ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಜಯರಾಮ್ ಬನನ್ ಅವರಿಂದ ಶ್ರೀ ಗೆಜ್ಜೆಗಿರಿ ಯಕ್ಷಗಾನ ಮೇಳದ ತಿರುಗಾಟಕ್ಕೆ 25 ಲಕ್ಷ ರೂ. ವೆಚ್ಚದ ಟಾಟಾ ಸಮೂಹದ ನೂತನ ಲಾರಿ ಸೇವೆ – Vishwanews24
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಜಯರಾಮ್ ಬನನ್ ಅವರಿಂದ ಶ್ರೀ ಗೆಜ್ಜೆಗಿರಿ ಯಕ್ಷಗಾನ ಮೇಳದ ತಿರುಗಾಟಕ್ಕೆ ಸುಮಾರು 25 ಲಕ್ಷ ರೂಪಾಯಿ ವೆಚ್ಚದ ಟಾಟಾ ಸಮೂಹದ ನೂತನ ಲಾರಿ ಸೇವೆ
ಕೊಡುಗೈ ಧಾನಿಗಳೂ, ಸಮಾಜ ಸೇವಕರೂ, ಶ್ರೀ ಗೆಜ್ಜೆಗಿರಿ ಯಕ್ಷಗಾನ ಮೇಳದ ಗೌರವ ಸಲಹೆಗಾರರು, ಹೋಟೆಲ್ ಉದ್ಯಮಿ, ಸಾಗರ ರತ್ನಂ ಗ್ರೂಪ್ಸ್ MD, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಸರಳ ಸಜ್ಜನಿಕೆಯ ಸಹೃದಯಿ ಶ್ರೀ ಜಯರಾಮ್ ಬನನ್ ಅವರಿಂದ ಶ್ರೀ ಗೆಜ್ಜೆಗಿರಿಯ ನೂತನ ಯಕ್ಷಗಾನ ಮೇಳದ ಮಾತೆ ಅಮ್ಮನವರ ಗೆಜ್ಜೆ ಸೇವೆಯ ತಿರುಗಾಟಕ್ಕೆ ಸುಮಾರು 25 ಲಕ್ಷ ರೂಪಾಯಿ ಮೊತ್ತದ ನೂತನ ಲಾರಿಯ ಸೇವೆಯ ರೂಪದಲ್ಲಿ ಶ್ರೀ ದೇಯಿ ಬೈದೆತಿ ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಸಮರ್ಪಿಸಲಿದ್ದಾರೆ.
ದಿನಾಂಕ 27-11-2022 ರಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಅದ್ದೂರಿಯಾಗಿ ಜರುಗುವ ನೂತನ ಮೇಳದ ಉದ್ಘಾಟನೆ ಹಾಗೂ ಪ್ರಥಮ ದೇವರ ಸೇವೆಯಾಟಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಪುತ್ತೂರು: ಅನಾರೋಗ್ಯದಿಂದ 8ನೇ ತರಗತಿ ವಿದ್ಯಾರ್ಥಿನಿ ಸಾವು – Vishwanews24
