ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ-ಎರ್ಮಾಳು ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸ್ಕೀಂನಡಿ ಒಂದು ಸಾವಿರ ಗಿಡಗಳನ್ನು ನೆಡುವ ಯೋಜನೆಗೆ ಪಡುಬಿದ್ರಿ ಉಪ ವಲಯಾರಣ್ಯಾಧಿಕಾರಿ ನಾಗೇಶ್ ಬಿಲ್ಲವ ಜೂ.5ರಂದು ಚಾಲನೆ : vishwanews24

ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ-ಎರ್ಮಾಳು ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸ್ಕೀಂನಡಿ ಒಂದು ಸಾವಿರ ಗಿಡಗಳನ್ನು ನೆಡುವ ಯೋಜನೆಗೆ ಪಡುಬಿದ್ರಿ ಉಪ ವಲಯಾರಣ್ಯಾಧಿಕಾರಿ ನಾಗೇಶ್ ಬಿಲ್ಲವ ಜೂ.5ರಂದು ಚಾಲನೆ : vishwanews24

ಪಡುಬಿದ್ರಿ:ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಡಾಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ-ಎರ್ಮಾಳು ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸ್ಕೀಂನಡಿ ಒಂದು ಸಾವಿರ ಗಿಡಗಳನ್ನು ನೆಡುವ ಯೋಜನೆಗೆ ವಲಯಾರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ ನಿರ್ದೇಶನದಂತೆ ಪಡುಬಿದ್ರಿ ಉಪ ವಲಯಾರಣ್ಯಾಧಿಕಾರಿ ನಾಗೇಶ್ ಬಿಲ್ಲವ ಜೂ.5ರಂದು ಚಾಲನೆಯನ್ನು ನೀಡಿದರು.
ಬಳಿಕ ಪ್ರತಿಕ್ರಿಯಿಸಿ ಮಾತನಾಡುತ್ತಾ ಸುಮಾರು 4 ವರ್ಷಗಳ ಅವಧಿಯಲ್ಲಿ ಕಾಪು ತಾಲೂಕಿನಾದ್ಯಂತ 30 ಗ್ರಾಮಗಳ ವ್ಯಾಪ್ತಿಯಲ್ಲಿ ನೆಡಲಾಗಿರುವ ಬೇವು, ಬೇಂಗ, ನಾಗಸಂಪಿಗೆ, ಹಲಸು, ಹೆಬ್ಬಲಸು ಸಹಿತ ಇತರೇ ಉಪಯುಕ್ತವಾದ ಹಣ್ಣು ಹಂಪಲು, ಔಷಧೀಯ ಗಿಡಗಳಲ್ಲಿ ಶೇ. 92 ಅಂಶ ಫಲಪ್ರದವಾಗಿದೆ. ಈ ಬಾರಿ ಒಟ್ಟು ಐದು ಸಾವಿರ ಗಿಡಗಳನ್ನು ಸಾರ್ವಜನಿಕರ ಸಹಭಾಗಿತ್ವ ಸಹಿತ ಸರಕಾರದ ವಿವಿಧ ಯೋಜನೆಗಳಡಿಯಲ್ಲಿ ನೆಡಲು ಯೋಜನೆಯನ್ನು ರೂಪಿಸಲಾಗುತ್ತಿದೆ. ಕೃಷಿ ಅರಣ್ಯ ಯೋಜನೆಗೂ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಅರಣ್ಯ ರಕ್ಷಕರ ಪರಿಶ್ರಮವೂ ಅಪಾರವಾಗಿದ್ದು, ಸಾರ್ವಜನಿಕರ ಸಹಕಾರದಿಂದ ಪರಿಸರದ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಪ್ರಮುಖರಾದ ಉದಯ ಕುಮಾರ್, ಗ್ರೆಗೊರಿ ಲೂಯಿಸ್ ಕ್ವಾಡ್ರಸ್, ಅರಣ್ಯ ರಕ್ಷಕರುಗಳಾದ ಅಭಿಲಾಷ್, ಜಯರಾಮ ಶೆಟ್ಟಿ, ಮಂಜುನಾಥ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು

 

Vishwa News 24

Recent Posts

ಮೃತ ಮಹಿಳೆಯರ ಬೆತ್ತಲೆ ಫೋಟೋ ತೆಗೆದು ವಿಕೃತಿ : ವರದಿ ಕೇಳಿದ ರಾಜ್ಯ ಮಹಿಳಾ ಆಯೋಗ – vishwanews24

ಮೃತ ಮಹಿಳೆಯರ ಬೆತ್ತಲೆ ಫೋಟೋ ತೆಗೆದು ವಿಕೃತಿ : ವರದಿ ಕೇಳಿದ ರಾಜ್ಯ ಮಹಿಳಾ ಆಯೋಗ ಬೆಂಗಳೂರು: ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ…

1 day ago

ಉಡುಪಿ: ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ – vishwanews24

ಉಡುಪಿ: ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ಉಡುಪಿ: ಕೇಂದ್ರ ಸರಕಾರದ ಜನವಿರೋಧಿ…

1 day ago

ಮಂಗಳೂರು: ಗಾಯಗೊಂಡ ತಾಯಿ, ಮಗುವನ್ನು ಆಸ್ಪತ್ರೆಗೆ ಸಾಗಿಸಿದ ಬಸ್ ಸಿಬ್ಬಂದಿ; ಮಾನವೀಯತೆಗೆ ಶ್ಲಾಘನೆ – vishwanews24

ಮಂಗಳೂರು: ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದ ತಾಯಿ-ಮಗುವಿನ ರಕ್ಷಣೆಗೆ ಧಾವಿಸಿದ ಸಿಟಿ ಬಸ್ ಸಿಬ್ಬಂದಿ.. ಪ್ರಯಾಣಿಕರನ್ನು ಬಸ್ಸಿನಿಂದ ಇಳಿಸಿ ಗಾಯಗೊಂಡ ತಾಯಿ,…

1 day ago

ಮಂಗಳೂರು – ಸೂರತ್ ವಿಶೇಷ ರೈಲು ಇನ್ನು ಮುಂದೆ ವಾರಕ್ಕೆ ಎರಡು ದಿನ ನಿರಂತರ ಸಂಚಾರ – vishwanews24

ಮಂಗಳೂರು- ಸೂರತ್ ವಿಶೇಷ ರೈಲು ಇನ್ನು ಮುಂದೆ ವಾರಕ್ಕೆ ಎರಡು ದಿನ ನಿರಂತರ ಸಂಚಾರ ಉಡುಪಿ: ಮಂಗಳೂರು- ಸೂರತ್ ನಡುವೆ…

1 day ago

ಕೊಂಕಣ ರೈಲ್ವೇ: ಟಿಕೆಟ್ ತಪಾಸಣೆ ಕಾರ್ಯಾಚರಣೆ; 2025-26ರಲ್ಲಿ 27.68 ಕೋ.ರೂ. ದಂಡ ವಸೂಲಿ – vishwanews24

ಕೊಂಕಣ ರೈಲ್ವೇ: ಟಿಕೆಟ್ ತಪಾಸಣೆ ಕಾರ್ಯಾಚರಣೆ; 2025-26ರಲ್ಲಿ 27.68 ಕೋ.ರೂ. ದಂಡ ವಸೂಲಿ ಉಡುಪಿ: ಟಿಕೆಟ್ ಇಲ್ಲದೆ ಹಾಗೂ ಅನಧಿಕೃತವಾಗಿ…

1 day ago

ಯುವಕ ನಾಪತ್ತೆ : ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು – vishwanews24

ಯುವಕ ನಾಪತ್ತೆ; ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಂಗಳೂರು: 23 ವರ್ಷದ ಯುವಕನೊಬ್ಬ ನಾಪತ್ತೆಯಾಗಿರುವ ಕುರಿತು ಕೊಣಾಜೆ ಪೊಲೀಸ್…

1 day ago