ದೆಹಲಿ: ರಾಜೀವ್ ಗಾಂಧಿಯವರ ಸಾವಿಗೆ, ಬಿಜೆಪಿ ರಾಜೀವ್ ಗಾಂಧಿ ಮೇಲಿಟ್ಟಿದ್ದ ದ್ವೇಷವೇ ಕಾರಣ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಅಹ್ಮದ್ ಪಟೇಲ್ ಗುಡುಗಿದ್ದಾರೆ.
ರಾಜೀವ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸುತ್ತಿರುವುದನ್ನು ವಿರೋಧಿಸಿ ಅಹಮದ್ ಪಟೇಲ್ ಟ್ವೀಟ್ ಮಾಡಿದ್ದು, ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.
“ರಾಜೀವ್ ಗಾಂಧಿಯವರ ಹತ್ಯೆಗೆ ಯಾರು ಕಾರಣ? ಬಿಜೆಪಿ ಬೆಂಬಲವಿದ್ದ ವಿಪಿ ಸಿಂಗ್ ಸರ್ಕಾರ ರಾಜೀವ್ ಗಾಂಧಿಯವರಿಗೆ ಹೆಚ್ಚಿನ ರಕ್ಷಣೆ ನೀಡಲು ನಿರಾಕರಿಸಿತು. ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ತಿಳಿದಿದ್ದರೂ ಒಬ್ಬ ಪಿಎಸ್‌ಓ ಅನ್ನು ಮಾತ್ರ ಅವರೊಂದಿಗೆ ಬಿಡಲಾಯಿತು” ಎಂದು ಟ್ವೀಟ್ ಮಾಡುವ ಮೂಲಕ ಅಹ್ಮದ್ ಪಟೇಲ್ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಹರಿಯಾಣದಲ್ಲಿ ನಿನ್ನೆ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ “ರಾಜೀವ್ ಗಾಂಧಿ ಕುಟುಂಬ ಐಎನ್‌ಎಸ್ ವಿರಾಟ್ ವಿಮಾನವನ್ನು ಸ್ವಂತಕ್ಕೆ ಬಳಸಿಕೊಂಡಿತ್ತು. 10 ದಿನಗಳ ರೆಜೆಯನ್ನು ಆನಂಧಿಸಲು ಆ ಕುಟುಂಬ ಸಮುದ್ರ ತೀರಕ್ಕೆಂದು ನಿಯೋಜಿಸಿದ್ದ ವಿಮಾನವನ್ನು ಬಳಸಿಕೊಂಡಿತ್ತು. ವಿದೇಶಿಗರಿಗೆ ಆ ವಿಮಾನದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಹಾಗೇ ಮಾಡಿದ್ದು ರಾಷ್ಟ್ರ ರಕ್ಷಣೆಯೊಂದಿಗೆ ರಾಜಿ ಮಾಡಿಕೊಂಡಂತಲ್ಲವೇ? ಅವರು ದೇಶ ಮೊದಲು ಮತ್ತು ದೇಶದ ನಾಗರಿಕರ ಭದ್ರತೆಯನ್ನು ಎರಡನೆ ಸ್ಥಾನದಲ್ಲಿರಿಸಿದರು” ಎಂದು ಮೋದಿ ವಾಗ್ವಾದ ನಡೆಸಿದ್ದರು.
ದಿವಂಗತರಾಗಿರುವ ಪ್ರಧಾನಿಯನ್ನು ಈ ರೀತಿಯಲ್ಲಿ ಹೆಸರಿಸುವುದು ನಿಮ್ಮ ಅಂತಿಮ ಮಟ್ಟದ ಹೇಡಿತನವನ್ನು ತೋರಿಸುತ್ತದೆ. ನಿಮ್ಮ ಆಧಾರರಹಿತ ವಾದಗಳಿಗೆ ಮತ್ತು ಅವರ ಮೇಲೆ ಹೊರಿಸುತ್ತಿರುವ ಆರೋಪಗಳಿಗೆ ಉತ್ತರಿಸಲು ರಾಜೀವ್ ಗಾಂಧಿ ಈಗ ನಮ್ಮೊಂದಿಗಿಲ್ಲ ಎಂದು ಅಹ್ಮದ್ ಹೇಳಿದ್ದಾರೆ.
ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ ಮಂಗಳೂರು: ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಆ. 25ರ ಮಂಗಳವಾರ…
ಮೃತಪಟ್ಟ ಭಿಕ್ಷುಕಿಯ ಮನೆಯಲ್ಲಿ 30 ಲಕ್ಷ ರೂ. ನಗದು ಪತ್ತೆ ಮಂಡ್ಯ: ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದು,…
ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ ಉಡುಪಿ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ…
ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ.. ಕಡತಗಳ ಪರಿಶೀಲನೆ ಕಾರ್ಕಳ: ಸಾರ್ವಜನಿಕರ ಅರ್ಜಿ ಹಾಗೂ ಕಡತಗಳ ವಿಲೇವಾರಿ ಬಗ್ಗೆ…
25 ಗಂಟೆಗಳ ಗಾಯನದಿಂದ ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್ ಬುಕ್‌ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ 'ಗೀತ ಗಂಗೋತ್ರಿʼ ಬಿರುದು ನೀಡಿ…
ಕಾಪು ಪುರಸಭೆಗೆ ಲೋಕಾಯುಕ್ತ ದಾಳಿ [gallery columns="1" size="large" ids="117027,117028,117029,117030,117031"]