ರಾಜ್ಯ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ : ನೇರ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ -Vishwanews24
ರಾಜ್ಯ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ : ನೇರ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ -Vishwanews24
ತುಮಕೂರು : ಇನ್ಮುಂದೆ ತಿಂಗಳಾದರೇ ಸಾಕು ವೃದ್ದಾಪ್ಯ ವೇತನ ಪಡೆಯಲು ಕಂದಾಯ ಇಲಾಖೆಗೆ ಯಾರೂ ಅಲೆದು ಸುಸ್ತಾಗಬೇಕಿಲ್ಲ ಆಧಾರ್ ಕಾರ್ಡ್ ನಲ್ಲಿರುವ ದಾಖಲೆಯ ಪ್ರಕಾರ 60 ವರ್ಷ ವಯಸ್ಸಿನ ಎಲ್ಲ ಫಲಾನುಭವಿಗಳಿಗೆ ನೇರ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ ಬರಲಿದೆ.
ಫಲಾನುಭವಿಗಳಿಗೆ ಜಿಲ್ಲಾಧಿಕಾರಿ ಪತ್ರ ಬರೆದು ಇಲಾಖೆಗೆ ಆಹ್ವಾನ ನೀಡಿ ವೃದ್ಧಾಪ್ಯ ವೇತನ ಕೊಡ ಮಾಡುವ ಪಕ್ರಿಯೆ ಜಾರಿಗೆ ಬರಲಿದ್ದು ವೃದ್ಧರಿಗೆ ನೆರವಾಗಲಿದೆ.
ತುಮಕೂರು ಜಿಲ್ಲೆ ಶಿರಾದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದು ರಾಜ್ಯ ಸರ್ಕಾರ ವರ್ಷಕ್ಕೆ ಸುಮಾರು 7000 ಕೋಟಿ ವೃದ್ಧಾಪ್ಯ ವೇತನಕ್ಕೆ ವ್ಯಯ ಮಾಡುತ್ತಿದೆ ಆದರೆ ಸಮರ್ಪಕವಾಗಿ ಫಲಾನುಭವಿಗಳಿಗೆ ಹಣ ತಲುಪಿಸುವಲ್ಲಿ ಕೆಲವೆಡೆ ಲೋಪ ದೋಷ ಕಂಡು ಬಂದಿದ್ದು ಅರ್ಹರ ಮನೆ ಬಾಗಿಲಿಗೆ ಈ ಯೋಜನೆ ತಲುಪಿಸುವ ಸದುದ್ದೇಶದಿಂದ ಈ ಕ್ರಮ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ರಾಜ್ಯದ ಬಳ್ಳಾರಿ, ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ ಮನೆಬಾಗಿಲಿಗೆ ವೃದ್ಧಾಪ್ಯ ವೇತನ ತಲುಪಿಸುವ ವ್ಯವಸ್ಥೆ ಕೈಗೊಳ್ಳಲಾಗಿದ್ದು ಶೀಘ್ರದಲ್ಲೇ ರಾಜ್ಯಾದ್ಯಂತ ವಿಸ್ತರಿಸಿ ಎಲ್ಲರಿಗೂ ಈ ಸೌಲಭ್ಯ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ.
