ರಾಜಕೀಯ ಲಾಭಕ್ಕೆ ಕಮ್ಯೂನಲ್ ಕ್ರಿಮಿನಲ್‌ಗಳಿಗೆ ಸಪೋರ್ಟ್ ಮಾಡುವ ರಾಜನೀತಿ ದೇಶಕ್ಕೆ ಅಪಾಯಕಾರಿ : ಸಿ.ಟಿ.ರವಿ ಕಿಡಿ – vishwanews24

Featured, ರಾಜ್ಯ ನ್ಯೂಸ್

ರಾಜಕೀಯ ಲಾಭಕ್ಕೆ ಕಮ್ಯೂನಲ್ ಕ್ರಿಮಿನಲ್‌ಗಳಿಗೆ ಸಪೋರ್ಟ್ ಮಾಡುವ ರಾಜನೀತಿ ದೇಶಕ್ಕೆ ಅಪಾಯಕಾರಿ : ಸಿ.ಟಿ.ರವಿ ಕಿಡಿ

ಬೆಂಗಳೂರು: ಕೇವಲ ರಾಜಕೀಯ ಲಾಭಕ್ಕೆ ಕಮ್ಯೂನಲ್ ಕ್ರಿಮಿನಲ್‌ಗಳಿಗೆ ಸಪೋರ್ಟ್ ಮಾಡುವ ರಾಜನೀತಿ ದೇಶಕ್ಕೆ ಅಪಾಯಕಾರಿ. ಇದನ್ನು ಕಾಂಗ್ರೆಸ್ ಮುಂದುವರಿಸಿದೆ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿರೋರು ದೇಶ ಪ್ರೇಮಿಗಳಾ? ರೈತರ ಅಥವಾ ಕನ್ನಡ ಪ್ರೇಮಿಗಳಾ? ಅವರು ಮತಾಂಧರು ಎಂದು ಆಕ್ರೋಶ ಹೊರಹಾಕಿದರು.

ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ದಲಿತರಿಗೆ ಪೊಳ್ಳು ಭರವಸೆ ಕೊಡಲಿಲ್ಲ : ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ – vishwanews24

 

ತಮ್ಮ ಮತೀಯ ವಿಚಾರಕ್ಕಾಗಿ ಸಣ್ಣಸಣ್ಣ ವಿಷಯಕ್ಕೂ ಕೋಮುಗಲಭೆ ಎಬ್ಬಿಸುವ ಕ್ರಿಮಿನಲ್‌ಗಳು ಪೋಲೀಸ್ ಠಾಣೆ ಮೇಲೆ ಬೆಂಕಿ ಹಾಕಲು ಬರುತ್ತಾರೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡುತ್ತಾರೆ. ಅವರ ಕೇಸ್ ವಾಪಸ್ ತೆಗೆದುಕೊಳ್ಳುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಇವರಿಗೆ ಯಾವುದರಲ್ಲಿ ಹೊಡಿಬೇಕು. ಇವರ ರಾಜನೀತಿಗೆ ಯಾವುದರಲ್ಲಿ ಹೊಡಿಬೇಕು. ಶಬ್ದಗಳಿಂದ ಖಂಡಿಸಿದರೆ ಸಾಕಾಗೋದಿಲ್ಲ. ಜನ ಮುಖಕ್ಕೆ ಮಂಗಳಾರತಿ ಮಾಡಬೇಕು. ಕ್ಯಾಕರಿಸಿ ಉಗಿಬೇಕು, ಇವರ ಕೆಟ್ಟ ಮನಸ್ಥಿತಿಯ ರಾಜಕಾರಣಕ್ಕೆ ನಿದರ್ಶನ ಇದು ಎಂದು ಕೆಂಡಕಾರಿದರು.

ಪಿಯುಸಿ ವಿದ್ಯಾರ್ಥಿನಿ ಬದಲಿಗೆ ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆ ಬಂಧನ – vishwanews24

Leave a Reply