ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ 5 ಕೋಟಿ ರೂ. ಡೀಲ್ ನಡೆದಿದೆ : HDK -Vishwanews24

Featured, ರಾಜ್ಯ ನ್ಯೂಸ್

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ 5 ಕೋಟಿ ರೂ. ಡೀಲ್ ನಡೆದಿದೆ : HDK -Vishwanews24

ಪ್ರಕರಣದ ತನಿಖೆಯನ್ನು ಮಾಡಿಸುವುದು ಸರ್ಕಾರದ ಜವಾಬ್ದಾರಿ..

ಮೈಸೂರು : ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ 5 ಕೋಟಿ ರೂ. ಡೀಲ್ ನಡೆದಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ 5 ಕೋಟಿ ರೂ. ವ್ಯವಹಾರ ನಡೆದಿದೆ. ಪ್ರಕರಣದಲ್ಲಿ ದೊಡ್ಡ ದೊಡ್ಡವರ ಕೈವಾಡವಿದೆ. ಕಳೆದ ಮೂರು ತಿಂಗಳಿಂದ ಈ ಡೀಲ್ ನಡೆದಿದೆ. ಪ್ರಕರಣದ ತನಿಖೆಯನ್ನು ಮಾಡಿಸುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

ನನ್ನ ಹತ್ತಿರ ಇನ್ನೂ ಹತ್ತೊಂಭತ್ತು ಸಿಡಿ ಇವೆ ಅಂತ ಹೇಳ್ತಾರಲ್ಲಾ , ಹಾಗಿದ್ದರೇ.. ದಿನೇಶ್ ಕಲ್ಲಹಳ್ಳಿಯೇ ಸಿಡಿ ಮಾಡಿಸಿರಬೇಕು : ಹೆಚ್ ಡಿ ಕುಮಾರಸ್ವಾಮಿ -Vishwanews24

ರಮೇಶ್ ಜಾರಕಿಹೊಳಿ ಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಉದ್ದೇಶದಿಂದ ಸಿಡಿ ಬ್ಲಾಕ್ ಮೇಲ್ ಮಾಡಲಾಗಿದೆ. ಇದೀಗ ರಮೇಶ್ ಜಾರಕಿಹೊಳಿ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸುವಲ್ಲಿ ಸಫಲರಾಗಿದ್ದಾರೆ.

ನಾನು ಈ ಪ್ರಕರಣವನ್ನು ನೋಡಿ ಖುಷಿ ಪಡುವವನಲ್ಲ. ನಾನು ಒಂದು ಕಲ್ಲು ಹೊಡೆಯಬೇಕು ಎಂದು ಹೊಡೆಯಲ್ಲ.ನನಗೆ ತಿಳಿದುಬಂದಿರುವ ಮೂಲಗಳ ಮಾಹಿತಿ ಪ್ರಕಾರ ಸಿಡಿ ಪ್ರಕರಣದಲ್ಲಿ 5 ಕೋಟಿ ರೂ. ಡೀಲ್ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರ : ಮಾರ್ಚ್ 6ರಿಂದ 13ರವರೆಗೆ ವಾರ್ಷಿಕ ಜಾತ್ರೆ ಹಾಗೂ ಮಹಾ ಶಿವರಾತ್ರಿ ಮಹೋತ್ಸವ -Vishwanews24