ರಾಜ್ಯದಲ್ಲಿ ಪ್ರವಾಹ ಸ್ಥಿತಿ ಇದೆ , ಇದೀಗ ನಾವು ‘ಎಲ್ಲಿದ್ದೀಯಪ್ಪ ಯಡಿಯೂರಪ್ಪ’ ಎಂಬುದಾಗಿ ಕೇಳಬೇಕಾಗುತ್ತದೆ : ಎಚ್​.ಡಿ.ಕುಮಾರಸ್ವಾಮಿ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರುರಾಜ್ಯದಲ್ಲಿ ಪ್ರವಾಹ ಸ್ಥಿತಿ ಇದೆ. ಇದೀಗ ನಾವು, ‘ಎಲ್ಲಿದ್ದೀಯಪ್ಪ ಯಡಿಯೂರಪ್ಪ’ ಎಂಬುದಾಗಿ ಕೇಳಬೇಕಾಗುತ್ತದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇರುವುದು ಏಕಚಕ್ರಾಧಿಪತ್ಯ. ನನ್ನ ಸರ್ಕಾರ ಈಗ ಇದ್ದಿದ್ದರೆ ಏನೇನು ಟೀಕೆ ಕೇಳಬೇಕಿತ್ತೋ ಎಂದರು.

ನಾನು ಸಿಎಂ ಆಗಿದ್ದಾಗ ರೈತರ ಸಾಲಮನ್ನಾ ಮಾಡಲು ಹಣ ತೆಗೆದಿಟ್ಟಿದ್ದೆ. ಆ ಹಣದಲ್ಲಿ ರೈತರಿಗೆ ಹಣ ಕೊಡ್ತೀನಿ ಎಂದು ಯಡಿಯೂರಪ್ಪ ಹೇಳಿದ್ದಾರೆ. ಪ್ರಧಾನಿ ಮೋದಿ ನೀಡುವ 6 ಸಾವಿರ ರೂ. ಜೊತೆ ನಾನು 4 ಸಾವಿರ ರೂ. ಕೊಡ್ತೀನಿ ಎಂದಿದ್ದಾರೆ. ನಾನು ಸಾಲಮನ್ನಾಕ್ಕಾಗಿ ಮೀಸಲಿಟ್ಟ ಹಣದಲ್ಲಿ ಉಳಿದಿರುವ ಹಣವನ್ನು ಅವರು ಘೋಷಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಕರ್ನಾಟಕದಲ್ಲಿ ಸಮಸ್ಯೆ ಹೇಳಿಕೊಳ್ಳೋಕೆ ಮಂತ್ರಿ ಮಂಡಲವೂ ಇಲ್ಲ. ಇದೇನಾ ನಿಮ್ಮ ಜನಮೆಚ್ಚಿನ ಆಡಳಿತ ಮರ್ಯಾದಾ ಪುರುಷೋತ್ತಮರೇ ಎಂದು ಜೆಡಿಎಸ್ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ವಿರುದ್ಧ ಕಿಡಿಕಾರಿದೆ.