ಬೆಂಗಳೂರು: ಖಾಸಗಿ ಹೋಟೆಲ್‌ನ ಈಜುಕೊಳದಲ್ಲಿ ಇಬ್ಬರು ವಿದೇಶಿಗರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಲೆಕ್ಟ್ರಿಕ್ ಶಾಕ್ನಿಂದ ದುರ್ಘಟನೆ ನಡೆದಿದ್ದು, ಸ್ಲೋವಾಕಿಯಾ ಮೂಲದ ಓರಿಯಾಟ್ (45) ಮತ್ತು ಜರ್ಮನ್ ಮೂಲದ ಅಲೆಕ್ಸಾಂಡರ್ ಮ್ಯಾಕ್ಸಿಲನ್ (59) ಮೃತ ದುರ್ದೈವಿಗಳಾಗಿದ್ದಾರೆ. ಈ ಸಂಬಂಧ ಮೃತ ಅಲೆಕ್ಸಾಂಡರ್ ಪತ್ನಿ ದೂರು ನೀಡಿದ್ದು, ಸ್ಥಳಕ್ಕೆ ಹಲಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಣಿಪಾಲ್ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ.
ರಕ್ಷಣೆಗೆ ಹೋದ ಇಬ್ಬರಿಗೆ ಗಂಭೀರ ಗಾಯ
ಕಾನ್ರಾಡ್ ಹೋಟೆಲ್‌ನ 3ನೇ ಮಹಡಿಯಲ್ಲಿರುವ ಸ್ವಿಮ್ಮಿಂಗ್ ಪೂಲ್ನಲ್ಲಿ ಘಟನೆ ನಡೆದಿದೆ. ಸ್ಲೋವೋಕಿಯಾ ಮತ್ತು ಜರ್ಮನ್ ಮೂಲದ ಇಬ್ಬರು ಕಳೆದ ಕೆಲ ದಿನಗಳಿಂದ ಹೋಟೆಲ್ನಲ್ಲಿ ತಂಗಿದ್ದರು. ಘಟನೆ ವೇಳೆ ಇಬ್ಬರನ್ನು ರಕ್ಷಿಸಲು ಅಮೆರಿಕ ಮೂಲದ ವ್ಯಕ್ತಿ ಮತ್ತು ಪೂಲ್ ಅಟೆಂಡರ್ ಯತ್ನಿಸಿದ್ದು, ಅವರಿಬ್ಬರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದ್ದು, ಹೋಟೆಲ್ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.
ರಾಜ್ಯೋತ್ಸವ ಪಟ್ಟಿ ತಿದ್ದುಪಡಿ: ಉಡುಪಿಯ ವೈದ್ಯ ಡಾ.ಚಂದ್ರಶೇಖರ್ ಹೆಸರು ಕೈಬಿಟ್ಟಿದಕ್ಕೆ ಸರಕಾರದ ವಿರುದ್ಧ ತೀವ್ರ ಅಸಮಾಧಾನ ಉಡುಪಿ: ಕರ್ನಾಟಕ ಸರಕಾರ…
ಮೂಡುಬಿದಿರೆ : ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ; ಸವಾರ ಮೃತ್ಯು ಮೂಡುಬಿದಿರೆ : ಖಾಸಗಿ ಬಸ್ ವೊಂದು ದ್ವಿಚಕ್ರ…
ಹೊಸ ವಂದೇ ಭಾರತ್‌ಗೆ ರೈಲಿಗೆ ಸುರತ್ಕಲ್ ನಿಲುಗಡೆ ಘೋಷಿಸಬೇಕು : ಪ್ರಯಾಣಿಕರ ಆಗ್ರಹ ಸುರತ್ಕಲ್: ಬೆಂಗಳೂರು-ಕಾರವಾರ ನಡುವೆ ಸಂಚರಿಸಲಿರುವ ಹೊಸ ವಂದೇ…
ನ.1ರಿಂದ ರಾಜ್ಯಾದ್ಯಂತ ‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಅಭಿಯಾನ : ಸುನೀಲ್ ಕುಮಾರ್ ಬೆಂಗಳೂರು: ಯುವ ಸಮುದಾಯಕ್ಕೆ ಎಸ್‍ಐಆರ್ ಕುರಿತಂತೆ…
ಸ್ಟಿಂಗ್ ಆಪರೇಷನ್' ಪ್ರಕರಣ : ಕಾಂಗ್ರೆಸ್ ನಿಂದ ಕೃಪಾ ಆಳ್ವಾ ಉಚ್ಛಾಟನೆ ಬೆಂಗಳೂರು: ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ…
ಈ ಬಾರಿ ದೀಪಾವಳಿ ಪಟಾಕಿ ಸಿಡಿಸಲು 2 ಗಂಟೆ ಅವಕಾಶ: ನಿಯಮ ಮೀರಿದರೆ ಕಠಿಣ ಕ್ರಮ ಎಂದ ಸಚಿವ ರಾಮಲಿಂಗಾರೆಡ್ಡಿ…