ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ಅಥವಾ ಸೆಮಿ ಲಾಕ್‍ಡೌನ್ ಇಲ್ಲ ಎಂದು ಸಚಿವ ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸ್ಥಿತಿಗಳನ್ನು ಅವಲೋಕನ ಮಾಡಿ ಕೆಲವೊಂದು ನಿರ್ಣಯಗಳನ್ನು ನಿನ್ನೆ ಪ್ರಸ್ತಾಪ ಮಾಡಿದ್ದಾರೆ. ಮಹಾರಾಷ್ಟ್ರ ಹಾಗೂ ಕೇರಳ ಗಡಿ ಭಾಗಗಳಿಂದ ಬರುವ ಜನರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಆರ್‍ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಇಲ್ಲದವರನ್ನು ಕಡ್ಡಾಯವಾಗಿ ಒಳಗಡೆ ಬಿಡದಂತೆ ಸೂಚಿಸಲಾಗಿದ್ದು, ಸ್ಥಳದಲ್ಲೇ ಪರೀಕ್ಷೆ ಮಾಡುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಆಗುಂಬೆ ಘಾಟಿಯಲ್ಲಿ ತ್ಯಾಜ್ಯ ಸಂಗ್ರಹಿಸಿ ಮಾದರಿಯಾದ ಅಧಿಕಾರಿಗಳು -Vishwanews24
ಸಾರ್ವಜನಿಕ ಸ್ಥಳಗಳಲ್ಲಿ ಬಹಳಷ್ಟು ಮಂದಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದಾರೆ. ಹೀಗಾಗಿ ಮಾಸ್ಕ್ ಇಲ್ಲದೆ ಓಡಾಡುವವರಿಗೆ 250 ದಂಡ ವಿಧಿಸುವ ಕ್ರಮವನ್ನು ಎರಡು ದಿನಗಳೊಳಗೆ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಕೊರೊನಾ ವೈರಸ್ ಕುರಿತು ಅರಿವು ಮೂಡಿಸುವ ಕೆಲಸ ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಮದುವೆ ಸಮಾರಂಭಗಳಲ್ಲಿ ನಿಗದಿಯಾದ ಮಿತಿಗಿಂತ ಜನ ಸೇರುವಂತಿಲ್ಲ. ಒಂದು ವೇಳೆ ಈ ರೂಲ್ಸ್ ಪಾಲೋ ಮಾಡದಿದ್ದರೆ ಮಾರ್ಷಲ್ ಗಳನ್ನು ಕಳುಹಿಸಲಾಗುವುದು ಅಲ್ಲದೆ ದಂಡ ಕೂಡ ವಿಧಿಸಲಾಗುತ್ತದೆ. ಸಮಾರಂಭದ ಆಯೋಜಕರು ಹಾಗೂ ಸ್ಥಳದ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸುಧಾಕರ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಲಾಕ್‍ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ. ಹೀಗಾಗಿ ಸೆಮಿ ಲಾಕ್ ಡೌನ್ ಅಥವಾ ಲಾಕ್ ಡೌನ್ ಮಾಡಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ
ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ನಿಜ .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…
ಉಡುಪಿ: ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…
ಉಡುಪಿ : ಒಳಚರಂಡಿ ಕಾಮಗಾರಿ; ಸಂಚಾರ ನಿಷೇಧ ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಶಿರಿಬೀಡು ವಾರ್ಡಿನ ಶಾಂಭವಿ ಹೋಟೇಲ್ ಎದುರು ರಸ್ತೆಯಲ್ಲಿ…
ಉಡುಪಿ : ಸರಳ ವಿವಾಹಕ್ಕೆ ಪ್ರೋತ್ಸಾಹಧನ: ಅರ್ಜಿ ಆಹ್ವಾನ ಉಡುಪಿ, : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನ ಆರ್ಥಿಕವಾಗಿ…
ಅ. 18ರಂದು ರಕ್ಷಣಾಪುರ ಜವನೆರ್ ಕಾಪು ವತಿಯಿಂದ ನಾಲ್ಕನೇ ವರ್ಷದ ‘ಕಾಪು ಪಿಲಿ ಪರ್ಬ’ ವಿನಯ್ ಕುಮಾರ್ ಸೊರಕೆ ಮಾರ್ಗದರ್ಶನದಲ್ಲಿ…
ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…