ರಾಮೇಶ್ವರಂ ಕೆಫೆ ಬ್ಲಾಸ್ಟ್‌ :  ಬಾಂಬರ್‌ನ ಮಾಹಿತಿ ನೀಡಿದವರಿಗೆ  ಭರ್ಜರಿ ಬಹುಮಾನ ಘೋಷಿಸಿದ ಎನ್‌ಐಎ – Vishwanews24

Featured, ರಾಜ್ಯ ನ್ಯೂಸ್

ರಾಮೇಶ್ವರಂ ಕೆಫೆ ಬ್ಲಾಸ್ಟ್‌ :  ಬಾಂಬರ್‌ನ ಮಾಹಿತಿ ನೀಡಿದವರಿಗೆ  ಭರ್ಜರಿ ಬಹುಮಾನ ಘೋಷಿಸಿದ ಎನ್‌ಐಎ

ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ತನ್ನ ತನಿಖೆಯನ್ನು ಇನ್ನಷ್ಟು ಚುರುಕು ಮಾಡಿದೆ. ಬುಧವಾರ ಬಾಂಬರ್‌ನ ಫೋಟೋವನ್ನು ಹಂಚಿಕೊಂಡಿರುವ ಎನ್‌ಐಎ, ಬಾಂಬರ್‌ನ ಬಂಧನಕ್ಕೆ ಕಾರಣವಾಗಬಲ್ಲ ಮಾಹಿತಿ ನೀಡಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ತಿಳಿಸಿದೆ.

ಅದಲ್ಲದೆ, ಮಾಹಿತಿ ನೀಡಿದವರ ವ್ಯಕ್ತಿಯನ್ನು ಗೌಪ್ಯವಾಗಿ ಇಡುವುದಾಗಿ ತಿಳಿಸಿದೆ.ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಐಇಡಿ ಬಳಸಿ ಬಾಂಬ್‌ ಸ್ಫೋಟ ನಡೆಸಿದ ಶಂಕಿತನ ವಿಡಿಯೋಗಳು ಈಗಾಗಲೇ ವೈರಲ್‌ ಆಗಿದೆ. ಈ ವ್ಯಕ್ತಿಯ ಮಾಹಿತಿ ನೀಡಿ, ಆತನ ಬಂಧನಕ್ಕೆ ಕಾರಣವಾದಲ್ಲಿ ಅವರಿಗೆ 10 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ.

ಉಡುಪಿ: ಫ್ರೀ ಯೋಜನೆಗಳ ಜೊತೆ ಬಾಂಬ್ ಫ್ರೀ’ ವಿಡಿಯೋ ವೈರಲ್ ; ಗರಡಿ ಮಜಲು ದಿವಾಕರ್ ಕೋಟ್ಯಾನ್ ವಿರುದ್ಧ ಕೇಸ್‌ ದಾಖಲು – Vishwanews24

ಶಂಕಿತ ಉಗ್ರನ ಮಾಹಿತಿಯನ್ನು 08029510900, 8904241100 ತಿಳಿಸುವಂತೆ ಎನ್‌ಐಎ ತಿಳಿಸಿದ್ದು, ಮಾಹಿತಿ ನೀಡಿದ ವ್ಯಕ್ತಿಯ ಗುರುತನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ನಗರದ ವೈಟ್‌ಫೀಲ್ಡ್‌ ಸನಿಹದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ಚುರುಕುಗೊಳಿಸಿದ್ದು, ಕೆಲವು ಶಂಕಿತರ ಮಾಹಿತಿ ಮೇರೆಗೆ ಬೆಂಗಳೂರು ಮಾತ್ರವಲ್ಲ, ಹೊರ ರಾಜ್ಯಗಳಲ್ಲಿ ಸಹ ಕಾರ್ಯಾಚರಣೆ ನಡೆಸಿದೆ. ಇನ್ನು ಎನ್‌ಐಎ ತಂಡ ಈಗಾಗಲೇ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ಅಪರಾಧ ಸ್ಥಳದ ಪರಿಶೀಲನೆ ನಡೆಸಿದೆ.

ಬಜರಂಗದಳ ಕರ್ನಾಟಕ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತ್ತಡ್ಕ ಪೊಲೀಸ್ ವಶಕ್ಕೆ .. Vishwanews24

 

Leave a Reply