ರಂಗೇರಿದ ಉಡುಪಿ ವಿಧಾನ ಸಭಾ ಕ್ಷೇತ್ರ, ಶಿರೂರು ಶ್ರೀಗಳ ಬಳಿಕ ಮತ್ತೋರ್ವ ಬಲಿಷ್ಠ ಪಕ್ಷೇತರ ಅಭ್ಯರ್ಥಿ ಕಣಕ್ಕೆ..!

ಉಡುಪಿ

ಉಡುಪಿ: ಕಳೆದ ಒಂದು ತಿಂಗಳಿನಿಂದ ಉಡುಪಿ ವಿಧಾನಸಭಾ ಕ್ಷೇತ್ರ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡುತ್ತಿದೆ. ಒಂದೆಡೆ ಪ್ರಮೋದ್ ಮಧ್ವರಾಜರ ಬಿಜೆಪಿ ಸೇರ್ಪಡೆಯ ಸುದ್ದಿಯಾದರೇ ಮತ್ತೊಂದೆಡೆ ಶಿರೂರು ಶ್ರೀಗಳು ಚುನಾವಣ ರಂಗಕ್ಕೆ ಇಳಿದಿರುವುದು. ಈಗ ಸಮಾಜಸೇವೆಯ ಮುಖಾಂತರ ಜನಮಾನಸರಾಗಿ ಆಟೋ ಚಾಲಕರಿಗೆ ಆಶ್ರಯದಾತನಾಗಿ ಹೆಸರು ಪಡೆದಿರುವ ಆಶ್ರಯದಾತ ರಮೇಶ್ ಶೆಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದಾರೆ.

ಒಟ್ಟಾರೆಯಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣೆ ದಿನಕಳೆದಂತೆ ರಂಗೇರುತ್ತಿದ್ದು ದಿಕೊಬ್ಬರಂತೆ ಹೊಸ ಮುಖಗಳು ಅಖಾಡಕ್ಕಿಳಿಯುತ್ತಿವೆ ಆದರೇ ಮತದಾರನ ಚಿತ್ತ ಯಾವಾ ಕಡೆ ಇದೆ ಎಂಬುದನ್ನ ಕಾದು ನೋಡಬೇಕಾಗಿದೆ.

ಸಮಾಜಸೇವೆಯಲ್ಲಿ ಕೀರ್ತಿಯನ್ನ ಪಡೆದಿರುವ ರಮೇಶ್ ಶೆಟ್ಟಿ ಈ ಬಾರಿ ಚುಣಾವಣ ಅಖಾಡಕ್ಕೆ ಇಳಿದಿರುವುದು ಅಭಿಮಾನಿಗಳಲ್ಲಿ ಸಂತಸ ಹೆಚ್ಚಾಗಿದೆ.