ರಾಜ್ಯಸಭೆ ಕದನ: ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಹಾಗೂ ಕಾಂಗ್ರೆಸ್ ನ ಜೈರಾಂ ರಮೇಶ್ ಗೆ ಗೆಲುವು – Vishwnaews24
ರಾಜ್ಯಸಭೆ ಕದನ: ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಹಾಗೂ ಕಾಂಗ್ರೆಸ್ ನ ಜೈರಾಂ ರಮೇಶ್ ಗೆ ಗೆಲುವು
ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜೈರಾಂ ರಮೇಶ್ ಅವರಿಗೆ ಮೊದಲ ಸುತ್ತಿನ ಪ್ರಾಶಸ್ತ್ಯ ಮತಗಳಲ್ಲಿ ಗೆಲುವು ಸಿಕ್ಕಿದೆ. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಎರಡನೇ ಬಾರಿಗೆ ಕರ್ನಾಟಕದಿಂದ ರಾಜ್ಯಸಭೆಗೆ ಆರಿಸಿ ಬರುತ್ತಿದ್ದಾರೆ. ಅವರಿಗೆ ಮೊದಲ ಸುತ್ತಿನ 46 ಪ್ರಾಶಸ್ತ್ಯ ಮತಗಳು ಸಿಕ್ಕಿವೆ.
ಕಾಂಗ್ರೆಸ್ ಅಭ್ಯರ್ಥಿ ಜೈರಾಂ ರಮೇಶ್ ಅವರಿಗೆ 46 ಮೊದಲ ಪ್ರಾಶಸ್ತ್ಯ ಮತಗಳು ಸಿಕ್ಕಿವೆ. ಕಾಂಗ್ರೆಸ್ ಅಥವಾ ಜೆಡಿಎಸ್ ನಿಂದ ಅಡ್ಡ ಮತದಾನವಾದರೆ ಲೆಹರ್ ಸಿಂಗ್ ಗೆ ಸಿಗುವ ಮತಗಳು ಹೆಚ್ಚುತ್ತಾ ಹೋಗುತ್ತವೆ.
ಬಿಜೆಪಿಯ ಎಲ್ಲಾ ಶಾಸಕರ ಮತಗಳು ಪೂರ್ಣವಾಗಿದೆ. ಕಾಂಗ್ರೆಸ್ ಶಾಸಕರ 50 ಶಾಸಕರು, ಜೆಡಿಎಸ್ ನ 15 ಶಾಸಕರು ಮತ ಹಾಕಿದ್ದಾರೆ.
