ರಾಹುಲ್‌ ಅವರೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹಿಂದಿರುಗಬೇಕು : ಎಂ.ವೀರಪ್ಪ ಮೊಯ್ಲಿ -Vishwanews24

Featured, ರಾಜ್ಯ ನ್ಯೂಸ್

ರಾಹುಲ್‌ ಅವರೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹಿಂದಿರುಗಬೇಕು : ಎಂ.ವೀರಪ್ಪ ಮೊಯ್ಲಿ -Vishwanews24

ಬೆಂಗಳೂರು,: “ಆಂತರಿಕವಾಗಿ ಚರ್ಚೆಯಾಗಬೇಕಿದ್ದ ಪಕ್ಷದ ಸಮಸ್ಯೆಗಳು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದ್ದು, ಇದರಿಂದ ಪಕ್ಷದ ಕಾರ್ಯಕರ್ತರ ಮಾನಸಿಕ ಸ್ಥೈರ್ಯ ಕುಗ್ಗುತ್ತದೆ” ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಕೊವೀಡ್ ಲಸಿಕೆ ಪಡೆದುಕೊಂಡ ಕೃಷಿ ಸಚಿವ ಬಿ.ಸಿ ಪಾಟೀಲ್ -Vishwanews24

ಜಿ-23 ತಂಡದ ಸದಸ್ಯರು ಫೆ. 27ರಂದು ಕಾಶ್ಮೀರದಲ್ಲಿ ಸಮಾವೇಶ ನಡೆಸಿದ್ದು, ಇದಕ್ಕೆ ಮೊಯ್ಲಿ ಹಾಜರಾಗಿರಲಿಲ್ಲ. ಬಳಿಕ ಗೈರಾಗಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, “ನಾನು ಜಿ-23 ಗುಂಪಿನಿಂದ ದೂರ ಉಳಿಯುತ್ತಿದ್ದೇನೆ” ಎಂದರು.

ಇನ್ನು ಪಕ್ಷದಲ್ಲಿ ಆಗುವ ಭಿನ್ನಾಭಿಪ್ರಾಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, “ರಾಹುಲ್‌ ಅವರೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹಿಂದಿರುಗಬೇಕು” ಎಂದು ಆಗ್ರಹಿಸಿದ್ದಾರೆ.

ಮೋದಿಯವರು ನಿಜವಾದ ‘ಚೌಕಿದಾರ’ರಲ್ಲ , ಬದಲಿಗೆ ಜನಸಾಮಾನ್ಯರ ಪಾಲಿನ ‘ಕೆಟ್ಟ ಗ್ರಹಚಾರ’ :ದಿನೇಶ್ ಗುಂಡೂರಾವ್ -Vishwanews24

“ಸೋನಿಯಾ ಗಾಂಧಿ ಮತ್ತು ರಾಹುಲ್ ಅವರ ನಾಯಕತ್ವಕ್ಕೆ ಸವಾಲು ಎಂದು ವ್ಯಾಖ್ಯಾನಿಸಲಾಗಿದ್ದು, ಅವೆಲ್ಲವು ನಿಜವಲ್ಲ. ನಾವೆಲ್ಲರೂ ಅವರೊಂದಿಗೆ ಇದ್ದೇವೆ ಮತ್ತು ನಾವು ಅವರಿಗೆ ವಿರೋಧಿಯಲ್ಲ” ಎಂದು ಹೇಳಿದ್ದಾರೆ.

“ಜಮ್ಮುವಿನಲ್ಲಿ ನಡೆದ ಜಿ -23 ಸಭೆ ಇತ್ತೀಚೆಗೆ ರಾಜ್ಯಸಭಾ ಸದಸ್ಯರಾಗಿ ನಿವೃತ್ತರಾದ ಗುಲಾಮ್ ನಬಿ ಆಜಾದ್ ಅವರನ್ನು ಸನ್ಮಾನಿಸಲು ಆಯೋಜಿಸಲಾಗಿತ್ತು” ಎಂದು ತಿಳಿಸಿದ್ದಾರೆ.

ಮಂಗಳೂರು :ಐಷಾರಾಮಿ ಕಾರು ಮಾರಾಟ ಪ್ರಕರಣ : ಮತ್ತಿಬ್ಬರು ಪೊಲೀಸರ ಅಮಾನತು -Vishwanews24