ರಕ್ಷಣೆಗಾಗಿ ಠಾಣೆಗೆ ಪೊಲೀಸರು ಶಾಮಿಯಾನ ಹಾಕಿಸಿಕೊಂಡಿದ್ದಾರೆ: ಡಿಕೆಶಿ ಸ್ಪಷ್ಟನೆ – vishwanews24
ರಕ್ಷಣೆಗಾಗಿ ಠಾಣೆಗೆ ಪೊಲೀಸರು ಶಾಮಿಯಾನ ಹಾಕಿಸಿಕೊಂಡಿದ್ದಾರೆ: ಡಿಕೆಶಿ ಸ್ಪಷ್ಟನೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಇರುವ ಠಾಣೆಗೆ ರಕ್ಷಣೆಗಾಗಿ ಪೊಲೀಸರು ಶಾಮೀಯಾನ ಹಾಕಿಸಿಕೊಂಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ದರ್ಶನ್ ಇರುವ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಬಗ್ಗೆ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಪ್ರಕರಣ ಸಂಬಂಧ 13 ಮಂದಿ ಆರೋಪಿಗಳಿದ್ದಾರೆ. ಬೆಳಗ್ಗೆಯಿಂದ ಮಾಧ್ಯಮದವರು ಕ್ಯಾಮೆರಾ ಹಿಡಿದು ಕುಳಿತಿರುತ್ತಾರೆ. ಪೊಲೀಸರಿಗೆ ಯಾವುದೇ ಅಡತಡೆಗಳಿಲ್ಲದೇ ವಿಚಾರಣೆ ಮಾಡಲು ಅವಕಾಶಬೇಕು. ಆ ಹಿತದೃಷ್ಟಿಯಿಂದ ರಕ್ಷಣೆಗಾಗಿ ಪೊಲೀಸರು ಶಾಮೀಯಾನ ಹಾಕಿಸಿಕೊಂಡಿದ್ದಾರೆ ತಿಳಿಸಿದರು.
ಮಂಗಳೂರು :ನಾನು ಒಳ್ಳೆಯವರಿಗೆ ಕಾಣುತ್ತೇನೆ, ಸಮಾಜ ವಿರೋಧಿಗಳಿಗೆ ಕಾಣುವುದಿಲ್ಲ : ಯು.ಟಿ. ಖಾದರ್ – vishwanews24
ದರ್ಶನ್ ಪ್ರಕರಣ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡದ ಆರೋಪದ ಕುರಿತು ಮಾತನಾಡಿದ ಅವರು, ಸರ್ಕಾರದ ಯಾವ ಒತ್ತಡವೂ ಇಲ್ಲ, ಈ ಬಗ್ಗೆ ನಾನು ವಿಚಾರಿಸಿದ್ದೇನೆ. ನಮ್ಮ ಗೃಹ ಸಚಿವರಾದ ಜಿ. ಪರಮೇಶ್ವರ್ ಅವರು ಇದರಲ್ಲಿ ಇನ್ವಾಲ್ ಆಗಿಲ್ಲ. ಯಾರೂ ಕೂಡ ಈ ಕೇಸ್‌ನಲ್ಲಿ ಹಸ್ತಕ್ಷೇಪ ಮಾಡ್ತಿಲ್ಲ. ಈ ಪ್ರಕರಣದ ಬಗ್ಗೆ ನಾವು ಪ್ರತಿಕ್ರಿಯೆ ಕೂಡ ಮಾಡುತ್ತಿಲ್ಲ ಎಂದು ಹೇಳಿದರು.
ಎಬಿವಿಪಿ ಆಗ್ರಹಕ್ಕೆ ಮೊದಲ ಹಂತದ ಸ್ಪಂದನೆ: ಆಜ್ರಿಯಿಂದ ಕುಂದಾಪುರಕ್ಕೆ ಹೊಸ ಬಸ್ – vishwanews24
