ರಾಜಕೀಯ ಭಿನ್ನಾಬಿಪ್ರಾಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರದ ಈ ಕ್ರಮವನ್ನು ಪ್ರತಿಯೊಬ್ಬರೂ ಸ್ವಾಗತಿಸಬೇಕು : ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕುರಿತ ಕೇಂದ್ರ ಸರ್ಕಾರ ಕ್ರಮವನ್ನು ಸೋಮವಾರ ಪ್ರಶಂಸಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ರಾಜಕೀಯ ಭಿನ್ನಾಭಿಪ್ರಾಯಗಳು ಅಥವಾ ವ್ಯಕ್ತಿಗತ ಹಿತಾಸಕ್ತಿಗಳನ್ನು ಬದಿಗೊತ್ತಿ ಎಲ್ಲರೂ ಸ್ವಾಗತಿಸಬೇಕು ಎಂದು ಹೇಳಿದೆ.

ಜಮ್ಮು ಕಾಶ್ಮೀರ ಸೇರಿದಂತೆ ರಾಷ್ಟ್ರೀಯ ಹಿತಾಸಕ್ತಿಯಿಂದ ಅತ್ಯಂತ ಅಗತ್ಯವಾಗಿದ್ದ ದಿಟ್ಟಕ್ರಮವನ್ನು ಕೈಗೊಂಡಿರುವ ಸರ್ಕಾರವನ್ನು ಅಭಿನಂದಿಸುವುದಾಗಿ ಹೇಳಿದೆ.

ರಾಜಕೀಯ ಭಿನ್ನಾಬಿಪ್ರಾಯಗಳು ಹಾಗೂ ವ್ಯಕ್ತಿಗತ ಹಿತಾಸಕ್ತಿಗಳು ಏನೇ ಇರಲಿ ಅವುಗಳನ್ನು ಬದಿಗೊತ್ತಿ ಸರ್ಕಾರದ ಈ ಕ್ರಮವನ್ನು ಪ್ರತಿಯೊಬ್ಬರೂ ಸ್ವಾಗತಿಸಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಟ್ವೀಟ್ ಮಾಡಿದ್ದಾರೆ.

ಪ್ರಮುಖ ಸಂವಿಧಾನಾತ್ಮಾಕ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂವಿಧಾನದ ವಿಧಿ 370 ರದ್ಧು ಪಡಿಸುವ ಸಂಬಂಧ ರಾಜ್ಯಸಭೆಯಲ್ಲಿ ಶಾಸನ ಬದ್ಧ ನಿರ್ಣಯ ಮಂಡಿಸಿದೆ.

ಪ್ರತಿಪಕ್ಷಗಳ ವಿರೋಧ ಹಾಗೂ ಆಕ್ರೋಶಗಳ ನಡುವೆಯೇ ಗೃಹ ಸಚಿವ ಅಮಿತ್ ಶಾ ಜಮ್ಮು ಕಾಶ್ಮೀರ ಪುನರ್ ವಿಂಗಡನಾ ವಿಧೇಯಕ 2019 ಮಂಡಿಸಿದರು.