ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ : ಕಾಂಗ್ರೆಸ್ ಘೋಷಣೆ -Vishwanews24
ನವದೆಹಲಿ : ಇಂದು ಅಯೋಧ್ಯೆ ರಾಮ ಮಂದಿರ ಮತ್ತು ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ನಂಬಿಕೆ ಹಾಗೂ ವಿಶ್ವಾಸದಿಂದ ಕೂಡಿದಂತ ತೀರ್ಪಾಗಿದೆ. ಇದು ಯಾವುದೇ ಒಂದು ಗುಂಪಿನ ಪರವಾಗಿ ಬಂದಿರುವ ತೀರ್ಪಲ್ಲ. ಇದು ಸರ್ವ ಧರ್ಮಕ್ಕೂ ಸಂದ ಗೆಲುವಾಗಿದೆ. ಇಂತಹ ತೀರ್ಪನ್ನು ಕಾಂಗ್ರೆಸ್ ಒಪ್ಪಿಕೊಳ್ಳುತ್ತಿದ್ದು, ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿದೆ.
ನವದೆಹಲಿಯಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಮ ಧರ್ಮ ಸಹಿಷ್ಣುತೆಗೆ ಹೆಸರು ವಾಸಿಯಾಗಿದ್ದನು. ವಚನ ಪಾಲನೆ ಹಾಗೂ ತ್ಯಾಗಕ್ಕೂ ಹೆಸರುವಾಸಿ. ಇಂತಹ ರಾಮನ ಮಂದಿರದ ಬಗ್ಗೆ ಉಂಟಾಗಿದ್ದ ವಿವಾದದ ಕುರಿತಂತೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇದು ಸ್ವಾಗತಾರ್ಹವಾಗಿದೆ. ಇದನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದು ಹೇಳಿದರು.
ಇನ್ನೂ ಮುಂದುವರೆದು ಮಾತನಾಡಿದ ಅವರು, ಇಂದು ಸುಪ್ರೀಂ ಕೋರ್ಟ್ ನೀಡಿರುವಂತ ತೀರ್ಪು ಯಾರದ್ದೋ ಒಂದು ಗುಂಪಿನ ಗೆಲುವಾಗಿಲ್ಲ. ಇದು ಸರ್ವ ಧರ್ಮಕ್ಕೂ ಸಂದ ಗೆಲುವಾಗಿದೆ. ಇಂತಹ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸುವುದಲ್ಲದೇ, ರಾಮ ಮಂದಿರ ನಿರ್ಮಾಣಕ್ಕಾಗಿ ಬೆಂಬಲವನ್ನೂ ನೀಡುತ್ತಿದೆ ಎಂದು ಪ್ರಕಟಿಸಿದರು.
