ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ , ಇದನ್ನು ನಾನು ನಿಮಗೆ ಬರೆದು ಕೊಡುತ್ತೇನೆ : ಪರಮೇಶ್ವರ್ ವಿಶ್ವಾಸ -Vishwanews24

Featured, ರಾಜ್ಯ ನ್ಯೂಸ್

ಮೈಸೂರು: ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತೆ. ಇದನ್ನು ನಾನು ನಿಮಗೆ ಬರೆದು ಕೊಡುತ್ತೇನೆ ಎಂದು ಮಾಜಿ ಡಿಸಿಎಂ ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಪಕ್ಷವನ್ನು ಕೋತಿಗಳಿಗೆ ಹೋಲಿಕೆ ಮಾಡಿದ ಪರಮೇಶ್ವರ್ ಅವರು, ನಮ್ಮ ಜೊತೆ ಇರಿ ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದರೂ ಜೆಡಿಎಸ್‍ನವರು ಇರಲ್ಲ. ಅವರ ಜೊತೆಗಾದರೂ ಹೋಗಿ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದರೂ ಕೇಳಲ್ಲ. ಇಂತವರಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು. ಬಿಜೆಪಿ ಜೊತೆ ಜೆಡಿಎಸ್‍ನವರನ್ನು ತಿರಸ್ಕರಿಸಿ ಎಂದು ಪರಮೇಶ್ವರ್ ಕರೆ ನೀಡಿದರು.