ರಾಜ್ಯದಲ್ಲೇ ಮೊದಲ ಬಾರಿಗೆ ʻಟ್ರಾನ್ಸ್‌ಜೆಂಡರ್ ಸಮುದಾಯ : 160 ಮನೆಗಳಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ – Vishwanews24
ರಾಜ್ಯದಲ್ಲೇ ಮೊದಲ ಬಾರಿಗೆ ʻಟ್ರಾನ್ಸ್‌ಜೆಂಡರ್ ಸಮುದಾಯ : 160 ಮನೆಗಳಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕೆಂಗೇರಿ: ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳಮುಖಿಯರಿಗಾಗಿಯೇ (ಟ್ರಾನ್ಸ್‌ಜೆಂಡರ್ ಸಮುದಾಯ) ಪ್ರತ್ಯೇಕ ವಸತಿ ಯೋಜನೆಗೆ ಚಾಲನೆ ನೀಡಲಾಗಿದೆ.
ರಾಮೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳಿಗೊಂಡನಹಳ್ಳಿ ಸರ್ವೆ ನಂಬರ್ 26ರಲ್ಲಿ ‘ಮಂಗಳ ಗ್ರಾಮ’ ಕಾಮಗಾರಿಗೆ ವಸತಿ ಸಚಿವ ವಿ.ಸೋಮಣ್ಣ ಗುದ್ದಲಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ‘ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 20 ಕೋಟಿ ರೂ. ವೆಚ್ಚದಲ್ಲಿ ವಸತಿ ಸಮುಚ್ಚಯ ನಿರ್ಮಿಸಲಾಗುತ್ತಿದೆ. ಸುಮಾರು 2 ಎಕರೆ 20 ಗುಂಟೆ ವಿಸ್ತೀರ್ಣದ ಜಾಗದಲ್ಲಿ 160 ಮನೆಗಳನ್ನು ನಿರ್ಮಿಸಲಾಗುವುದು ಎಂದರು. ‘ಯೋಜನೆ ಅನುಷ್ಠಾನಕ್ಕಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಭೂಮಿಯನ್ನು ಕೊಳಚೆ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಿದ್ದಾರೆ. ಸಂಪರ್ಕ ರಸ್ತೆ, ಬೀದಿ ದೀಪದಂತಹ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಒಂದು ವರ್ಷದ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದೇನೆ’ ಎಂದರು.
ತುಳಿತಕ್ಕೊಳಗಾದವರಿಗೆ ರಕ್ಷಣೆ ನೀಡಬೇಕು ; ನಟಿ ಸಾಯಿಪಲ್ಲವಿ ಪರ ನಟಿ ರಮ್ಯಾ – Vishwanews24
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಬಿ ವೆಂಕಟೇಶ್, ಕರ್ನಾಟಕ ತೃತೀಯ ಲಿಂಗಿಗಳ ಸಂಘದ ಅಧ್ಯಕ್ಷೆ ಕ್ಷಮಾ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿರ್ದೇಶಕ (ಬೆಂಗಳೂರು ವೃತ್ತ) ಎನ್. ಪಿ ಬಾಲರಾಜ್, ಕಾರ್ಯಪಾಲಕ ಅಭಿಯಂತರ ಸಿ. ಕೆ ರವಿಕುಮಾರ್, ಸಮತಾ ಸೈನಿಕ ದಳದ ಉಪಾಧ್ಯಕ್ಷ ಪಿಳ್ಳರಾಜ್,ಬಸಣ್ಣ ಮತ್ತಿತರರು ಉಪಸ್ಥಿತರಿದ್ದರು.
