ರಾಜಕೀಯಕ್ಕೆ ಬಂದ್ರೆ ಬಿಜೆಪಿ ಪಕ್ಷದ ಅಭ್ಯರ್ಥಿ ಆಗಬೇಕು ಎಂಬುದು ನನ್ನ ಆಸೆ ಆಗಿತ್ತು : ಯದುವೀರ್ ಒಡೆಯರ್ – Vishwanews24
ರಾಜಕೀಯಕ್ಕೆ ಬಂದ್ರೆ ಬಿಜೆಪಿ ಪಕ್ಷದ ಅಭ್ಯರ್ಥಿ ಆಗಬೇಕು ಎಂಬುದು ನನ್ನ ಆಸೆ ಆಗಿತ್ತು : ಯದುವೀರ್ ಒಡೆಯರ್
ಮೈಸೂರು : ಅಭಿವೃದ್ಧಿ ದೃಷ್ಟಿಕೋನ ನೋಡಿದಾಗ ಅದು ಬಿಜೆಪಿ ಕಡೆ ಇತ್ತು. ಹಾಗಾಗಿ ರಾಜಕೀಯಕ್ಕೆ ಬಂದ್ರೆ ಬಿಜೆಪಿ ಪಕ್ಷದ ಅಭ್ಯರ್ಥಿ ಆಗಬೇಕು ಎಂಬುದು ನನ್ನ ಆಸೆ ಆಗಿತ್ತು. ಎಂದು ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು..
ನನ್ನ ಪ್ರಕಾರಣದಲ್ಲಿ ರಾಜಪ್ರಭುತ್ವಕ್ಕೂ ರಾಜಕಾರಣಕ್ಕೂ ವ್ಯತ್ಯಾಸ ಇಲ್ಲ. ಹಿಂದಿನ ರಾಜರೂ ಕೂಡ ರಾಜಕೀಯದ ಮೂಲಕ ಕೆಲಸ ಮಾಡಿದ್ದಾರೆ. ಸಮಾಜದಲ್ಲಿ ಅಭಿವೃದ್ಧಿ ತರಬೇಕಾದರೆ ರಾಜಕಾರಣವೇ ಮಾರ್ಗ. ಟೀಕೆಗಳನ್ನು ಸ್ವೀಕರಿಸಿ ಮಾನ್ಯ ಇರೋದನ್ನ ತಗೋಬೇಕು. ಮೈಸೂರು ಕೊಡಗು ಕ್ಷೇತ್ರ ರಾಜ ಪ್ರಭುತ್ವದಿಂದಲೂ ಎಲ್ಲಾ ಕ್ಷೇತ್ರ ಅಭಿವೃದ್ಧಿ ಕಂಡಿದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಅದರ ಜೊತೆಗೆ ನನ್ನದೇ ಆದ ಫ್ಲೇವರ್ ಸೇರಿಸಬೇಕಿದೆ. ಪ್ರವಾಸೋದ್ಯಮ ದೃಷ್ಟಿಯಿಂದ ದಕ್ಷಿಣ ಭಾರತದ ಕೇಂದ್ರವಾಗಿ ಮೈಸೂರನ್ನು ಮಾಡಬೇಕು ಎಂದು ಹೇಳಿದರು.
ಲೋಕಸಭೆ ಚುನಾವಣೆ ಸ್ಪರ್ಧೆಗೆ ಅವಕಾಶ ಸಿಕ್ಕರೆ ನಾನು ವಿರೋಧ ಮಾಡುವುದಿಲ್ಲ: ಚಕ್ರವರ್ತಿ ಸೂಲಿಬೆಲೆ – Vishwanews24
ಆಧುನಿಕ ಯೋಗ ಕೇಂದ್ರವಾಗಿ ಮೈಸೂರು ಮಾಡುವ ಯೋಜನೆ ಇದೆ. ಕೇಂದ್ರದ ಯೋಜನೆಯನ್ನು ಚಿಕ್ಕ ಗ್ರಾಮಕ್ಕೂ ಮುಟ್ಟಿಸುವ ಕೆಲಸ ಮಾಡುತ್ತೇನೆ. ರಾಜಕಾರಣದಲ್ಲಿ ಬೇಕಾದಷ್ಟು ಸಮಾವಲು ಬಂದಿದೆ, ಮುಂದೆ ಬರುತ್ತೆ. ಅವೆಲ್ಲವನ್ನೂ ಸ್ವೀಕರಿಸಿ ನಾನು ಮುಂದುವರಿಯುತ್ತೇನೆ. ಧಾರ್ಮಿಕ, ಸಾಂಸ್ಕೃತಿಕ ದೃಷ್ಟಿಯಿಂದ ಅಭಿವೃದ್ಧಿ ಆಗಬೇಕು. ಆರೋಪ ಪತ್ಯಾರೋಪಕ್ಕೆ ಸಿದ್ದ ಆಗಿದ್ದೇನೆ, ಬಂದರೆ ಎದುರಿಸುತ್ತೇನೆ. ಪಕ್ಷ ತೀರ್ಮಾನ ಮಾಡಿದಂತೆ ಇತರ ಕ್ಷೇತ್ರಗಳಲ್ಲೂ ಪ್ರಚಾರ ಮಾಡುತ್ತೇನೆ ಎಂದರು.
ಯಡಿಯೂರಪ್ಪ ವಿರುದ್ಧ ದೂರು ನೀಡಿದ ಮಹಿಳೆ ಮಾನಸಿಕ ಅಸ್ವಸ್ಥೆ ಅಂತಾ ಹೇಳುತ್ತಿದ್ದಾರೆ : ಪರಮೇಶ್ವರ್ – Vishwanews24
