ರಿಯಾದ್: ಬ್ರಿಡ್ಜ್ ಗೆ ಢಿಕ್ಕಿ ಹೊಡೆದು ಬಸ್ ಪಲ್ಟಿ: 20 ಉಮ್ರಾ ಯಾತ್ರಾರ್ಥಿಗಳು ಮೃತ್ಯು – Vishwanews24
ರಿಯಾದ್: ಬ್ರಿಡ್ಜ್ ಗೆ ಢಿಕ್ಕಿ ಹೊಡೆದು ಬಸ್ ಪಲ್ಟಿ: 20 ಉಮ್ರಾ ಯಾತ್ರಾರ್ಥಿಗಳು ಮೃತ್ಯು
ರಿಯಾದ್: ಉಮ್ರಾ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಪಲ್ಟಿಯಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ 20 ಮಂದಿ ಪ್ರಯಾಣಿಕರು ಮೃತಪಟ್ಟು, ಹತ್ತಾರು ಮಂದಿ ಗಾಯಗೊಂಡಿರುವ ಘಟನೆ ಸೌದಿ ಅರೇಬಿಯಾದ ಅಸಿರ್ ಗವರ್ನರೇಟ್ನ ಅಕಾಬಾ ಶಾರ್ ನಲ್ಲಿ ಸೋಮವಾರ ( ಮಾ.27 ರಂದು) ನಡೆದಿರುವುದು ವರದಿಯಾಗಿದೆ.
ಉಮ್ರಾ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಸೌದಿ ಅರೇಬಿಯಾದ ಅಸಿರ್ ಗವರ್ನರೇಟ್ನ ಅಕಾಬಾ ಶಾರ್ ನಲ್ಲಿ ಬ್ರಿಡ್ಜ್ ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ, ಪಲ್ಟಿಯಾದ ಕಾರಣ ಬಸ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಕನಿಷ್ಠ 20 ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. ಉಳಿದ 29 ಮಂದಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ನಿಮ್ಮ ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗಿದೆಯೇ ಎಂದು ಚೆಕ್ ಮಾಡಿ – ಲಿಂಕ್ ಇಲ್ಲಿದೆ – Vishwanews24
ಬಸ್ಸಿನ ಬ್ರೇಕ್ ಫೇಲ್ ಆದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಬಸ್ ನಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಸೇರಿದಂತೆ ಪ್ರಾಥಮಿಕ ಮಾಹಿತಿಯ ಪ್ರಕಾರ ಓರ್ವ ಭಾರತೀಯ ಇದ್ದರೆಂದು ತಿಳಿದು ಬಂದಿದೆ.
