Featured

ರಾಜ್ಯ ಸರ್ಕಾರದ ವಿರುದ್ಧ ಘರಮ್ ಆದ ಮೈಸೂರು ರಾಜ..ಓದಿ ಈ ವರದಿ

ಯಾವುದೋ ದೇಶಗಳಿಂದ ದಂಡೆತ್ತಿ ಬಂದಿರುವವರ ಜಯಂತಿಯನ್ನು ಆಚರಿಸುವ ನಮ್ಮ ಸರಕಾರಗಳು ನಮ್ಮ ನಾಡಿಗಾಗಿ, ನಮ್ಮ ಜನರಿಗಾಗಿ ಅಮೂಲ್ಯ ಸಾಧನೆಗಳನ್ನು ಮಾಡಿರತಕ್ಕಂತಹ ಮಹನೀಯರನ್ನು ಮರೆತು ಬಿಡುತ್ತವೆ. ನಮ್ಮ ರಾಜ್ಯ ಸರಕಾರ ಈ ಹಿಂದೆ ಹಲವಾರು ಬಾರಿ ಇಂತಹ ಪ್ರಮಾದವನ್ನು ನಡೆಸಿದ್ದು ಈ ಬಾರಿ ಮೈಸೂರಿನ ಮಹಾರಾಜರಾಗಿದ್ದಂತಹ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮಜಯಂತಿಯ ಆಚರಣೆ ಮಾಡದೇ ಅವರನ್ನು ಮರೆತು ಬಿಟ್ಟಿದೆ. ಈ ಕಾರಣಕ್ಕಾಗಿ ರಾಜ್ಯ ಸರಕಾರದ ವಿರುದ್ಧ ಯದುವೀರ್ ಒಡೆಯರ್ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

1919 ಜುಲೈ 18 ರಂದು ಜನಿಸಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮಜಯಂತಿಯಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯದುವೀರ್ ಒಡೆಯರ್ ಅವರು ” ತಮ್ಮ ತಾತನ 99 ನೇ ಜನ್ಮದಿನವನ್ನು ಆಚರಿಸಲು ಸರಕಾರ ಮರೆತಿದ್ದು, ಮುಂದಿನ ವರ್ಷ ಶತಮಾನೋತ್ಸವವನ್ನಾದರೂ ಆಚರಿಸಲು ಇದುವೇ ಸಂದೇಶ” ಎಂದು ಜಯಚಾಮರಾಜೇಂದ್ರ ಒಡೆಯರ್ ರನ್ನು ಮರೆತ ರಾಜ್ಯ ಸರಕಾರದ ವಿರುದ್ಧ ಚಾಟಿ ಬೀಸಿದ್ದಾರೆ. ಇದೇ ಸಂದರ್ಭ ಯದುವೀರ್ ಒಡೆಯರ್ ಅವರು ಮೈಸೂರು ಸಂಸ್ಥಾನಕ್ಕೆ ಒಡೆಯರ್ ರು ನೀಡಿರುವ ಕೊಡುಗೆಗಳ ಮಾಹಿತಿಯನ್ನು ಹೊತ್ತಂತಹ, ರಾಜವಂಶಸ್ತರ ಅಮೂಲ್ಯ ಆಲ್ಬಮ್ ಬಳಸಿ ಸಚಿತ್ರ ವರದಿಯುಳ್ಳಂತಹ ರಾಜವಂಶಸ್ಥರ ಖಾಸಗಿ ಮುಖವಾಣಿ ಗಂಡಬೇರಂಡದ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಹತ್ತು ವರ್ಷಗಳ ಕಾಲ ಮೈಸೂರು ಸಂಸ್ಥಾನವನ್ನು ಆಳ್ವಿಕೆ ನಡೆಸಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಒಡೆಯರ್ ಮೈಸೂರು ಸಂಸ್ಥಾನದ 25 ನೆಯ ಹಾಗೂ ಕೊನೆಯ ಮಹಾರಾಜ ಆಗಿದ್ದವರು. ಕರ್ನಾಟಕ ರಾಜ್ಯ ರಚನೆ ಬಳಿಕ ಇವರು ರಾಜ್ಯಪಾಲರಾಗಿಯೂ ಕಾರುಯನಿರ್ವಹಿಸಿದ್ದರು. ತತ್ತ್ವಜ್ಞಾನಿ. ಸಂಗೀತಜ್ಞ, ರಾಜನೀತಿಜ್ಞ, ಉದಾರ ದಾನಿಯಾಗಿದ್ದ ಇವರು ನಮ್ಮ ನಾಡಿಗೆ ನೀಡಿದ್ದ ಕೊಡುಗೆ ಅಪಾರ. ಕೇಂದ್ರೀಯ ಆಹಾರ ಸಂಶೋಧನಾಲಯ, ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಮುಂತಾದವುಗಳಿಗಾಗಿ ಇವರು ನಿವೇಶನ ಮತ್ತು ಕಟ್ಟಡಗಳನ್ನು ಉದಾರವಾಗಿ ದಾನ ನೀಡಿದ್ದರು. ಇದಲ್ಲದೇ ತಮ್ಮ ಇನ್ನಿತರ ಕಟ್ಟಡ, ನಿವೇಶನಗಳನ್ನು ಸಾರ್ವಜನಿಕ ಉಪಯೋಗಕ್ಕಾಗಿ ದಾನ ಮಾಡಿ ಕೊಡುಗೈ ದಾನಿಯಾಗಿದ್ದರು. ಜಯಚಾಮರಾಜೇಂದ್ರ ಒಡೆಯರ್ ಅವರ ಕಾಲದಲ್ಲಿಯೇ ಮೈಸೂರು ದಸರಾ ಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಹತ್ವ ಬಂದಿತ್ತು. ಇಂತಹ ಮಹಾನ್ ವ್ಯಕ್ತಿಯನ್ನು ನಮ್ಮನ್ನಾಳುತ್ತಿರುವ ಸರಕಾರಗಳು ಮರೆಯುತ್ತಿರುವುದು ನಮ್ಮ ದೌರ್ಭಾಗ್ಯವೇ ಸರಿ.

ಜಾಹಿರಾತು: vyshali Bar& Family Restaurant kaup: 

prop: NAYESH P SHETTY: 9620427036

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago