ರಾಜ್ಯಪಾಲರು ಸೂಚಿಸಿದರೆ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಯಲ್ಲಿ ಬದಲಾವಣೆ ಮಾಡ್ತೀವಿ: ಜಿ.ಪರಮೇಶ್ವರ್ – vishwanews24

Featured, ರಾಜ್ಯ ನ್ಯೂಸ್

ರಾಜ್ಯಪಾಲರು ಸೂಚಿಸಿದರೆ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಯಲ್ಲಿ ಬದಲಾವಣೆ ಮಾಡ್ತೀವಿ: ಜಿ.ಪರಮೇಶ್ವರ್

ಬೆಂಗಳೂರು : ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ತರಲು ಹೊರಟಿರುವ ಸುಗ್ರೀವಾಜ್ಞೆಯಲ್ಲಿ ರಾಜ್ಯಪಾಲರು ಏನಾದರೂ ಬದಲಾವಣೆಗೆ ಸೂಚನೆ ಕೊಟ್ಟರೆ ಅದನ್ನು ಬದಲಾವಣೆ ಮಾಡುವುದಾಗಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.

ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕುವ ವಿಚಾರವಾಗಿ ಮಾತನಾಡಿದ ಅವರು, ರಾಜ್ಯಪಾಲರಿಗೆ ಈಗಾಗಲೇ ಕರಡು ಕಳುಹಿಸಲಾಗಿದೆ. ಸಹಿ ಹಾಕಬಹುದು ಎಂಬ ನಿರೀಕ್ಷೆ ಇದೆ. ರಾಜ್ಯಪಾಲರು ಅವರ ಕಾನೂನು ತಜ್ಞರ ಜೊತೆ ಮಾತನಾಡಿ ಅಂತಿಮವಾಗಿ ಸಹಿ ಹಾಕಬಹುದು. ಅವರು ಸಹಿ ಹಾಕಿದರೆ ಇಂದು ಸುಗ್ರೀವಾಜ್ಞೆ ಜಾರಿಯಾಗಬಹುದು ಎಂದು ಹೇಳಿದರು.

ಪಕ್ಷ ಕಟ್ಟೋ ಶಕ್ತಿ ವಿಜಯೇಂದ್ರಗೆ ಮಾತ್ರ ಇದೆ ಅನ್ನೋದು ನಿಜ : ರೇಣುಕಾಚಾರ್ಯ – vishwanews24

ಬಿಲ್‌ನಲ್ಲಿ ಕೆಲ ಬದಲಾವಣೆಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಬದಲಾವಣೆಗೆ ರಾಜ್ಯಪಾಲರು ಸೂಚನೆ ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಸರ್ಕಾರಕ್ಕೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಒಂದು ವೇಳೆ ರಾಜ್ಯಪಾಲರು ಕೆಲ ಅಂಶಗಳ ಬದಲಾವಣೆಗೆ ಸೂಚನೆ ಕೊಟ್ಟರೆ ಅದನ್ನು ಬದಲಾವಣೆ ಮಾಡಿ ಕಳುಹಿಸುತ್ತೇವೆ ಎಂದರು.

Leave a Reply