥಿ ನಿವಾಸಿ ಕೃಷ್ಣ ರೆಡ್ಡಿ ಎಂದು ಗುರುತಿಸಲಾಗಿದೆ.

ನಕಲಿ ನೋಟುಗಳನ್ನು ಹೊಂದಿರುವ ಆರೋಪದ ಮೇರೆಗೆ ಗೊಟಿಮಕ್ಕಲ ರವಿಶಂಕರ್​, ನಾಗ ಮಲ್ಲೇಶ್ವರಿ, ದುಲಾಮ್​ ಸಾಯಿ, ಪ್ರದೀಪ್, ಭಿಮಾವರಪು ಯಾಗ್ನ ಎಂಬವರ ವಿರುದ್ದ ಜೂನ್‌‌ 23ರಂದು ಇಬ್ರಾಹಿಂಪಟ್ಟಣಂ ಪೊಲೀಸರು ಪ್ರಕರಣ ದಾಖಲಿಸಿದ್ದರು.

ವಿಚಾರಣೆಯ ವೇಳೆ ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದರು. ಈ ಮಾಹಿತಿಯ ಆಧಾರದ ಮೇಲೆ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ ರೆಡ್ಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ನಕಲಿ ನೋಟುಗಳನ್ನು ಹೇಗೆ ತಯಾರಿಸುವುದು ಎನ್ನುವುದನ್ನು ಕೃಷ್ಣ ರೆಡ್ಡಿ ಯೂಟ್ಯೂಬ್‌ಗಳ ವಿಡಿಯೋ ನೋಡಿ ತಿಳಿದಿದ್ದ. ಅದರಂತೆ ಆತ ಮನೆಯಲ್ಲಿ ಕುಳಿತು ನಕಲಿ ಹಣ ಮುದ್ರಿಸುತ್ತಿದ್ದ. ಪ್ರಕರಣದ ಪ್ರಮುಖ ಆರೋಪಿ ಕೃಷ್ಣ ರೆಡ್ಡಿಯ ಮನೆಯಲ್ಲಿದ್ದ ಒಂದು ಪ್ರಿಂಟರ್​, ಸ್ಕ್ಯಾನರ್ ಸೇರಿದಂತೆ ಕಟ್ಟರ್‌ ಅನ್ನು ಪೊಲೀಶರು ವಶಪಡಿಸಿಕೊಂಡಿದ್ದಾರೆ.

ಆರೋಪಿ ಮನೆಯಲ್ಲೇ ಕುಳಿತು 200 ಹಾಗೂ 500 ರೂ. ನೋಟುಗಳನ್ನು ಮುದ್ರಿಸುತ್ತಿದ್ದ. ಸ್ಟೇಷನರಿ ಶಾಪ್‌ನಲ್ಲಿ ಸಿಗುತ್ತಿದ್ದ ಪೇಪರ್‌ನಿಂದ ನೋಟು ಪ್ರಿಂಟ್‌ ಮಾಡುತ್ತಿದ್ದು, ನಂತರ ನಕಲಿ ನೋಟನ್ನು ಒರಿಜಿನಲ್‌ ನೋಟಿನ ಗಾತ್ರದಲ್ಲೇ ಕತ್ತರಿಸುತ್ತಿದ್ದ. ಇದರಿಂದ ಜನರಿಗೆ ಅದನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ.

ಆರೋಪಿ ನಕಲಿ ನೋಟು ತಯಾರಿಕೆಯಿಂದಲೇ ಸುಮಾರು 2 ಕೋಟಿ. ರೂ. ಸಂಪಾದಿಸಿದ್ದ ಎಂದು ತಿಳಿದುಬಂದಿದೆ.

ಪ್ರಮುಖ ಆರೋಪಿ ಹಾಗೂ ಇತರರ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Vishwa News 24

Recent Posts

ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ – vishwanews24

ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ ಉಡುಪಿ:…

1 day ago

ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ – vishwanews24

ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ ಉಡುಪಿ: ಸ್ವಯಂ ಚಾಲಿತ…

1 day ago

ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ – vishwanews24

ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ ಹೆಬ್ರಿ: ಪುವಾಸಿ ತಾಣವಾದ ಕೂಡು ಫಾಲ್ಸ್ ಪುವೇಶಕ್ಕೆ ಅರಣ್ಯ…

1 day ago

ಉಡುಪಿ : ವ್ಯಕ್ತಿ ನಾಪತ್ತೆ – vishwanews24

ಉಡುಪಿ : ವ್ಯಕ್ತಿ ನಾಪತ್ತೆ      ಉಡುಪಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬ…

1 day ago

ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ – vishwanews24

ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ ಕೊಲ್ಕತ್ತಾ: ಪಶ್ಚಿಮ…

1 day ago

ಉಡುಪಿ : ಜು. 10 ರಂದು ನೇರ ಸಂದರ್ಶನ – vishwanews24

ಉಡುಪಿ : ಜು. 10 ರಂದು ನೇರ ಸಂದರ್ಶನ      ಉಡುಪಿ : ಉಡುಪಿಯ ವಿ.ಪಿ ನಗರದ ಸುಧಾ ಫರ್ನೀರ‍್ಸ್ ಬಿಲ್ಡಿಂಗ್s…

1 day ago