Featured

ರಾಜ್ಯೋತ್ಸವ ಪಟ್ಟಿಯಿಂದ ಉಡುಪಿಯ ವೈದ್ಯ ಡಾ.ಚಂದ್ರಶೇಖರ್ ಹೆಸರು ಕೈಬಿಟ್ಟಿದಕ್ಕೆ ಸರಕಾರದ ವಿರುದ್ಧ ತೀವ್ರ ಅಸಮಾಧಾನ – vishwanews24

ರಾಜ್ಯೋತ್ಸವ ಪಟ್ಟಿ ತಿದ್ದುಪಡಿ: ಉಡುಪಿಯ ವೈದ್ಯ ಡಾ.ಚಂದ್ರಶೇಖರ್ ಹೆಸರು ಕೈಬಿಟ್ಟಿದಕ್ಕೆ ಸರಕಾರದ ವಿರುದ್ಧ ತೀವ್ರ ಅಸಮಾಧಾನ

ಉಡುಪಿ: ಕರ್ನಾಟಕ ಸರಕಾರ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಘೋಷಿಸಿದ ಕೆಲವೇ ಕ್ಷಣದಲ್ಲಿ ತಾಂತ್ರಿಕ ಕಾರಣ ನೀಡಿ, ಮೊದಲ ಪಟ್ಟಿಯಲ್ಲಿದ್ದ ಉಡುಪಿ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಅವರನ್ನು ಕೈಬಿಟ್ಟು ಉತ್ತರ ಕನ್ನಡ ಜಿಲ್ಲೆಯ ಜಿ.ಯು.ಭಟ್ ರಿಗೆ ಪ್ರಶಸ್ತಿ ಘೋಷಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಸರಕಾರದ ಈ ಕ್ರಮದ ಬಗ್ಗೆ ಚರ್ಚೆ ನಡೆಯುತ್ತಿದೆ.

ಪ್ರಶಸ್ತಿ ಪಟ್ಟಿಯಲ್ಲಿ ಸಮಾಜ ಕ್ಷೇತ್ರದಲ್ಲಿ ಆದರ್ಶ ಚಾರಿಟೇಬಲ್ ಟ್ರಸ್ಟ್ ನ ಡಾ.ಜಿ.ಎಸ್.ಚಂದ್ರಶೇಖರ್ ಹೆಸರು ಘೋಷಿಸಲಾಗಿತ್ತು. ಆದರೆ ಅದರ ಜಿಲ್ಲಾ ವಿಭಾಗದಲ್ಲಿ ಉಡುಪಿಯ ಬದಲು ಉತ್ತರ ಕನ್ನಡ ಎಂಬುದಿತ್ತು. ಈ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಸರಕಾರ ಮತ್ತೊಂದು ಆದೇಶ ಹೊರಡಿಸಿ ‘ಸಮಾಜ ಸೇವೆ ಕ್ಷೇತ್ರದಲ್ಲಿ ಡಾ.ಜಿ.ಎಸ್.ಚಂದ್ರಶೇಖರ್ ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಆಯ್ಕೆ ಮಾಡಲಾಗಿತ್ತು. ತಾಂತ್ರಿಕ ಕಾರಣಗಳಿಂದಾಗಿ ತಪ್ಪಾದ ಕಾರಣ ಅವರ ಹೆಸರನ್ನು ಕೈಬಿಟ್ಟು ಉತ್ತರ ಕನ್ನಡ ಜಿಲ್ಲೆಯವರೇ ಆದ ಗಜಾನನ ಉಮಾಮಹೇಶ್ವರ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿತ್ತು.

ಇದನ್ನೂ ಓದಿ :

‘ಜಿ.ಯು. ಭಟ್ ಸಾಹಿತ್ಯ, ಪತ್ರಿಕೋದ್ಯಮ, ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸಮಾಜ ಸೇವೆಯಲ್ಲಿ ನಿರತರಾಗಿರುವ ಜಿ.ಯು.ಭಟ್ ಅವರನ್ನು ಆಯ್ಕೆ ಮಾಡಲಾಗಿದೆ. ದಯವಿಟ್ಟು ತಿದ್ದುಪಡಿ ಮಾಡಿಕೊಳ್ಳುವಂತೆ ಕೋರಿದೆ ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

Vishwa News 24

Recent Posts

ಎಸ್‌ಐಟಿಯಿಂದ ಸೌಜನ್ಯ ಪ್ರಕರಣದ ಮರುತನಿಖೆ ಆರಂಭ : ಮೃತದೇಹ ಪತ್ತೆಯಾದ ಜಾಗಕ್ಕೆ ಭೇಟಿ – vishwanews24

ಎಸ್‌ಐಟಿಯಿಂದ ಸೌಜನ್ಯ ಪ್ರಕರಣದ ಮರುತನಿಖೆ ಆರಂಭ; ಧರ್ಮಸ್ಥಳದ ಕಾಡಿಗೆ ಎಂಟ್ರಿ, ಮೃತದೇಹ ಪತ್ತೆಯಾದ ಜಾಗಕ್ಕೆ ಭೇಟಿ ಮಂಗಳೂರು: ಸೌಜನ್ಯ ಅತ್ಯಾಚಾರ…

11 minutes ago

ತಮಿಳುನಾಡು ಜೈಲಿನಿಂದ ಖೈದಿಗಳು ಪರಾರಿ ಪ್ರಕರಣ: ಹಿರಿಯ ಜೈಲಾಧಿಕಾರಿ ಅಮಾನತು, ಸಿಬ್ಬಂದಿ ವರ್ಗಾವಣೆ : ಸಿಎಂ ವಿಜಯ್ ಆದೇಶ – vishwanews24

ತಮಿಳುನಾಡು ಜೈಲಿನಿಂದ ಖೈದಿಗಳು ಪರಾರಿ ಪ್ರಕರಣ: ಹಿರಿಯ ಜೈಲಾಧಿಕಾರಿ ಅಮಾನತು, ಸಿಬ್ಬಂದಿ ವರ್ಗಾವಣೆ : ಸಿಎಂ ವಿಜಯ್ ಆದೇಶ ಚೆನ್ನೈ:…

24 minutes ago

ಬೆಂಗಳೂರು: ಖಾಸಗಿ ಹೋಟೆಲ್​​ನ ಈಜುಕೊಳದಲ್ಲಿ ವಿದ್ಯುತ್ ಅವಘಡ : ವಿದೇಶಿ ಪ್ರಜೆಗಳಿಬ್ಬರು ಸಾವು  – vishwanews24

ಬೆಂಗಳೂರು: ಖಾಸಗಿ ಹೋಟೆಲ್​​ನ ಈಜುಕೊಳದಲ್ಲಿ ವಿದ್ಯುತ್ ಅವಘಡ : ವಿದೇಶಿ ಪ್ರಜೆಗಳಿಬ್ಬರು ಸಾವು ; ಮತ್ತಿಬ್ಬರಿಗೆ ಗಂಭೀರ ಗಾಯ ಬೆಂಗಳೂರು: ಖಾಸಗಿ ಹೋಟೆಲ್​​ನ…

3 hours ago

ಮೂಡುಬಿದಿರೆ : ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ; ಸವಾರ ಮೃತ್ಯು – vishwanews24

ಮೂಡುಬಿದಿರೆ : ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ; ಸವಾರ ಮೃತ್ಯು ಮೂಡುಬಿದಿರೆ : ಖಾಸಗಿ ಬಸ್ ವೊಂದು ದ್ವಿಚಕ್ರ…

3 hours ago

ಹೊಸ ವಂದೇ ಭಾರತ್‌ಗೆ ರೈಲಿಗೆ ಸುರತ್ಕಲ್ ನಿಲುಗಡೆ ಘೋಷಿಸಬೇಕು : ಪ್ರಯಾಣಿಕರ ಆಗ್ರಹ – vishwanews24

ಹೊಸ ವಂದೇ ಭಾರತ್‌ಗೆ ರೈಲಿಗೆ ಸುರತ್ಕಲ್ ನಿಲುಗಡೆ ಘೋಷಿಸಬೇಕು : ಪ್ರಯಾಣಿಕರ ಆಗ್ರಹ ಸುರತ್ಕಲ್: ಬೆಂಗಳೂರು-ಕಾರವಾರ ನಡುವೆ ಸಂಚರಿಸಲಿರುವ ಹೊಸ ವಂದೇ…

3 hours ago

ನ.1ರಿಂದ ರಾಜ್ಯಾದ್ಯಂತ ‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಅಭಿಯಾನ : ಸುನೀಲ್‍ ಕುಮಾರ್ – vishwanews24

ನ.1ರಿಂದ ರಾಜ್ಯಾದ್ಯಂತ ‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಅಭಿಯಾನ : ಸುನೀಲ್‍ ಕುಮಾರ್ ಬೆಂಗಳೂರು: ಯುವ ಸಮುದಾಯಕ್ಕೆ ಎಸ್‍ಐಆರ್ ಕುರಿತಂತೆ…

3 hours ago