ಮಂಡ್ಯ: ಸಿನಿಮಾದಲ್ಲಿ ನಾನು ಮಾಡಿದ ಪಾತ್ರದಂತೆ ರಾಜಕೀಯದಲ್ಲೂ ನನಗೆ ಅಭಿಮನ್ಯು ಪಾತ್ರ ಮಾಡಿಸಿ ಬಿಟ್ಟಿದ್ದಾರೆ ಎಂದು ಎದುರಾಳಿಗಳ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ವಿಧಾನಪರಿಷತ್ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ರೈತ ಸಂಘ, ಕಾಂಗ್ರೆಸ್, ಬಿಜೆಪಿ ಎಲ್ಲಾ ಸೇರಿ ಸಂಚು ಮಾಡಿ ನನ್ನನ್ನು ಸೋಲಿಸಿದರು. ಈ ಮೂಲಕ ಕುಮಾರಣ್ಣನ ನಾಯಕತ್ವದ ಮೇಲೆ ಪ್ರಶ್ನೆ ತರುವಂತೆ ಮಾಡಿದರು. ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು. ನನಗೆ ರಾಜಕೀಯದಲ್ಲಿ ತಂದೆಯ ಹೆಸರಿನಲ್ಲಿ ಸ್ಥಾನಮಾನ ಬೇಕೆಂಬ ಹುಚ್ಚು ಇಲ್ಲ. ಜೆಡಿಎಸ್‍ನ ಎಲ್ಲ ಶಾಸಕರು, ಸಂಸದರು ಮತ್ತು ಪಕ್ಷದ ಕಾರ್ಯಕರ್ತರ ಮಾತಿನ ಮೇರೆಗೆ ಚುನಾವಣೆಗೆ ನಿಂತಿದ್ದೆ ನನಗೆ ಸೋಲಾಗಿತ್ತು. ಆ ದುಖಃವನ್ನು ಹೋಗಲಾಡಿಸಲು ಮತ್ತೊಂದು ಅವಕಾಶ ಬಂದಿದೆ. ಎಂಎಲ್‍ಸಿ ಚುನಾವಣೆಯಲ್ಲಿ ಅಪ್ಪಾಜಿಗೌಡ ಅವರನ್ನು ಗೆಲ್ಲಿಸುವ ಹೊಣೆ ನನ್ನ ಮೇಲೆ ಇದೆ. ಎಲ್ಲರೂ ಸಹಕರಿಸಿ ಅಪ್ಪಾಜಿಗೌಡರನ್ನು ಗೆಲ್ಲಿಸೋಣ ಎಂದು ಕರೆ ನೀಡಿದರು.
ಈ ವಿಧಾನಪರಿಷತ್ ಚುನಾವಣೆ 2023ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಆಗಬೇಕು. ಕುರುಕ್ಷೇತ್ರ ಸಿನಿಮಾದಲ್ಲಿ ನಾನಗೆ ಅಭಿಮನ್ಯು ಪಾತ್ರ ಮಾಡಿ ಅಭ್ಯಸವಿದೆ. ಇದೀಗ ರಾಜಕೀಯದಲ್ಲೂ ನನಗೆ ಅಭಿಮನ್ಯು ಪಾತ್ರ ಮಾಡಿಸಿ ಬಿಟ್ಟಿದ್ದಾರೆ. ಅಪ್ಪಾಜಿ ಗೌಡರಂತಹ ಒಳ್ಳೆಯ ಅಭ್ಯರ್ಥಿಯನ್ನು ಈ ಬಾರಿ ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿಮಾಡಿಕೊಂಡರು.
ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ ಉಡುಪಿ:…
ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ ಉಡುಪಿ: ಸ್ವಯಂ ಚಾಲಿತ…
ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ ಹೆಬ್ರಿ: ಪುವಾಸಿ ತಾಣವಾದ ಕೂಡು ಫಾಲ್ಸ್ ಪುವೇಶಕ್ಕೆ ಅರಣ್ಯ…
ಉಡುಪಿ : ವ್ಯಕ್ತಿ ನಾಪತ್ತೆ ಉಡುಪಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬ…
ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ ಕೊಲ್ಕತ್ತಾ: ಪಶ್ಚಿಮ…
ಉಡುಪಿ : ಜು. 10 ರಂದು ನೇರ ಸಂದರ್ಶನ ಉಡುಪಿ : ಉಡುಪಿಯ ವಿ.ಪಿ ನಗರದ ಸುಧಾ ಫರ್ನೀರ‍್ಸ್ ಬಿಲ್ಡಿಂಗ್s…