ರಾಜೀವ್‌ ಗಾಂಧಿಯವರ ಸಾವಿಗೆ ಬಿಜೆಪಿಯ ದ್ವೇಷವೇ ಕಾರಣ : ಕಾಂಗ್ರೆಸ್​ ನಾಯಕ ಅಹಮದ್​ ಪಟೇಲ್​ -Vishwanews24

Featured, ರಾಷ್ಟ್ರ ನ್ಯೂಸ್

ದೆಹಲಿ: ರಾಜೀವ್‌ ಗಾಂಧಿಯವರ ಸಾವಿಗೆ, ಬಿಜೆಪಿ ರಾಜೀವ್‌ ಗಾಂಧಿ ಮೇಲಿಟ್ಟಿದ್ದ ದ್ವೇಷವೇ ಕಾರಣ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಅಹ್ಮದ್‌ ಪಟೇಲ್‌ ಗುಡುಗಿದ್ದಾರೆ.

ರಾಜೀವ್​ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸುತ್ತಿರುವುದನ್ನು ವಿರೋಧಿಸಿ ಅಹಮದ್​ ಪಟೇಲ್​ ಟ್ವೀಟ್​ ಮಾಡಿದ್ದು, ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.

“ರಾಜೀವ್‌ ಗಾಂಧಿಯವರ ಹತ್ಯೆಗೆ ಯಾರು ಕಾರಣ? ಬಿಜೆಪಿ ಬೆಂಬಲವಿದ್ದ ವಿಪಿ ಸಿಂಗ್‌ ಸರ್ಕಾರ ರಾಜೀವ್‌ ಗಾಂಧಿಯವರಿಗೆ ಹೆಚ್ಚಿನ ರಕ್ಷಣೆ ನೀಡಲು ನಿರಾಕರಿಸಿತು. ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ತಿಳಿದಿದ್ದರೂ ಒಬ್ಬ ಪಿಎಸ್‌ಓ ಅನ್ನು ಮಾತ್ರ ಅವರೊಂದಿಗೆ ಬಿಡಲಾಯಿತು” ಎಂದು ಟ್ವೀಟ್‌ ಮಾಡುವ ಮೂಲಕ ಅಹ್ಮದ್‌ ಪಟೇಲ್‌ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಹರಿಯಾಣದಲ್ಲಿ ನಿನ್ನೆ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ “ರಾಜೀವ್‌ ಗಾಂಧಿ ಕುಟುಂಬ ಐಎನ್‌ಎಸ್‌ ವಿರಾಟ್‌ ವಿಮಾನವನ್ನು ಸ್ವಂತಕ್ಕೆ ಬಳಸಿಕೊಂಡಿತ್ತು. 10 ದಿನಗಳ ರೆಜೆಯನ್ನು ಆನಂಧಿಸಲು ಆ ಕುಟುಂಬ ಸಮುದ್ರ ತೀರಕ್ಕೆಂದು ನಿಯೋಜಿಸಿದ್ದ ವಿಮಾನವನ್ನು ಬಳಸಿಕೊಂಡಿತ್ತು. ವಿದೇಶಿಗರಿಗೆ ಆ ವಿಮಾನದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಹಾಗೇ ಮಾಡಿದ್ದು ರಾಷ್ಟ್ರ ರಕ್ಷಣೆಯೊಂದಿಗೆ ರಾಜಿ ಮಾಡಿಕೊಂಡಂತಲ್ಲವೇ? ಅವರು ದೇಶ ಮೊದಲು ಮತ್ತು ದೇಶದ ನಾಗರಿಕರ ಭದ್ರತೆಯನ್ನು ಎರಡನೆ ಸ್ಥಾನದಲ್ಲಿರಿಸಿದರು” ಎಂದು ಮೋದಿ  ವಾಗ್ವಾದ ನಡೆಸಿದ್ದರು.

ದಿವಂಗತರಾಗಿರುವ ಪ್ರಧಾನಿಯನ್ನು ಈ ರೀತಿಯಲ್ಲಿ ಹೆಸರಿಸುವುದು ನಿಮ್ಮ ಅಂತಿಮ ಮಟ್ಟದ ಹೇಡಿತನವನ್ನು ತೋರಿಸುತ್ತದೆ. ನಿಮ್ಮ ಆಧಾರರಹಿತ ವಾದಗಳಿಗೆ ಮತ್ತು ಅವರ ಮೇಲೆ ಹೊರಿಸುತ್ತಿರುವ ಆರೋಪಗಳಿಗೆ ಉತ್ತರಿಸಲು ರಾಜೀವ್‌ ಗಾಂಧಿ ಈಗ ನಮ್ಮೊಂದಿಗಿಲ್ಲ ಎಂದು ಅಹ್ಮದ್‌ ಹೇಳಿದ್ದಾರೆ.