ರಾಜ್ಯಾಧಿಕಾರ ಕಳೆದುಕೊಂಡ ಮೇಲೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ಹುಚ್ಚು ಹಿಡಿದಿದೆ : ಕೆ.ಎಸ್.ಈಶ್ವರಪ್ಪ -Vishwanews24

Featured, ರಾಜ್ಯ ನ್ಯೂಸ್

ದಾವಣೆಗೆರೆ: “ರಾಜ್ಯಾಧಿಕಾರ ಕಳೆದುಕೊಂಡ ಮೇಲೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ ಕುಮಾರಸ್ವಾಮಿ ಹುಚ್ಚರಾಗುತ್ತಿದ್ದಾರೆ” ಎನ್ನುವ ಮೂಲಕ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ  ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತಾಡಿದ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ, ಅಧಿಕಾರ ಹೋದ ಮೇಲೆ ಮಾಜಿ ಸಿಎ ಸಿದ್ದರಾಮಯ್ಯ ಮತ್ತು ಎಚ್​.ಡಿ ಕುಮಾರಸ್ವಾಮಿಗೆ ಹುಚ್ಚು ಹಿಡಿದಿದೆ. ಇಬ್ಬರಿಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ಏನನ್ನೋ ಕಳೆದುಕೊಂಡಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಎಚ್​​.ಡಿ ಕುಮಾರಸ್ವಾಮಿ ವಿರೋಧ ಪಕ್ಷದ ಸ್ಥಾನಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಅತ್ತ ಸಿಎಂ ಸ್ಥಾನದಿಂದ ಇಳಿದ ಮೇಲೆ ಸಿದ್ದರಾಮಯ್ಯಗೆ ಏನೋ ಕಳೆದುಕೊಂಡ ನೋವಾಗಿದೆ. ಹಾಗಾಗಿಯೇ ಹೇಗಾದರೂ ಮಾಡಿ ಕಾಂಗ್ರೆಸ್​​ನ ವಿರೋಧ ಪಕ್ಷ ಸ್ಥಾನಕ್ಕೆ ಯತ್ನಿಸುತ್ತಿದ್ದಾರೆ ಎಂದು ಕಾಲೆಳೆದರು ಕೆ.ಎಸ್​​ ಈಶ್ವರಪ್ಪ.