ರಾಜ್ಯದಲ್ಲಿ ಮುಂದೆ ಬರುವ ಎಲ್ಲಾ ಚುನಾವಣೆಗಳಿಗೂ ಬಿಜೆಪಿ-ಜೆಡಿಎಸ್ ಮೈತ್ರಿ : ಹೆಚ್‌ಡಿಡಿ ಘೋಷಣೆ – vishwanews24

Featured, ರಾಜ್ಯ ನ್ಯೂಸ್

ಮೋದಿ ನನ್ನ ಸಂಬಂಧ ಯಾವುದೇ ಕಾರಣಕ್ಕೂ ಯಾರು ಬದಲಾವಣೆ ಮಾಡೋಕೆ ಆಗೊಲ್ಲ : ಹೆಚ್‌ಡಿಡಿ 

ಬೆಂಗಳೂರು: ರಾಜ್ಯದಲ್ಲಿ ಮುಂದೆ ಬರುವ ಎಲ್ಲಾ ಚುನಾವಣೆಗಳಿಗೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆಯಲಿದೆ ಅಂತ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.

ಜೆಪಿ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿದರು. ಈ ವೇಳೆ, ಜಿಬಿಎ ಚುನಾವಣೆಯಲ್ಲಿ  ಬಿಜೆಪಿ ಜೊತೆ ಮೈತ್ರಿ ಆಗ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿಗೆ ಯಾವುದೇ ಕಾರಣದಿಂದ ಆತಂಕ ಆಗುವುದಿಲ್ಲ. ಬಿಜೆಪಿ ಜೊತೆ ಮೈತ್ರಿ ಮುಂದುವರೆಯುತ್ತದೆ. ಜಿಲ್ಲಾ, ತಾಲೂಕು, ಜಿಬಿಎ, ವಿಧಾನಸಭೆ ಚುನಾವಣೆ ಸೇರಿ ಎಲ್ಲಾ ಚುನಾವಣೆಗಳಿಗೂ ಈ ಮೈತ್ರಿ ಮುಂದುವರೆಯಲಿದೆ ಎಂದು ತಿಳಿಸಿದರು.

ಶಿವಮೊಗ್ಗ : ಮಗಳನ್ನು ಕೊಲೆಗೈದು ಆತ್ಮಹತ್ಯೆಗೆ ಶರಣಾದ ತಾಯಿ – vishwanews24

ಬಿಜೆಪಿ-ಜೆಡಿಎಸ್ ಮೈತ್ರಿಗೆ ಎಂದೂ ಆತಂಕ ಇಲ್ಲ. ಮೋದಿ ನನ್ನ ಸಂಬಂಧ ಯಾವುದೇ ಕಾರಣಕ್ಕೂ ಯಾರು ಬದಲಾವಣೆ ಮಾಡೋಕೆ ಆಗೊಲ್ಲ. ನಮ್ಮ ಅವರ ಸಂಬಂಧ 10 ವರ್ಷದಿಂದ ಉತ್ತಮವಾಗಿದೆ. ನಾನು ಕಳೆದ 10 ವರ್ಷಗಳಲ್ಲಿ ಮೋದಿ ಬಗ್ಗೆ ಲಘುವಾಗಿ ಮಾತಾಡಿಲ್ಲ. ಇದ್ದರೆ ತೋರಿಸಿ ಎನ್ನುವ ಮೂಲಕ ನನ್ನ ಮೋದಿ ಸಂಬಂಧ ಉತ್ತಮವಾಗಿದ್ದು, ಇದೇ ಮೈತ್ರಿಗೆ ಅಡಿಪಾಯ ಅಂತ ತಿಳಿಸಿದರು.

ವೈಭವದಿಂದ ನೆರವೇರಿದ  ಮಂಗಳೂರು ದಸರಾ ಶೋಭಾಯಾತ್ರೆ ಸಮಾರೋಪ – vishwanews24

 

Leave a Reply