ರಂಜಾನ್ ಅವಧಿಯಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಕೆಲಸದ ಸಮಯದಲ್ಲಿ ವಿನಾಯಿತಿಗೆ ಸಿಎಂ ಗೆ ಮನವಿ – vishwanews24

Featured, ರಾಜ್ಯ ನ್ಯೂಸ್

ರಂಜಾನ್​ ವೇಳೆ ಮುಸ್ಲಿಂ ಸರ್ಕಾರಿ ನೌಕರರಿಗೆ ಕೆಲಸದ ಅವಧಿಯಲ್ಲಿ 1 ಗಂಟೆ ವಿನಾಯಿತಿಗೆ ಸಿಎಂಗೆ ಮನವಿ ಪತ್ರ

ಬೆಂಗಳೂರು: ರಂಜಾನ್  ಸಮಯದಲ್ಲಿ ಉಪವಾಸ ತೊರೆಯಲು ಮುಸ್ಲಿಂ ಸರ್ಕಾರಿ ನೌಕರರಿಗೆ  ಕೆಲಸದ ಸಮಯದಲ್ಲಿ ಒಂದು ಗಂಟೆ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರಿಗೆ ಕೆಪಿಸಿಸಿ ಉಪಾಧ್ಯಕ್ಷರಾದ ಸೈಯದ್​ ಅಹ್ಮದ್ ಮತ್ತು ನಜೀರ್​ ಅಹ್ಮದ್​ ಪತ್ರ ಬರೆದಿದ್ದಾರೆ. ಈಗಾಗಲೇ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ರಂಜಾನ್​ ಉಪವಾಸ ತೊರೆಯಲು ಅನುಕೂಲವಾಗುವಂತೆ ಮುಸ್ಲಿಂ ಸರ್ಕಾರಿ ನೌಕರರಿಗೆ ಕೆಲಸದ ಅವಧಿಯಲ್ಲಿ ಅಲ್ಲಿನ ಸರ್ಕಾರಗಳು ವಿನಾಯಿತಿ ನೀಡುತ್ತಿವೆ. ಅದೇರೀತಿ ರಾಜ್ಯದಲ್ಲೂ ಕೂಡ ವಿನಾಯಿತಿ ನೀಡುವಂತೆ ಕೋರಿ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದಾರೆ.

ಕಾರ್ಕಳ: ಫೆ.23ಕ್ಕೆ ಮಡಿವಾಳ ಮಾಚಿದೇವ ಟ್ರೋಫಿ-2025 – vishwanews24

ಪತ್ರದಲ್ಲಿ ಏನಿದೆ?
“ರಂಜಾನ್​ ತಿಂಗಳು ಸಮೀಸುತ್ತಿದ್ದು, ಈಗಾಗಲೇ ಆಂಧ್ರಪ್ರದೇಶ, ತೆಲಂಗಾಣ ಸರ್ಕಾರವು ರಂಜಾನ್​ ತಿಂಗಳಲ್ಲಿ ಮುಸ್ಲಿಂ ಬಾಂಧವರು ಒಂದು ತಿಂಗಳು ಉಪವಾಸ ಇರುತ್ತಾರೆ. ಹೀಗಾಗಿ, ಅಲ್ಲಿನ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಜೆ 4 ಗಂಟೆಯ ನಂತರ ಅವರುಗಳ ನಿವಾಸಗಳಲ್ಲಿ ಉಪವಾಸ ಬಿಡಲು (ಇಪ್ತಿಯಾರ್​) ಅನುಮತಿ ನೀಡಲಾಗಿದೆ.”

“ಆದುದರಿಂದ ದಯಮಾಡಿ ತಾವು ನಮ್ಮ ಕರ್ನಾಟಕದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಜೆ 4 ಗಂಟೆಯ ನಂತರ ಅವರುಗಳ ನಿವಾಸದಲ್ಲಿ ಉಪವಾಸ ಬಿಡಲು (ಇಪ್ತಿಯಾರ್​) ಅನುಮತಿ ನೀಡುವಂತೆ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ” ಎಂದು ಪತ್ರದಲ್ಲಿ ಬರೆಯಲಾಗಿದೆ.

ಉಡುಪಿ: ಗ್ಯಾರಂಟಿ ಯೋಜನೆಯ ಸವಲತ್ತು ಪಡೆಯಲು ಸಮಸ್ಯೆಗಳು ಎದುರಾಗುತ್ತಿದ್ದರೆ ನೇರವಾಗಿ ಕಚೇರಿಗೆ ಭೇಟಿಯಾಗಿ ಮಾಹಿತಿ ಪಡೆಯಿರಿ : ರಮೇಶ್ ಕಾಂಚನ್ – vishwanews24

Leave a Reply