ರಾಜ್ಯಸಭೆಯಲ್ಲಿ ಗಾನ ಕೋಗಿಲೆಗೆ ನಮನ: ಮೌನಾಚರಣೆ ಬಳಿಕ 1ಗಂಟೆ ಕಲಾಪ ಮುಂದೂಡಿಕೆ – Vishwanews24
ರಾಜ್ಯಸಭೆಯಲ್ಲಿ ಗಾನ ಕೋಗಿಲೆಗೆ ನಮನ: ಮೌನಾಚರಣೆ ಬಳಿಕ 1ಗಂಟೆ ಕಲಾಪ ಮುಂದೂಡಿಕೆ – Vishwanews24
ನವದೆಹಲಿ: ಇಹಲೋಕ ತ್ಯಜಿಸಿದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ರಾಜ್ಯಸಭೆ ಅಧಿವೇಶನದಲ್ಲಿ ಸೋಮವಾರ ಮೌನಾಚರಣೆ ಮೂಲಕ ಸದಸ್ಯರು ನಮನ ಸಲ್ಲಿಸಿದ್ದು, ಕಲಾಪವನ್ನು 1 ಗಂಟೆಯ ಕಾಲ ಮುಂದೂಡಿಕೆ ಮಾಡಲಾಗಿದೆ.
ಇಂದು ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆ ಮೊದಲು ಖ್ಯಾತ ಗಾಯಕಿಗೆ ನಮನ ಸಲ್ಲಿಸಲಾಯಿತು.
ಬಳಿಕ ಅವರಿಗೆ ಗೌರವ ನೀಡಲು ಸದಸವನ್ನು 1 ಗಂಟೆಯ ಕಾಲ ಮುಂದೂಡಿದ್ದೇವೆ ಎಂದು ರಾಜ್ಯಸಭೆ ಸಭಾಪತಿ ಎಂ ವೆಂಕಯ್ಯ ನಾಯ್ಡು ಅವರು ಹೇಳಿದರು.
ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಇಡೀ ದೇಶ ಕಂಬನಿ ಮಿಡಿದಿದ್ದು, ಈಗಾಗಲೇ ದೇಶದಲ್ಲಿ ಎರಡು ದಿನ ಶೋಕಾಚರಣೆ ಕೂಡ ಘೋಷಣೆ ಮಾಡಲಾಗಿದೆ. ಹಾಗೆಯೇ ಇಂದು ಬಾಂಬೆ ಹೈಕೋರ್ಟ್ ಮತ್ತು ಸೆಷೆನ್ಸ್ ಕೋರ್ಟ್ಗಳು ರಜೆ ಘೋಷಿಸಿ ಗೌರವ ನಮನ ಸಲ್ಲಿಸಿವೆ.
