ರೈಲು ಹೊರಡುವ 8 ಗಂಟೆ ಮುಂಚೆ ಟಿಕೆಟ್ ರದ್ದು ಮಾಡಿದರೆ ರೀಫಂಡ್ ಸಿಗಲ್ಲ.
ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಇನ್ಮುಂದೆ ಆಧಾರ್ OTP ಕಡ್ಡಾಯ.
ಬೋರ್ಡಿಂಗ್ ಪಾಯಿಂಟ್ ಬದಲಾಯಿಸಲು 30 ನಿಮಿಷದವರೆಗೆ ಅವಕಾಶ.
ನವದೆಹಲಿ : ಭಾರತೀಯ ರೈಲ್ವೆಯ ಟಿಕೆಟ್ ಬುಕ್ಕಿಂಗ್ ಮತ್ತು ರದ್ದತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಹಾಗೂ ಕೊನೆಯ ಕ್ಷಣದ ರದ್ದತಿಗಳನ್ನು ನಿಯಂತ್ರಿಸಲು ರೈಲ್ವೆ ಇಲಾಖೆಯು ಇಂದಿನಿಂದ (ಏಪ್ರಿಲ್ 1, 2026) ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಹೊಸ ನಿಯಮದ ಪ್ರಕಾರ, ರೈಲು ಹೊರಡುವ 8 ಗಂಟೆಗಳ ಮೊದಲು ಟಿಕೆಟ್ ರದ್ದು ಮಾಡಿದರೆ ಮಾತ್ರ ಹಣ ಮರಳಿ ಪಡೆಯಲು ಸಾಧ್ಯವಾಗಲಿದ್ದು, ಪ್ರಯಾಣಿಕರು ಸಮಯದ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು ಅಗತ್ಯವಾಗಿದೆ.
8 ಗಂಟೆಯ ಕಟ್ಟುನಿಟ್ಟಿನ ನಿಯಮ
ಹೊಸ ನಿಯಮದ ಅನ್ವಯ, ರೈಲು ಹೊರಡುವ ನಿಗದಿತ ಸಮಯಕ್ಕೆ 8 ಗಂಟೆಗಳಿಗಿಂತ ಕಡಿಮೆ ಅವಧಿ ಇರುವಾಗ ಕನ್ಫರ್ಮ್ ಆದ ಟಿಕೆಟ್‌ಗಳನ್ನು ರದ್ದು ಮಾಡಿದರೆ ಯಾವುದೇ ಮರುಪಾವತಿ ಸಿಗುವುದಿಲ್ಲ. ಈ ಹಿಂದೆ ಇದು 4 ಗಂಟೆಗಳ ಮಿತಿಯನ್ನು ಹೊಂದಿತ್ತು. ಸೀಟುಗಳ ದುರ್ಬಳಕೆ ತಡೆಯಲು ಮತ್ತು ವೇಟಿಂಗ್ ಲಿಸ್ಟ್‌ನಲ್ಲಿರುವ ಪ್ರಯಾಣಿಕರಿಗೆ ಸಕಾಲದಲ್ಲಿ ಸೀಟು ಲಭ್ಯವಾಗುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ:
ಪರಿಷ್ಕೃತ ರೀಫಂಡ್ ದರಗಳು ಹೀಗಿವೆ:
ಟಿಕೆಟ್ ರದ್ದು ಮಾಡುವ ಸಮಯಕ್ಕೆ ಅನುಗುಣವಾಗಿ ಕಡಿತವಾಗುವ ಮೊತ್ತದ ವಿವರ ಇಲ್ಲಿದೆ:
ಪ್ರಯಾಣಕ್ಕೆ 72 ಗಂಟೆಗಳ ಮೊದಲು: ಕೇವಲ ನಿಗದಿತ ಕ್ಲರಿಕಲ್ ಶುಲ್ಕವನ್ನು ಮಾತ್ರ ಕಡಿತಗೊಳಿಸಿ ಉಳಿದ ಪೂರ್ಣ ಹಣ ಮರುಪಾವತಿ ಮಾಡಲಾಗುತ್ತದೆ.
72 ರಿಂದ 24 ಗಂಟೆಗಳ ಒಳಗೆ: ಒಟ್ಟು ಟಿಕೆಟ್ ದರದಲ್ಲಿ 25% ಮೊತ್ತವನ್ನು ಕಡಿತಗೊಳಿಸಲಾಗುತ್ತದೆ.
24 ರಿಂದ 8 ಗಂಟೆಗಳ ಒಳಗೆ: ಒಟ್ಟು ಟಿಕೆಟ್ ದರದಲ್ಲಿ 50% ರಷ್ಟು ಭಾರಿ ಕಡಿತವಾಗಲಿದೆ.
8 ಗಂಟೆಗಿಂತ ಕಡಿಮೆ ಅವಧಿ: ಯಾವುದೇ ಹಣ ಮರಳಿ ಸಿಗುವುದಿಲ್ಲ
ತತ್ಕಾಲ್ ಮತ್ತು ವೇಟಿಂಗ್ ಲಿಸ್ಟ್ ನಿಯಮಗಳು
ಕನ್ಫರ್ಮ್ ತತ್ಕಾಲ್ ಟಿಕೆಟ್: ಎಂದಿನಂತೆ ಕನ್ಫರ್ಮ್ ಆದ ತತ್ಕಾಲ್ ಟಿಕೆಟ್‌ಗಳ ರದ್ದತಿಗೆ ಯಾವುದೇ ರೀಫಂಡ್ ಲಭ್ಯವಿರುವುದಿಲ್ಲ.
RAC ಮತ್ತು ವೇಟಿಂಗ್ ಲಿಸ್ಟ್: ಇವುಗಳಿಗೆ ಅಲ್ಪ ಸಡಿಲಿಕೆ ನೀಡಲಾಗಿದ್ದು, ರೈಲು ಹೊರಡುವ 30 ನಿಮಿಷಗಳ ಮೊದಲು ರದ್ದುಗೊಳಿಸಿದರೆ ಕ್ಲರಿಕಲ್ ಶುಲ್ಕ ಕಡಿತಗೊಳಿಸಿ ಹಣ ನೀಡಲಾಗುತ್ತದೆ.
ಇದನ್ನೂ ಓದಿ:
ಇತರ ಪ್ರಮುಖ ಬದಲಾವಣೆಗಳು
ಕೇವಲ ರದ್ದತಿ ಮಾತ್ರವಲ್ಲದೆ, ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ಹೊಸ ತಾಂತ್ರಿಕ ಬದಲಾವಣೆಗಳನ್ನೂ ತರಲಾಗಿದೆ:
ಡಿಜಿಟಲ್ ಬೋರ್ಡಿಂಗ್ ಬದಲಾವಣೆ: ಪ್ರಯಾಣಿಕರು ರೈಲು ಹೊರಡುವ 30 ನಿಮಿಷಗಳ ಮುಂಚಿತವಾಗಿ ತಮ್ಮ ಬೋರ್ಡಿಂಗ್ ಪಾಯಿಂಟ್ ಅನ್ನು ಆನ್‌ಲೈನ್ ಮೂಲಕ ಬದಲಾಯಿಸಿಕೊಳ್ಳಬಹುದು.
ಕ್ಲಾಸ್ ಅಪ್‌ಗ್ರೇಡ್ ಸೌಲಭ್ಯ: ಖಾಲಿ ಇರುವ ಸೀಟುಗಳ ಆಧಾರದ ಮೇಲೆ ಕೌಂಟರ್ ಟಿಕೆಟ್ ಹೊಂದಿರುವವರೂ ಸಹ ಕೊನೆಯ ಕ್ಷಣದಲ್ಲಿ ಪ್ರಯಾಣದ ದರ್ಜೆಯನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ವಂದೇ ಭಾರತ್ ವಿಶೇಷ ನಿಯಮ: ವಂದೇ ಭಾರತ್ ಸ್ಲೀಪರ್ ಮತ್ತು ಅಮೃತ್ ಭಾರತ್ ರೈಲುಗಳಲ್ಲಿ ಈಗಾಗಲೇ ಈ 8 ಗಂಟೆಯ ನಿಯಮವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಇಂದು ಅದು ಅಧಿಕೃತವಾಗಿ ಎಲ್ಲಾ ರೈಲುಗಳಿಗೂ ಅನ್ವಯವಾಗಲಿದೆ.
ಸಾರ್ವಜನಿಕರಿಗೆ ಸಲಹೆ:
ಪ್ರಯಾಣಿಕರು ಕೊನೆಯ ಕ್ಷಣದ ಗೊಂದಲ ಮತ್ತು ಹಣಕಾಸಿನ ನಷ್ಟ ತಪ್ಪಿಸಲು ಪ್ರಯಾಣದ ಯೋಜನೆ ಬದಲಾದಲ್ಲಿ ಕನಿಷ್ಠ 24 ಗಂಟೆಗಳ ಮೊದಲೇ ಟಿಕೆಟ್ ರದ್ದು ಮಾಡುವುದು ಸೂಕ್ತ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಇದನ್ನೂ ಓದಿ:
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…
ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…